Turning Point.Film Audio Rel.

Sunday, June 30, 2019

73

 ಟರ್ನಿಂಗ್  ಪಾಯಿಂಟ್  ಹಾಡುಗಳ ಒಡ್ಡೋಲಗ

       ಬದುಕಿನಲ್ಲಿ ಎಲ್ಲರಿಗೂ ‘ಟರ್ನಿಂಗ್ ಪಾಯಿಂಟ್’ ಎನ್ನುವುದು ಇರುತ್ತದೆ.  ಅದು ಸಕರಾತ್ಮಕ, ನಕರಾತ್ಮಕವಾಗಿರಲು ಬಹುದು. ಇಲ್ಲೊಂದು  ಹೊಸ ತಂಡವು ಇದೇ ಹೆಸರಿನಲ್ಲಿ ಸಿನಿಮಾವೊಂದನ್ನು ಮುಗಿಸಿದ್ದಾರೆ.  ಪ್ರೀತಿ ಮತ್ತು ತಾಯಿ-ಮಗನ ಬಾಂದವ್ಯ ಕುರಿತಂತೆ ಎರಡು  ಟ್ರ್ಯಾಕ್‌ಗಳಲ್ಲಿ ಕತೆ ಸಾಗುತ್ತದೆ.  ಸಿಕ್ಕಿಂದಲ್ಲಿ ಶುರುವಾಗಿ ಕರ್ನಾಟಕ ರಾಜ್ಯಕ್ಕೆ ಬಂದು ಕೊನೆಗೊಳ್ಳುತ್ತದಂತೆ. ತಂಗಿ ಜೊತೆಗೆ ಕಳೆದುಹೋಗಿದ್ದ ಅಣ್ಣ ದೂರದ ರಾಜ್ಯದಲ್ಲಿ ನೆಲೆಸಿರುತ್ತಾನೆ. ಒಂದು ಹಂತದಲ್ಲಿ ತಾಯಿಯನ್ನು ಹುಡುಕಿಕೊಂಡು ಇಲ್ಲಿಗೆ ಬಂದಾಗ ಮನೆಯಲ್ಲಿ ಬೇರೆಯವರು ತಾನು ಮಗನೆಂದು ವಾಸವಾಗಿರುತ್ತಾರೆ. ಈತನ ಹಿನ್ನಲೆ ಏನು, ಯಾವ ಕಾರಣಕ್ಕೆ ಬಂದಿದ್ದಾನೆ. ಇದರ ಮರ್ಮ  ಹುಡುಕಲು ಹೋದಾಗ ಸಾಕಷ್ಟು ತಿರುವುಗಳು ಬಿಚ್ಚಿಕೊಳ್ಳುತ್ತವೆ. ಸಿನಿಮಾವು ಒಂದು ಡೈರಿಯಿಂದ ಶುರುವಾಗುತ್ತದಂತೆ. ಸಿಕ್ಕಿಂ, ಮಡಕೇರಿ, ಸುಳ್ಯ, ಕುಶಾಲನಗರ, ಬೆಂಗಳೂರು ಆಗರಗಳಲ್ಲಿ  ಚಿತ್ರೀಕರಣ ನಡೆಸಲಾಗಿದೆ.

 ನಿಜ ಜೀವನದಲ್ಲಿ   ತಾಯಿಯ ಸಲುವಾಗಿ ಬಣ್ಣ ಹಚ್ಚಿರುವ ನಾಯಕ ಆದಿಕೇಶವಲು  ತೆರೆ ಮೇಲೆ  ಅಮ್ಮನನ್ನು ಹುಡುಕುವ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ಹೈದರಬಾದ್‌ನ ಅನಿಕರಾವ್ ನಾಯಕಿ. ಶ್ರೀಮಂತ ಹುಡುಗಿಯಾಗಿ ದೊಡ್ಡ ಮನೆತನದ ಮಕ್ಕಳು ಹೇಗಿರುತ್ತಾರೆಂಬ ನೆಗಟೀವ್ ಶೇಡ್‌ದಲ್ಲಿ  ದಿಶಾಪೂವಯ್ಯ ಕಾಣಿಸಿಕೊಂಡಿದ್ದಾರೆ. ತಂದೆಯಾಗಿ ಶ್ರೀನಿವಾಸಮೂರ್ತಿ, ಸಾಕುತಂದೆಗೆ ಜೊಸೈಮನ್, ಖಳನಾಗಿ ಉಗ್ರಂಮಂಜು,  ಜೈಜಗದೀಶ್, ವಿನಯಪ್ರಸಾದ್ ಮತ್ತು ರೀಲ್ ಮಂಗಳಮುಖಿಯಾಗಿ ಧರ್ಮಲಿಂಗಂ  ರಿಯಲ್ ಮಂಗಳಮುಖಿಯರೊಂದಿಗೆ ಹೊಡೆದಾಡಿರುವುದು   ವಿಶೇಷ.  ನಾಲ್ಕು ಹಾಡುಗಳಿಗೆ  ಎ.ಟಿ.ರವೀಶ್ ಸಂಗೀತ, ವಿಕ್ರಂ-ಪಳನಿ ಸಾಹಸ, ಎ.ಆರ್.ವಿನ್ಸೆಂಟ್ ಛಾಯಾಗ್ರಹಣ, ಸಂಕಲನ ಸುರೇಶ್‌ಅರಸ್ ಅವರದಾಗಿದೆ.

         ತುಳು, ಕೊಡವ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ವಿನುಮಹೇಶ್‌ರೈ ಮೊದಲ ಬಾರಿ  ಸಿನಿಮಾಕ್ಕೆ ಕತೆ,ಚಿತ್ರಕತೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ. ರಾಮನಗರದ ವಿ.ನಾಗರಾಜು ನಿರ್ಮಾಪಕರು. ಮನೋಜ್‌ಗೌಡ,  ರಮೇಶ್‌ಪೂಜಾರಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಪ್ರಚಾರದ ಎರಡನೆ ಹಂತವಾಗಿ ಧ್ವನಿಸಾಂದ್ರಿಕೆಯನ್ನು  ಶಾಸಕಿ ಸೌಮ್ಯರೆಡ್ಡಿ, ಪ್ರೊದೊಡ್ಡರಂಗೇಗೌಡ, ರಜನಿಕಾಂತ್ ಆಪ್ತ ಗೆಳಯ ರಾಜ್‌ಬಹದ್ದೂರ್, ಲಹರಿವೇಲು, ಗೋಕುಲ್‌ರಾಜ್, ಬಾ.ಮ.ಹರೀಶ್, ನವರಸನ್, ಗರುಡ, ಚೇತನ್‌ಗೌಡ ಮುಂತಾದವರು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಯುಎ ಪ್ರಮಾಣ ಪಡೆದುಕೊಂಡಿರುವ ಚಿತ್ರವು  ಜುಲೈ ಕೊನೆವಾರದಂದು ತೆರೆಗೆ ಬರುವ ಸಾದ್ಯತೆ ಇದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,