Cinebazzar.news.

Wednesday, February 15, 2023

133

 

*"ಸಿನಿ ಬಜಾರ್" ಇದು ನಿರ್ಮಾಪಕರ ಸ್ನೇಹಿ ಓಟಿಟಿ.*

 

ತಂತ್ರಜ್ಞಾನ ಮುಂದುವರಿದ ಹಾಗೆ ಜೀವನ‌ಶೈಲಿ ಕೂಡ ಬದಲಾಗುತ್ತಿದೆ. ಜನರಿಗೆ ಆಧುನಿಕ ತಂತ್ರಜ್ಞಾನದಿಂದ ಸಾಕಷ್ಟು ಅನುಕೂಲವಾಗುತ್ತಿದೆ. ಇಂತಹುದೇ ವಿಶೇಷ ತಂತ್ರಜ್ಞಾನವುಳ್ಳ "ಸಿನಿಬಜಾರ್" ಎಂಬ ಓಟಿಟಿ ಬಿಡುಗಡೆಯಾಗಿದ್ದು, ಈ ಓಟಿಟಿ ಮೂಲಕ ವಿಶ್ವದ ಅನೇಕ ರಾಷ್ಟ್ರಗಳ ಜನರು ತಮ್ಮ ನೆಚ್ಚಿನ ಸಿನಿಮಾಗಳನ್ನು ತಾವು ಇದ್ದಲ್ಲಿಯೇ ನೋಡಬಹುದು. ಇದರಿಂದ ನಿರ್ಮಾಪಕರಿಗೆ ಹೆಚ್ಚು ಅನುಕೂಲವಾಗಲಿದೆ. ಇತ್ತೀಚಿಗೆ "ಸಿನಿಬಜಾರ್" ಓಟಿಟಿ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

 

"ಸಿನಿಬಜಾರ್" ಓಟಿಟಿಯಲ್ಲಿ ಪ್ರತಿ ಶುಕ್ರವಾರ ಸಿನಿಮಾಗಳು ಫ್ಯಾನ್ ವಲ್ಡ್ ವಿಶ್ವದ 177 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಈ ಆಪ್ ಮೂಲಕ ಪ್ರಪಂಚದೆಲ್ಲೆಡೆ ಇರುವ ಸಿನಿಪ್ರೇಮಿಗಳು ತಮ್ಮ ನೆಚ್ಚಿನ ಸಿನಿಮಾಗಳನ್ನು ನೋಡಬಹುದು. ಟಿವಿ, ಮೊಬೈಲ್, ಇಂಟರ್ ನೆಟ್ ಹಾಗೂ ವೆಬ್ ಸೈಟ್ ನಲ್ಲಿ ಈ ಆಪ್ ದೊರಕುತ್ತದೆ.  No ads & no subscription ಇಲ್ಲದೆ ಕೋಟ್ಯಾಂತರ ಜನರು ಏಕಕಾಲಕ್ಕೆ ಚಿತ್ರಗಳನ್ನು ನೋಡಬಹುದು.

 ಟಿಕೆಟ್ ಬೆಲೆ ಕೂಡ 10 ರಿಂದ 25 ರೂಪಾಯಿ ಒಳಗೆ ಇರುತ್ತದೆ. ಈ ಆಪ್ ನಿರ್ಮಾಪಕರುಗಳಿಗೆ ಹೆಚ್ಚಿನ ಆದಾಯದಾಯಕವಾಗಿರುತ್ತದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ ಈ ಆಪ್ ನಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿರುತ್ತದೆ. ಆಸಕ್ತಿಯಿರುವ ನಿರ್ಮಾಪಕರು ನೇರವಾಗಿ ಕೂಡ ಈ ಆಪ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡಬಹುದು. ಸ್ಕ್ಯಾನ್ ಮಾಡುವ ಮೂಲಕ ಚಿತ್ರಗಳನ್ನು ವೀಕ್ಷಿಸಬಹುದು ಎಂದು ಮುಖ್ಯಸ್ಥ ಭಾಸ್ಕರ್ ವೆಂಕಟೇಶ್ ಮಾಹಿತಿ ನೀಡಿದರು.

ನನಗೆ ಭಾಸ್ಕರ್ ವೆಂಕಟೇಶ್ ಅವರು ಲಾಕ್ ಡೌನ್ ಸಮಯದಲ್ಲಿ ಈ ಓಟಿಟಿ ಬಗ್ಗೆ ಹೇಳಿದರು. ಅವರು ಹೇಳಿದ ಹಾಗೆ ಇದರಿಂದ ನಿರ್ಮಾಪಕರಿಗೆ ಅನುಕೂಲವಾಗಬಹುದು ಎಂದು ನನಗೂ ಅನಿಸಿತು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹೇಳಿದರು.

 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ "ಸಿನಿಬಜಾರ್" ಗೆ ಶುಭ ಕೋರಿದರು.

ಆಪ್ ಡೆವಲಪ್ ಮಾಡಿರುವ ತಂತ್ರಜ್ಞರು ಸಹ ಹೆಚ್ಚಿನ ಮಾಹಿತಿ  ನೀಡಿದರು.

 

ಡಾ||ರಾಜಕುಮಾರ್ ಅಭಿನಯದ ಸೂಪರ್ ಹಿಟ್ ಚಿತ್ರ "ಭಾಗ್ಯವಂತರು" ಈ ಓಟಿಟಿಯ ಮೊದಲ ಚಿತ್ರವಾಗಿ ಬರಲಿದೆ. "ಪಂಪ", " ಕಾಕ್ಟೈಲ್ ", "ಗುರ್ಬಿ" ಮುಂತಾದ ಚಿತ್ರಗಳ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಈ ಆಪ್ ನ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆಯಾ ಸಿನಿಮಾಗೆ ಸಂಬಂಧಿಸಿದ ಪ್ರಮುಖರು ಈ ಆಪ್ ನ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,