Kabzaa.Film News

Sunday, March 12, 2023

148

ಚಂದ್ರು ಕನಸು ಕಾಣುವುದನ್ನು ನನಸು ಮಾಡಿಕೊಳ್ತಾರೆಉಪೇಂದ್ರ

       ‘ಕಬ್ಜ’ ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಮೊನ್ನೆ ನಾಯಕ ಉಪೇಂದ್ರ ಮಾದ್ಯಮದವನ್ನು ಭೇಟಿ ಮಾಡಿ ಚಂದ್ರು ಪರ ಒಂದಷ್ಟು ಹೊಗಳಿ ಸಿನಿಮಾ ಕುರಿತಂತೆ ಮತ್ತಷ್ಟು ಮಾಹಿತಿ ಹರಿಬಿಟ್ಟರು.

       ನಾನು ನಟಿಸಿದ್ದರೂ ಆರ್.ಚಂದ್ರು ಕನಸಿನ ಕೂಸು. ನಿರ್ದೇಶನದ ವಿಷಯದಲ್ಲಿ ನಾನು ಕೈ ತೂರಿಸಿಲ್ಲ. ಅವರು ಎಷ್ಟು ದೊಡ್ಡ ಮಟ್ಟದಲ್ಲಿ ಕನಸು ಕಂಡರೋ ಅಷ್ಟೇ ಪ್ರಮಾಣದಲ್ಲಿ ಸಿನಿಮಾ ಮಾಡಿ ತೋರಿಸಿದ್ದಾರೆ. ಪ್ರಚಾರ ಕಾರ್ಯವನ್ನು ಅದ್ದೂರಿಯಾಗಿ  ಮಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಸುದೀಪ್ ಬಂದರು. ನಂತರ ಶಿವರಾಜ್‌ಕುಮಾರ್ ಜೊತೆಯಾದರು. ಹೀಗೆ ಇದರಲ್ಲಿ ಹಲವು ವಿಶೇಷತೆಗಳು ಕೂಡಿದೆ. ಬಾಂಬೆ, ಚೆನ್ನೈ, ಹೈದಾರಬಾದ್ ಎಲ್ಲಾ ಕಡೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಾಂಬೆನ ಆನಂದ್ ಪಂಡಿತ್ ಅವರೊಂದಿಗೆ ಬೈಕ್ ಶೋ, ಸುದೀಪ್ ಅವರ ಸಹಕಾರವನ್ನು ಮರೆಯಲಿಕ್ಕೆ ಆಗುವುದಿಲ್ಲ.

       ಪ್ರಾರಂಭದಲ್ಲಿ ಒಂದು ಭಾಷೆ ಅಂದುಕೊಂಡರೂ ಮುಂದೆ ತನ್ನಷ್ಟಕ್ಕೆ ತಾನೆ ಪ್ಯಾನ್ ಇಂಡಿಯಾಗೆ ತೆಗೆದುಕೊಂಡು ಹೋಯಿತು. ಎಲ್ಲಾ ಭಾಷೆಗೂ ಡಬ್ ಆಗಿ ಕನ್ನಡದ ಹಿರಿಮೆಯನ್ನು ಎತ್ತಿ ತೋರಿಸಿದೆ. ಶೂಟಿಂಗ್ ವೇಳೆಯಲ್ಲಿ ಬಹಳ ಕಷ್ಟಪಟ್ಟಿದ್ದೇವೆ. ಧೂಳು ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆದರೆ ಇಂದು ಪರದೆ ಮೇಲೆ ನೋಡಿದಾಗ ಇವೆಲ್ಲ್ಲವು ಮರೆತು ಹೋಗುವಂತೆ ಮಾಡಿದೆ. ನಾಯಕಿ ಶ್ರೀಯಾಶರಣ್ ಚೆನ್ನಾಗಿ ಅಭಿನಯಿಸಿದ್ದಾರೆ. ರವಿಬಸ್ರೂರು ಸಂಗೀತ ಸೂಪರ್ ಆಗಿದೆ. ನಮ್ಮ ಕೆಲಸ ಮುಗಿದಿದೆ. ಇನ್ನೆನಿದ್ದರೂ ನೀವುಗಳು ಚಿತ್ರವನ್ನು ನೋಡಿ ಅಭಿಪ್ರಾಯ ತಿಳಿಸಬೇಕೆಂದು ಕೋರಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,