Suvarna Sundari.Film Success Meet.

Tuesday, June 04, 2019

20

ಸುವರ್ಣ ಸುಂದರಿಗೆ ಗೆಲುವಿನ ಗರಿ

ಕಳೆದ ವಾರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಚಿತ್ರ ‘ಸುವರ್ಣ ಸುಂದರಿ’. ಈ  ಚಿತ್ರದಲ್ಲಿ ಸುಂದರ ಬೊಂಬೆಯು ಶೀರ್ಷಿಕೆಯಾಗಿರುವುದನ್ನು ಜನರು ಇಷ್ಟಪಟ್ಟಿದ್ದಾರೆ. ಕ್ರಿ.ಶ ೧೫೦೮ ರಿಂದ ಪ್ರಸಕ್ತ ೨೦೧೯ರ ವರೆಗಿನ ನಾಲ್ಕು ತಲೆಮಾರು ಮತ್ತು ಕಾಲಘಟ್ಟದ ಕತೆಯಾಗಿರುವುದರಿಂದ ನೋಡುಗರಿಗೆ ಕೊನೆವರೆಗೂ ಕುತೂಹಲ ಹುಟ್ಟಿಸುವಲ್ಲಿ ನಮ್ಮ ಶ್ರಮ ಸಾರ್ಥಕವಾಗಿದೆ. ಕತೆಗೆ ಪೂರಕವಾಗಿ ೫೦ ನಿಮಿಷ ಗ್ರಾಫಿಕ್ಸ್  ಇರುವುದು ಪ್ರೇಕ್ಷಕರಿಗೆ ಬೋನಸ್ ಆಗಿದೆ. ಮಾದ್ಯಮದ ಕಡೆಯಿಂದ ಉತ್ತಮ ವಿಮರ್ಶೆ ಬಂದ ಕಾರಣ ಗಳಿಕೆಯಲ್ಲಿ ಚೇತರಿಕೆ ಕಂಡುಬರುತ್ತಿದೆ. ಅದಕ್ಕಾಗಿ ಥ್ಯಾಂಕ್ಸ್ ಹೇಳಲು ಭೇಟಿ ಮಾಡಲಾಗಿದೆ ಎಂದು ರಚನೆ, ನಿರ್ದೇಶನ ಮಾಡಿರುವ ಎಂ.ಎಸ್.ಎನ್.ಸೂರ್ಯ ಸಂತೋಷಕೂಟದಲ್ಲಿ ಹೇಳಿಕೊಂಡರು.   

ನಿರ್ಮಾಪಕಿ ಎಮ್.ಎನ್.ಲಕ್ಷೀ ಮಾತನಾಡಿ ಪತ್ರಕರ್ತರ ಸಹಕಾರದಿಂದ ಚಿತ್ರವು ಚೆನ್ನಾಗಿ ಪ್ರದರ್ಶನವಾಗುತ್ತಿದೆ. ಸಂಗೋಳ್ಳಿ ರಾಯಣ್ಣ ನಂತರ ಜಯಪ್ರದ ನಟಿಸಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.  ನಿರ್ದೇಶಕರು ಮೊದಲಬಾರಿ ಕನ್ನಡದಲ್ಲಿ ತಾಂತ್ರ್ರಿಕವಾಗಿ ಒಳ್ಳೆ ಚಿತ್ರ ನೀಡಿದ್ದಾರೆ. ಸ್ಟಾರ್ ನಟರ ಸಿನಿಮಾ ನಿರ್ಮಾಣ ಮಾಡುವ ಯೋಜನೆ ಇದೆ. ಸದ್ಯದಲ್ಲೆ ಮಾಹಿತಿ ನೀಡುವುದಾಗಿ ಹೇಳಿದರು. ಸಾಹಿತಿ ರಾಜ್‌ಕಿರಣ್, ಕಾರ್ಯಕಾರಿ ನಿರ್ಮಾಪಕ ಶ್ರೀಕಾಂತ್, ಸಹ ನಿರ್ದೇಶಕ ಮಂಜುನಾಥ್ ಉಪಸ್ತಿತರಿದ್ದರು.  

 

Copyright@2018 Chitralahari | All Rights Reserved. Photo Journalist K.S. Mokshendra,