Majjige Huli.Film Press Meet.

Monday, June 03, 2019

26

ಮೊದಲ ರಾತ್ರಿಯ ಮಹಾಕಾವ್ಯ ಮಜ್ಜಿಗೆ ಹುಳಿ

          ಹಾಸ್ಯ ಚಿತ್ರ ‘ಮಜ್ಜಿಗೆ ಹುಳಿ’ ಒಳ್ಳೆ ಬಾಡೂಟ ಗುರು ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಸನಿಹದಲ್ಲಿ ತೆರೆಕಾಣುತ್ತಿರುವುದರಿಂದ ಸಿನಿಮಾದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಎರಡನೆ ಬಾರಿ ಮಾದ್ಯಮದವರನ್ನು ತಂಡವು ಭೇಟಿ ಮಾಡಿತು. 

       ರಚನೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿರುವ ರವೀಂದ್ರಕೊಟಕಿ ಮಾತನಾಡಿ ಒಂದು  ಕೋಣೆಯೊಳಗೆ ನಡೆಯುವ ಕತೆಯಲ್ಲಿ ೨೮ ಪಾತ್ರಗಳು ಬರುತ್ತವೆ. ನವಜೋಡಿಗಳು ಮೊದಲ ರಾತ್ರಿ ಸುಖವನ್ನು ಅನುಭವಿಸಲು ಗೋವಾದ ಹೋಟೆಲ್‌ಗೆ ಬಂದಾಗ ಅಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ತೋರಿಸಲಾಗಿದೆ. ಹಾಗಂತ  ಅಶ್ಲೀಲ ದೃಶ್ಯಗಳು, ದಂದ್ವಾರ್ಥ ಸಂಭಾಷಣೆಗಳು ಇರುವುದಿಲ್ಲ.  ಬಾಡೂಟ ಅಂತ ಬಂದವರಿಗೆ ಮಜ್ಜಿಗಹುಳಿ ಸಿಗುವುದು ಖಾತ್ರಿ. ಚಿತ್ರಕ್ಕೆ ತೂಕ ಬರಲು  ಯೋಗರಾಜಭಟ್ಟರು ಒನ್ ಲೈನ್ ಸ್ಟೋರಿ ಕೇಳಿ ಪ್ರಾರಂಭ-ಅಂತ್ಯಕ್ಕೆ ಹಿನ್ನಲೆ ಧ್ವನಿ ನೀಡಿದ್ದಾರೆ. ಇದೇ ಹೆಸರು ಯಾಕೆ ಇಡಲಾಗಿದೆ ಎಂದು ಕ್ಲೈಮಾಕ್ಸ್‌ನಲ್ಲಿ ತಿಳಿಯುತ್ತದೆ. ಟೈಟಲ್ ಹಾಡಿಗೆ ಗುರುಕಿರಣ್ ಧ್ವನಿಯಾಗಿದ್ದಾರೆಂದು  ಮಾಹಿತಿಯನ್ನು  ತೆರೆದಿಟ್ಟರು.

         ಡ್ಯಾನ್ಸರ್ ಆಗಿದ್ದ ಕಾರಣ ಚೂಚ್ಚಲಬಾರಿ ಟಪ್ಪಾಂಗುಚ್ಚಿ ‘ಮಚ್ಚಾ-ಮಚ್ಚಿ’ ಹಾಡಿಗೆ ಹೆಜ್ಜೆ ಹಾಕಲಾಗಿದೆ. ಮಜಾ ಟಾಕೀಸ್‌ದಲ್ಲಿ ಅಭಿನಯಿಸಿದ್ದರಿಂದ ಕಾಮಿಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಹೊಸ ಅನುಭವ. ಹೆಣ್ಣು ಮಕ್ಕಳು ಮತ್ತು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಹೇಳಲಾಗಿದೆ. ಸಂಭಾಷಣೆಯಲ್ಲಿ ಬೋಲ್ಡ್ ಆಗಿದ್ದು, ಗಂಡನಿಗೆ ಕಷ್ಟಬಂದಾಗ ಅವರಿಗೆ ರಕ್ಷಣೆ ನೀಡುವೆನೆಂದು ನಾಯಕಿ ರೂಪಿಕಾ ಪಾತ್ರದ ಪರಿಚಯ ಮಾಡಿಕೊಂಡರು.

         ಕೊಳ್ಳೆಗಾಲದಲ್ಲಿ ಒರಟಾಗಿ ನಟನೆ ಮಾಡಿದ್ದು, ಎರಡನೆ ಚಿತ್ರದಲ್ಲಿ  ಮುಗ್ದ, ಸೂಕ್ಷತೆ ಇರುವ ಹುಡುಗನಾಗಿ ಅಭಿನಯಿಸಿದ್ದೇನೆಂದು ನಾಯಕ ದೀಕ್ಷಿತ್‌ವೆಂಕಟೇಶ್  ಹೇಳಿಕೊಂಡರು. ಸಂಜೀವ್‌ರಾವ್ ಸಂಗೀತದ ಐದು ಗೀತೆಗಳ ಪೈಕಿ  ಟಗರು ಹಾಡಿಗೆ ಧ್ವನಿಯಾಗಿದ್ದ ಅಂತೋನಿದಾಸ್ ದ್ವಿತೀಯ ಬಾರಿ ಹಾಡಿರುವುದು ವಿಶೇಷ. ಕೆಂಪೆಗೌಡ, ಶಂಕರ್‌ನಾರಾಯಣ್, ಮಿಮಿಕ್ರಿದಯಾನಂದ್ ಇಲ್ಲಿಯವರೆಗೂ ಮಾಡಿರದ ಪಾತ್ರವೆಂದು,ಅದನ್ನು ಚಿತ್ರಮಂದಿರದಲ್ಲಿ ನೋಡಬೇಕೆಂದು ಕೋರಿದರು. 

         ನಿರ್ಮಾಪಕ ಎಸ್.ರಾಮಚಂದ್ರ, ಕಾರ್ಯಕಾರಿ ನಿರ್ಮಾಪಕ ರಘುರಾಜು ಮಾದ್ಯಮದ ಸಹಕಾರಬೇಕೆಂದು ಅವಲತ್ತು ಮಾಡಿಕೊಂಡರು. ಸುಮಾರು ೮೦ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿರುವುದಾಗಿ  ವಿತರಕ ವೆಂಕಟ್ ವರದಿ ಒಪ್ಪಿಸಿದರು. 

 

 

 

Copyright@2018 Chitralahari | All Rights Reserved. Photo Journalist K.S. Mokshendra,