Juliet 2.Film News

Wednesday, February 15, 2023

113

ಮನಸೂರೆಗೊಳ್ಳುತ್ತಿರುವ ಜೂಲಿಯೆಟ್- ಟ್ರೇಲರ್

      ಉತ್ತಮ ಅಂಶಗಳನ್ನು ಒಳಗೊಂಡಿರುವ ‘ಜೂಲೆಯಟ್-೨’ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡು ಎಲ್ಲಾ ಕಡೆಗಳಿಂದಲೂ ಪ್ರಶಂಸೆಗಳು ಬರುತ್ತಿದೆ. ‘ಪ್ರೇಮಂಪೂಜ್ಯಂ’ ಖ್ಯಾತಿಯ ಬೃಂದಾಆಚಾರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿರಾಟ್.ಬಿ.ಗೌಡ ನಿರ್ದೇಶನ ಮಾಡಿದ್ದು, ಲಿಖಿತ್.ಆರ್.ಕೋಟ್ಯಾನ್ ಬಂಡವಾಳ ಹೂಡಿದ್ದಾರೆ.

ತೊಂದರೆಗೆ ಸಿಲುಕಿದ ಹೆಣ್ಣು ಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ. ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ ಆಗಬೇಕು. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಹೇಳ ಹೊರಟಿದೆ. ಜತೆಗೆ ಅಪ್ಪ ಮಗಳ ಬಾಂಧ್ಯವದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ಬೆಳ್ತಂಗಡಿ ಬಳಿಯ ಪಶ್ಚಿಮಘಟ್ಟದ ಕಾಡೊಂದರಲ್ಲಿ ಚಿತ್ರೀಕರಣ ನಡೆಸಲಾಗಿದೆ.

      ತಾರಗಣದಲ್ಲಿ ಶ್ರೀಕಾಂತ್,ರಾಯ್, ಅನೂಪ್‌ಸಾಗರ್, ಖುಷ್‌ಆಚಾರ್ಯ, ರವಿ, ರಾಧೇಶ್‌ಶಣೈ ಮುಂತಾದವರು ಅಭಿನಯಿಸಿದ್ದಾರೆ. ಹಿನ್ನಲೆ ಶಬ್ದ ಸಚಿನ್‌ಬಸ್ರೂರ್, ಛಾಯಾಗ್ರಹಣ ಶ್ಯಾಂಟೋ.ವಿ.ಅಂಟೋ ಅವರದಾಗಿದೆ. ಅಂದಹಾಗೆ ಚಿತ್ರವು ಫೆಬ್ರವರಿ ೨೪ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,