Kabzaa.Pre Release Event

Tuesday, March 14, 2023

152

ಕಬ್ಜ ಅಂತಿಮ ಪ್ರಚಾರದಲ್ಲಿ ಸ್ಟಾರ್ ಕಲಾವಿದರು

       ‘ಕಬ್ಜ’ ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಕೊನೆ ಹಂತದ ಪ್ರಿ ಇವೆಂಟ್ ಕಾರ್ಯಕ್ರಮವು ಪಂಚತಾರ ಹೋಟೆಲ್‌ದಲ್ಲಿ ಅದ್ದೂರಿಯಾಗಿ ನಡೆಯಿತು.

       ನಾನು ನಟಿಸಿದ್ದರೂ ಆರ್.ಚಂದ್ರು ಕನಸಿನ ಕೂಸು. ನಿರ್ದೇಶನದ ವಿಷಯದಲ್ಲಿ ನಾನು ಕೈ ತೂರಿಸಿಲ್ಲ. ಅವರು ಎಷ್ಟು ದೊಡ್ಡ ಮಟ್ಟದಲ್ಲಿ ಕನಸು ಕಂಡರೋ ಅಷ್ಟೇ ಪ್ರಮಾಣದಲ್ಲಿ ಸಿನಿಮಾ ಮಾಡಿ ತೋರಿಸಿದ್ದಾರೆ. ಪ್ರಚಾರ ಕಾರ್ಯವನ್ನು ಅದ್ದೂರಿಯಾಗಿ  ಮಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಸುದೀಪ್ ಬಂದರು. ನಂತರ ಶಿವರಾಜ್‌ಕುಮಾರ್ ಜೊತೆಯಾದರು. ಹೀಗೆ ಇದರಲ್ಲಿ ಹಲವು ವಿಶೇಷತೆಗಳು ಕೂಡಿದೆ. ಬಾಂಬೆ, ಚೆನ್ನೈ, ಹೈದಾರಬಾದ್ ಎಲ್ಲಾ ಕಡೆಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಾಂಬೆನ ಆನಂದ್ ಪಂಡಿತ್ ಅವರೊಂದಿಗೆ ಬೈಕ್ ಶೋ, ಸುದೀಪ್ ಅವರ ಸಹಕಾರವನ್ನು ಮರೆಯಲಿಕ್ಕೆ ಆಗುವುದಿಲ್ಲ ಅಂತ ಚಿತ್ರೀಕರಣ ಅನುಭವಗಳನ್ನು ನಾಯಕ ಉಪೇಂದ್ರ ಹಂಚಿಕೊಂಡರು.

ಪ್ರಾರಂಭದಲ್ಲಿ ಒಂದು ಭಾಷೆ ಅಂದುಕೊಂಡರೂ ಮುಂದೆ ತನ್ನಷ್ಟಕ್ಕೆ ತಾನೆ ಪ್ಯಾನ್ ಇಂಡಿಯಾಗೆ ತೆಗೆದುಕೊಂಡು ಹೋಯಿತು. ಎಲ್ಲಾ ಭಾಷೆಗೂ ಡಬ್ ಆಗಿ ಕನ್ನಡದ ಹಿರಿಮೆಯನ್ನು ಎತ್ತಿ ತೋರಿಸಿದೆ ಅಂತಾರೆ ನಿರ್ಮಾಪಕ ಮತ್ತು ನಿರ್ದೇಶಕ ಆರ್.ಚಂದ್ರು.

       ಸಮಾರಂಭದಲ್ಲಿ ಸುದೀಪ್, ನಾಯಕಿ ಶ್ರೀಯಾಶರಣ್, ತಾನ್ಯಹೋಪ್, ನೆನಪಿರಲಿ ಪ್ರೇಮ್, ಧನಂಜಯ್ ಮುಂತಾದ ಗಣ್ಯರು ಆಗಮಿಸಿದ್ದು. ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬ ಮಾರ್ಚ್ ೧೭ರಂದು ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,