Salaga.Film Pooja and Press Meet.

Thursday, June 06, 2019

31

ವಿಜಯ್ ಚಿತ್ರಕ್ಕೆ ಸುದೀಪ್ ಶುಭಹಾರೈಕೆ

          ನಟನಾಗಿ ಗುರುತಿಸಿಕೊಂಡಿದ್ದ ದುನಿಯಾವಿಜಯ್ ‘ಸಲಗ’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಕತೆ,ಚಿತ್ರಕತೆ ಬರೆದಿರುವುದು ವಿಶೇಷ. ನಡೆದಿದ್ದೇ ದಾರಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ.  ಬಂಡಿ ಕಾಳಮ್ಮ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಸುದೀಪ್  ಮೊದಲ  ದೃಶ್ಯಕ್ಕೆ ಕ್ಲಾಪ್ ಮಾಡಿದರು.  ನಂತರ ಮಾತನಾಡುತ್ತಾ ವಿಜಯ್ ಹಳೇ ಪರಿಚಯವಾಗಿದ್ದು ಅವರ ಕಷ್ಟದ ದಿನಗಳಿಂದಲೂ ನೋಡುತ್ತಾ ಬಂದಿರುತ್ತೇನೆ. ನಿರ್ದೇಶಕನಾಗುವುದರ ಮೂಲಕ ಸರಿಯಾದ ದಾರಿಗೆ ಬಂದಿದ್ದಾರೆ. ಪ್ರತಿಯೊಬ್ಬ ನಿರ್ದೇಶಕನ ಹಿಂದೆ ಕಲಾವಿದ ಇರುವಂತೆ, ಪ್ರತಿಯೊಬ್ಬ ಕಲಾವಿದನ ಹಿಂದೆ ನಿರ್ದೇಶಕ ಇರುತ್ತಾನೆ. ಎಲ್ಲಿವರೆಗೂ ಅದನ್ನು ತೋರಿಸುವ ಧೈರ್ಯ ಇರುತ್ತದೆಯೋ ಅಲ್ಲಿಯವರರೆಗೂ ಸಕ್ಸಸ್ ಕಾಣುತ್ತಾರೆ. ಡೈರಕ್ಟರ್ ಕ್ಯಾಪ್ ಹಾಕಿಕೊಂಡರೆ ಜವಬ್ದಾರಿ ಇರುತ್ತದೆ.  ಅದನ್ನು ಸರಿಯಾಗಿ ನಿಭಾಯಿಸುತ್ತಾರೆಂಬ ನಂಬಿಕೆ ಇದೆ. ಶ್ರೀಕಾಂತ್ ತಮ್ಮ ಇದ್ದಂಗೆ, ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಅಣ್ಣ-ತಮ್ಮಂದಿರು ಇರುವುದರಿಂದ ಸಹಕಾರ ಸಿಗುತ್ತದೆ. ಟಗರುದಂಥ ಯಶಸ್ವಿ ತಂಡ ಇದೆ. ವಿಜಯ್ ಜಿಮ್ ಮಾಡುವುದನ್ನು ನನಗೆ ಹೇಳಿಕೊಡಿ ಎಂದರು.

         ಒಬ್ಬ ಮುಗ್ದ ಆರೋಪಿ ಹೇಗಿರುತ್ತಾನೆಂದು ಚಿತ್ರದಲ್ಲಿ ನೋಡಬಹುದು. ಶೀರ್ಷಿಕೆ ಕೇಳಿದರೆ, ಇದೊಂದು ಕಾಡಿನ ಕತೆ ಆಗಿರುವುದಿಲ್ಲ. ನಾಡಿನ ಸಲಗನಾಗಿರುತ್ತಾನೆ.  ಡಾಲಿ, ಕಾಕ್ರೋಚ್ ಪಾತ್ರ ನೋಡಿ ಅವರೊಂದಿಗೆ ನಟಿಸುವ ಬಯಕೆ ಈ ಚಿತ್ರದ ಮೂಲಕ ಈಡೇರುತ್ತಿದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.  ಮಿಕ್ಕ ವಿಷಯವನ್ನು  ಕೆಲಸ ಮಾಡಿ ಮುಗಿಸಿದ ನಂತರ ಹೇಳುವುದಾಗಿ ಪ್ರಶ್ನೆಗಳಿಂದ ಜಾರಿಕೊಂಡರು ವಿಜಯ್.

        ಎಲ್ಲಿವರೆವಿಗೂ ನಿನ್ನ ಮುಖಕ್ಕೆ ಹೊಂದುವಂತ ಪಾತ್ರ ಸೃಷ್ಟಿಸುತ್ತಾರೋ ಆಗ ಕಲಾವಿದನಿಗೆ ಗೌರವ ಸಿಗುತ್ತದೆಂದು ಸುದೀಪ್ ಹೇಳಿದ್ದು ನೆನಪು ಇದೆ. ಟಗರು ಮೂಲಕ ನನಗಾಗಿಯೇ ಪಾತ್ರಗಳನ್ನು ಚಿತ್ರಕತೆ ಬರೆಯುವಾಗಲೇ ಬುಕ್ ಮಾಡಿಕೊಳ್ಳುತ್ತಿರುವುದು  ಸಂತಸ ತಂದಿದೆ ಎಂದು ಇನ್ಸೆಪೆಕ್ಟರ್ ಪಾತ್ರ ಮಾಡುತ್ತಿರುವ ಧನಂಜಯ್ ಹೇಳಿದರು.

        ನಾಯಕಿ ಸಂಜನಾಆನಂದ್, ತ್ರಿವೇಣಿ, ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿರುವ ಚರಣ್‌ರಾಜ್ ಮತ್ತು ನಿರ್ಮಾಪಕ ಶ್ರೀಕಾಂತ್  ಹೆಚ್ಚೇನು ಮಾತನಾಡಲಿಲ್ಲ. ಸಮಾರಂಭಕ್ಕೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ರಾಘವೇಂದ್ರರಾಜ್‌ಕುಮಾರ್ ಗುರುಗಳಾದ ಅರ್ಜುನ್,ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಆಗಮಿಸಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,