Fida.Film Audio Rel.

Monday, June 03, 2019

25

ಪ್ರೀತಿಗೆ ಫಿದಾ ಆದರೆ ಬದುಕು  ನಶ್ವರ

        ಸಿನಿಮಾ, ಸ್ಟಾರ್ ನಟರು, ಹಾಡುಗಳು, ಪ್ರೀತಿ ಇವುಗಳಿಗೆ ಮಾರುಹೋಗುವುದನ್ನು  ಮತ್ತೋಂದು ಭಾಷೆಯಲ್ಲಿ ‘ಫಿದಾ’  ಎಂದು ಕರೆಯುತ್ತಾರೆ. ಈಗ  ಹೊಸಬರೇ ಸೇರಿಕೊಂಡು ಎರಡು ಭಾಷೆಯಲ್ಲಿ ಸಿದ್ದಪಡಿಸಿರುವ ಇದೇ ಹೆಸರಿನ ಚಿತ್ರವು  ಸುಂದರ ಪ್ರೇಮಕತೆ ಜೊತೆಗೆ  ಫ್ಯಾಮಲಿ ಸೆಂಟಿಮೆಂಟ್ ಇರಲಿದೆ. ನಿನ್ನನ್ನು ನೋಡಿ. 

ಪ್ರತೀಕ;ಆಶ್ರಯ:ರೂಪ:ಶಿಲ್ಪಾ:ಸೌಜನ್ಯ ಎಂದು ಪೋಸ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಕತೆಯಲ್ಲಿ  ಶ್ರೀಮಂತ ಉದ್ಯಮಿಯಾಗಿದ್ದವನು ಪ್ರೀತಿಗೆ ಫಿದಾ ಆಗುತ್ತಾನೆ.  ಮುಂದೆ ಅವಳಿಗೋಸ್ಕರ ಎಲ್ಲವನ್ನು ತ್ಯಾಗ ಮಾಡಿದಾಗ ಕೋಟ್ಯಾದಿಪತಿಯಾಗಿದ್ದವನು  ಭಿಕ್ಷಾದಿಪತಿ ಯಾಗುತ್ತಾನೆ. ಅದು ಹೇಗೆ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕಂತೆ.  ಕಿರುಚಿತ್ರ, ಸಾಕ್ಷಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ತುಮಕೂರಿನ ಚಿರಂಜೀವಿನಾಯ್ಕ.ಪಿ ಸಿನಿಮಾಕ್ಕೆ ರಚನೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸಕಲೇಶಪುರ, ಸಾಗರ, ತುಮಕೂರು, ಬೆಂಗಳೂರು ಕಡೆಗಳಲ್ಲಿ  ೬೦ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

       ಹೋಟೆಲ್ ಉದ್ಯಮಿ ಪಾತ್ರದಲ್ಲಿ ಸಾಗರದ ರಾಜ್‌ಕೌಶಿಕ್ ನಾಯಕ. ಮುಗ್ದ ಹಳ್ಳಿ ಹುಡುಗಿಯಾಗಿ ಶೃಂಗೇರಿಯ ಈಶಾ ನಾಯಕಿ. ಇವರೊಂದಿಗೆ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.  ಹೈದರಬಾದ್‌ನ ವೆಂಕಟ್‌ಅಜ್ಮೀರ್ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಿವ-ಅಶ್ವಥ್ ಅವರದಾಗಿದೆ.  ತೆಲುಗು ಭಾಷೆಗೆ ವಿತರಕ ಲಕ್ಷೀಪತಿ ಹಣ ಹೂಡಿದ್ದು, ಸದ್ಯದಲ್ಲೆ  ಸೆನ್ಸಾರ್‌ಗೆ ಹೋಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,