Raja Lakshmi.Film Press Meet.

Friday, June 07, 2019

144

ಮಂಡ್ಯಾ ಸೊಗಡಿನ ಸತ್ಯ ಘಟನೆ

         ಮಂಡ್ಯಾ ಸೊಗಡಿನಲ್ಲಿ ಬಿಡುಗಡೆಯಾದ ಅಯೋಗ್ಯ, ರಾಜಾಹುಲಿ ಚಿತ್ರಗಳು ಯಶಸ್ವಿಯಾದಂತೆ ಇದರ ಸಾಲಿಗೆ ‘ರಾಜಲಕ್ಷೀ’ ಚಿತ್ರವು ಸೇರ್ಪಡೆಯಾಗಿದೆ.  ಕೆರಗೂಡು ಸಮೀಪ  ಸಿದ್ದಗೌಡನ ಹೋಬ್ಲಿಯಲ್ಲಿ ನಡೆದಂತ ಘಟನೆಗಳನ್ನು ಹೆಕ್ಕಿಕೊಳ್ಳಲಾಗಿದೆ. ವೃತ್ತಿಯಲ್ಲಿ ವಕೀಲ,  ಅಂಶಕಾಲಿಕವಾಗಿ ಸಹಾಯಕ ನಿರ್ದೇಶನ, ಸಾಹಿತ್ಯ, ಕತೆ ಬರೆಯುವ ಹವ್ಯಾಸ ರೂಡಿಸಿಕೊಂಡಿರುವ ಕಾಂತರಾಜ್‌ಗೌಡ ಸಿನಿಮಾಕ್ಕೆಂದು ಶ್ರೀಕಾಂತ್ ಆಗಿ ಗುರುತಿಸಿಕೊಂಡಿದ್ದಾರೆ.  ಅವಕಾಶಕ್ಕಾಗಿ ಹದಿನೇಳು ಕತೆಗಳನ್ನು ನಿರ್ಮಾಪಕರಿಗೆ ಹೇಳಿದಾಗ ಎಲ್ಲವನ್ನು ತಿರಸ್ಕರಿಸಿದ್ದಾರೆ. ಕೊನೆಗೆ ಸಕ್ಕರೆ  ನಾಡಿನ  ಶೈಲಿಯ ಕತೆಯನ್ನು ಹೇಳಿದಾಗ ಒಪ್ಪಿಕೊಂಡಂತೆ, ಮೊದಲಬಾರಿ ನಿರ್ದೇಶನ ಮತ್ತು ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿ ಬಿಡುಗಡೆ ಹಂತದವರೆಗೂ ತಂದಿದ್ದಾರೆ.  ಶೀರ್ಷಿಕೆಯಲ್ಲಿ   ಪ್ರೀತಿ ಕಥನ ಇರುವುದರ ಜೊತೆ ಅರ್ಥಪೂರ್ಣ ಸಂದೇಶವನ್ನು ಹೇಳಲಾಗಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಮಂಡ್ಯಾ ಜಿಲ್ಲೆಯ ಸುತ್ತಮುತ್ತ  ಚಿತ್ರೀಕರಣ ನಡೆಸಲಾಗಿದೆ.

          ರಂಗಭೂಮಿ ನಟ ನವೀನ್‌ತೀರ್ಥಹಳ್ಳಿ ಎರಡು ಚಿತ್ರಗಳಲ್ಲಿ ನಟಿಸಿದ್ದು ಬಿಡುಗಡೆಯಾಗಬೇಕಿದೆ. ಇದರಲ್ಲಿ ರೈತ, ಕಾಲೇಜು ಹುಡುಗನಾಗಿ ನಾಯಕ. ಟೆಕ್ಕಿ,  ನಿರೂಪಕಿ ಒಂದಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಬೆಂಗಳೂರಿನ ರಶ್ಮಿಗೌಡ ತಾಲ್ಲೋಕು ಪಂಚಾಯತಿ ಅಧ್ಯಕ್ಷರ ಮಗಳು.  ನೋಡೋಕೆ ಸೈಲೆಂಟ್, ಮಾತಾಡಿದ್ರೆ ವೈಲೆಂಟ್ ಆಗುವ ಪಾತ್ರದಲ್ಲಿ ನಾಯಕಿ. ದುರುಳ ಅಧ್ಯಕ್ಷನಾಗಿ ಕೆ.ಹೆಚ್.ಮೀಸೆಮೂರ್ತಿ, ಖಳನಾಗಿ ಕಿರಣ್‌ಗೌಡ,  ನಗಿಸಲು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮುತ್ತುರಾಜ್ ಇವರುಗಳೊಂದಿಗೆ ಮಜಾಭಾರತ, ಮಜಾಟಾಕೀಸ್ ಕಲಾವಿದರು  ಹಾಗೂ ಹಿರಿಯ ನಟರಾದ ಹೊನ್ನವಳ್ಳಿಕೃಷ್ಣ, ಟೆನ್ನಿಸ್‌ಕೃಷ್ಣ ಅಭಿನಯಿಸಿದ್ದಾರೆ.  ನಾಲ್ಕು ಹಾಡುಗಳಿಗೆ ಸಂಗೀತವನ್ನು ಗಾಯಕಿ ಡಾ.ಶಮಿತಾಮಲ್ನಾಡ್ ಸಂಯೋಜಸಿದ್ದಾರೆ. ಸಂಭಾಷಣೆ ಮಾಗಡಿಯತೀಶ್,  ಸಂಕಲನ ರಾಜ್‌ಕಿರಣ್, ಛಾಯಾಗ್ರಹಣ  ನಾಗರಾಜ್.ಎಸ್.ಮೂರ್ತಿ, ನೃತ್ಯ ನವೀನ್ ನಿರ್ವಹಿಸಿದ್ದಾರೆ. ಈಗಾಗಲೇ ಕೇಳೆ,ಕೇಳೇ  ಮತ್ತು ಎಣ್ಣೆ ಸಾಂಗ್ ಹಿಟ್ ಆಗಿರುವುದು ತಂಡಕ್ಕೆ ಸಂತಸ ತಂದಿದೆ.

        ಮೂರು ಸಿನಿಮಾಗಳಲ್ಲಿ ಪಾಲುದಾರರಾಗಿ ಹೊರಬಂದು ಕೈ ಸುಟ್ಟುಕೊಂಡಿರುವ ವಕೀಲ ಅದೇ ಭಾಗದ ಎಸ್.ಕೆ.ಮೋಹನ್‌ಕುಮಾರ್ ಅವರಿಗೆ ಛಾಲೆಂಜ್ ಮಾಡಲು ಸ್ವತಂತ್ರ ನಿರ್ಮಾಪಕರಾಗಿ ಹಣ ಹೂಡಿರುವುದು ಹೊಸ ಅನುಭವ. ನಾಯಕ-ನಾಯಕಿ, ನಿರ್ಮಾಪಕರ ತಂದೆ-ತಾಯಿ ಹೆಸರು ರಾಜಲಕ್ಷೀ ಇರುವುದು ವಿಶೇಷ. ಇವರು ಕಟ್ಟಾ ಅಂಬರೀಷ್ ಅಭಿಮಾನಿಯಾಗಿದ್ದರಿಂದ ಅವರ ಹುಟ್ಟಹಬ್ಬದಂದು ಧ್ವನಿಸಾಂದ್ರಿಕೆಯನ್ನು ಸುಮಲತಾಅಂಬರೀಷ್ ಮತ್ತು ದರ್ಶನ್ ಅಮೃತಹಸ್ತದಿಂದ  ಲೋಕಾರ್ಪಣೆ ಮಾಡಿಸಿದ್ದಾರೆ. ಅಂದುಕೊಂಡಂತೆ ಆದರೆ ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಜನರಿಗೆ ತೋರಿಸಲು  ತಂಡವು  ಯೋಜನೆ ಹಾಕಿಕೊಂಡಿದೆ. 

 

Copyright@2018 Chitralahari | All Rights Reserved. Photo Journalist K.S. Mokshendra,