Kamarottu Checkpost.Film Success Meet.

Monday, June 03, 2019

54

 ಬುಕ್ ಮೈ ಷೋದಿಂದ ಕನ್ನಡ ಚಿತ್ರಗಳಿಗೆ ಪೆಟ್ಟು

         ಪ್ಯಾರನಾರ್ಮಲ್ ಕತೆ ಹೊಂದಿರುವ ‘ಕಮರೊಟ್ಟು ಚೆಕ್‌ಪೋಸ್ಟ್’ ಶುಕ್ರವಾರದಂದು ಬಿಡುಗಡೆಗೊಂಡು ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದಾಗಿ ನಿರ್ದೇಶಕ ಎ.ಪರಮೇಶ್ ಸಂತೋಷ ಕೂಟದಲ್ಲಿ ಮಾತನಾಡುತ್ತಿದ್ದರು. ಅವರು ಹೇಳುವಂತೆ  ವಿರಾಮದ ನಂತರ ಬರುವ ಸನ್ನಿವೇಶಗಳು ಇಷ್ಟವಾಗಿದೆ, ಕಾಡುತ್ತದೆಂದು ನೋಡುಗರು ಹೇಳುತ್ತಿದ್ದಾರೆ. ಹೊಸಬರ ಚಿತ್ರವೆಂದರೆ ಸಾಮಾನ್ಯವಾಗಿ ಇಳಿಕೆಯಾಗುವುದುಂಟು. ಆದರೆ ನಮ್ಮದು ಏರಿಕೆಯಾಗುತ್ತಿದೆ. ತುಮಕೂರಿನಲ್ಲಿ ಎರಡು ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಗಳಿಕೆ ಕಂಡು ಮತ್ತೇರಡು  ಷೋಗಳನ್ನು ಹೆಚ್ಚಿಗೆ ನೀಡಿದ್ದಾರೆ. ಸೋಮವಾರವು ಸಹ ಶೇಕಡ ೬೫ರಷ್ಟು ಕಲೆಕ್ಷನ್ ಆಗಿದೆ.  ನಿರ್ಮಾಪಕರು ಒಂದು ದೃಶ್ಯದಲ್ಲಿ ಕಾಣಿಸಿಕೊಳ್ಳದೆ ಹಣ ಹೂಡಿದ್ದಾರೆ.  ಇದರ ಖುಷಿಯಿಂದ  ಭಾಗ-೨ನ್ನು ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರೀಕರಿಸಲು ಹೇಳಿರುವುದರಿಂದ ಕತೆ ಸಿದ್ದವಾಗುತ್ತಿದೆ. ಇದಕ್ಕೆಲ್ಲಾ ಕಾರಣ ಮಾದ್ಯಮದವರೆಂದು  ಮಾತಿಗೆ ವಿರಾಮ ಹಾಕಿದರು.

       ಬಿಡುಗಡೆ ಮುಂಚೆ  ಸಕ್ಸಸ್‌ದಲ್ಲಿ ತಮ್ಮನ್ನು ಕಾಣಲು ಇಷ್ಟಪಟ್ಟಂತೆ ಅದೇ ಆಗಿದೆ.  ಪ್ರೇಕ್ಷಕರಿಗೆ ಒಳ್ಳೆಯ ಚಿತ್ರವೆಂದು ಮಾದ್ಯಮದವರು ತಿಳಿಸಿದ್ದರಿಂದ ನಿರೀಕ್ಷೆಗೂ ಮೀರಿ ಪ್ರಶಂಸೆಗಳು ಬರುತ್ತಿದೆ. ಛಾಯಾಗ್ರಹಣ, ಕಲಾವಿದರು, ತಾಂತ್ರಿಕತೆ ಎಲ್ಲರ ಪರಿಶ್ರಮಕ್ಕೆ ಫಲ ಸಿಕ್ಕಿದೆ. ನಿರ್ದೇಶಕರು ರೈತನಾಗಿ  ಬಿಡುವಿನ ಸಮಯದಲ್ಲಿ ಚಿತ್ರದ ಕುರಿತಂತೆ ಕೆಲಸ ಮಾಡುತ್ತಾರೆ. ಮೊದಲವಾರ ಕಳೆದರೆ ಸೇಫ್ ಆಗುತ್ತೇನೆ. ಬೇಸರದ ಸಂಗತಿ ಎಂದರೆ ಅದು ಬುಕ್ ಮೈ ಷೋ. ಅವರು ಫೋನ್ ಮಾಡಿ ನಿಮ್ಮ ಚಿತ್ರಕ್ಕೆ ಒಳ್ಳೆ ರೇಟಿಂಗ್ ಕೊಡುತ್ತೇವೆಂದು ಹಣಕ್ಕೆ ಬೇಡಿಕೆ ಇಡುತ್ತಾರೆ.  ಬೇಕು ಅಂತಲೇ ರೇಟಿಂಗ್‌ದಲ್ಲಿ ಬದಲಾವಣೆ ಮಾಡುತ್ತಾರೆ. ಇದರಿಂದ ನಮ್ಮಂತ ನಿರ್ಮಾಪಕರಿಗೆ ತೊಂದರೆಯಾಗುತ್ತಿದೆ. ವಾಣಿಜ್ಯ ಮಂಡಳಿಗೆ ಪತ್ರ ನೀಡಲಾಗಿ, ಆ ಕಡೆಯಿಂದಲೂ ಪೋಲೀಸ್ ಆಯುಕ್ತರಿಗೆ ದೂರು ಕೊಡುವುದಾಗಿ ತಿಳಿಸಿದ್ದಾರೆ. ಇಂತಹ ದಂದೆಗೆ ಕಡಿವಾಣ ಹಾಕದಿದ್ದರೆ ಮುಂದೆ ಅನಾಹುತಗಳು ತಪ್ಪಿದ್ದಲ್ಲವೆಂದು ನಿರ್ಮಾಪಕ ಚೇತನ್‌ರಾಜ್ ಹೇಳಿದರು.

       ತರಭೇತಿ ಪಡೆದುಕೊಂಡಿದ್ದರಿಂದ ಕ್ಯಾಮಾರ ಮುಂದೆ ಒಂದೇ ಟೇಕ್, ಆಯಾ ಚೌಕಟ್ಟುದಲ್ಲಿ  ಓಕೆಯಾಗುತ್ತಿತ್ತು.  ಸಿನಿಮಾ ಬದುಕಿನಲ್ಲಿ ಮೊದಲ ಸಿಹಿಯನ್ನು ಕಂಡಿದ್ದೇನೆ. ಇದರಿಂದ ಕರೆಗಳು ಬರುತ್ತಿದೆ ಅಂತಾರೆ ನಾಯಕ ಸನತ್‌ಕುಮಾರ್.

       ಈ ಮಟ್ಟಕ್ಕೆ ಹೋಗುತ್ತದೆಂದು ಅಂದುಕೊಂಡಿರಲಿಲ್ಲ.  ನಿರ್ದೇಶಕರು ಹೇಳಿದಂತೆ ಆಗುತ್ತಿದೆ. ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೊರಬಂದವರು ನಮ್ಮನ್ನು ಕಂಡು ಸೆಲ್ಫಿ ತೆಗೆದುಕೊಳ್ಳುತ್ತಾರೆ.  ಕ್ಯಾಪ್ಟರ್ ಆಫ್ ದಿ ಷಿಪ್ ಗೆದ್ದರೆ ನಾವುಗಳು  ಗೆದ್ದಂಗೆ.  ಮರಿ ಜೋಡಿ ಎತ್ತುಗಳು ಗೆದ್ದಿವೆ ಎಂದು  ಹೋದ ಕಡೆಯಲ್ಲಿ ಹೇಳುತ್ತಾರೆ. ಮೂರನೆ ಆತ್ಮ ಯಾವುದೆಂದು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರ ೨ರಲ್ಲಿ ಸಿಗುತ್ತದೆಂದು ಮತ್ತೋಬ್ಬ ನಾಯಕ ಉತ್ಪಲ್ ನಿರ್ಮಾಪಕರನ್ನು ನೋಡುತ್ತಾ ಮೈಕ್‌ನ್ನು  ಹಸ್ತಾಂತರಿಸಿದರು.

      ಟಾಕೀಸ್‌ದಲ್ಲಿ ಜನರ ಹತ್ತಿರ ನೇರವಾಗಿ ಹೋದಾಗ ಸರಿ-ತಪ್ಪು ಏನೆಂದು ಹೇಳುತ್ತಾರೆ. ಇದರಿಂದ   ತಿದ್ದಿಕೊಳ್ಳಲು ಸಹಾಯವಾಯಿತು ಎಂಬುದು ನಾಯಕಿ ಸ್ವಾತಿಕೊಂಡೆ ಖುಷಿಯ ನುಡಿ.

      ಮಂಗಳೂರು, ಸುಳ್ಯಾ ಕಡೆಗಳಲ್ಲಿ ಭೂತಕೋಲ ಹಬ್ಬದ ಸಂದರ್ಭದಲ್ಲಿ ಚಿತ್ರದ ಸಂಗೀತವನ್ನು ಬಳಸುತ್ತಾರೆ. ಮೊಬೈಲ್‌ದಲ್ಲಿ ವೈರಲ್ ಆಗಿರುವುದು ಪ್ಲಸ್ ಪಾಯಿಂಟ್ ಆಗಿದೆ ಅಂತ ಸಹ ನಿರ್ದೇಶಕ ರಾಜೇಶ್ ಮಾಹಿತಿ ನೀಡಿದರು.

 

 

Copyright@2018 Chitralahari | All Rights Reserved. Photo Journalist K.S. Mokshendra,