Samhita Vinay.Actress and Super Model.Press Meet.

Monday, July 01, 2019

64

ಸಂಯಮದ  ಸಂಹಿತಾವಿನ್ಯಾ

        ಮಾಡಲಿಂಗ್  ಕ್ಷೇತ್ರದಲ್ಲಿರುವ ನೀರೆಯರು ಚಿತ್ರರಂಗಕ್ಕೆ ಬರುವುದು ಸಾದಾರಣವಾಗದೆ. ಅದರಂತೆ ಸಕಲೇಶಪುರ ‘ಸಂಹಿತಾ ವಿನ್ಯಾ’ ಮಾಡೆಲ್, ನಟಿ ಆಗಬೇಕು ಅನ್ನುವ ಆಸೆಯಿಂದ ಪೋಷಕರ ವಿರೋಧದ ನಡೆವೆಯೂ  ಕೊನೆಗೂ ತಮ್ಮ ಅಭಿಲಾಷೆಯನ್ನು ಪೂರೈಸಿಕೊಂಡಿದ್ದಾರೆ. ಬಿಬಿಎಂ, ಡಿಪ್ಲೋಮಾ ಇನ್ ಆಯುರ್ವೇದ ಮುಗಿಸಿ ಬೆಂಗಳೂರಿಗೆ ಬಂದು ಮಾಡಲಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿಂದ ಹಿಮ್ಮುಖವಾಗಿ ನೋಡದೆ ೧೧ ರಾಜ್ಯಗಳು, ೨೭ ಫ್ಯಾಶನ್ ಷೋಗಳಲ್ಲಿ ಪಾಲ್ಗೋಂದು ಒಂದಷ್ಟು  ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದರ ಮಧ್ಯದಲ್ಲೆ ನಟಿಯಾಗಲು ಅಡಿಷನ್‌ದಲ್ಲಿ  ಭಾಗವಹಿಸಿದ್ದಾರೆ.  

ಸೂತ್ರಧಾರಿ ಧಾರವಾಹಿಯಲ್ಲಿ ಇವರನ್ನು ಗುರುತಿಸಿದ ನಿರ್ದೇಶಕ ಬೈರಾಜ್ ‘ಗೌಡ್ರ ದರ್ಬಾರ್’  ಚಿತ್ರಕ್ಕೆ  ನಾಯಕಿಯಾಗಿ ಆಯ್ಕ ಮಾಡಿದ್ದಾರೆ.  ಎರಡು ವರ್ಷಗಳಲ್ಲಿ ಹಾಲುತುಪ್ಪ, ಅಮೃತಘಳಿಗೆ ಚಿತ್ರಕ್ಕಾಗಿ ೨೦೧೮ರ ಅತ್ಯತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.  ಗುರುರಾಜಜಗ್ಗೇಶ್ ಅವರೊಂದಿಗೆ ‘ವಿಷ್ಣುಸರ್ಕಲ್,ಕಲಾತ್ಮಕ ಸಿನಿಮಾ ಮಹಿಳಾ ಪ್ರಧಾನದ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಸಿನಿಮಾಗಳು  ತೆರೆಕಾಣಬೇಕಾಗಿದೆ. ಕಾದಲ್‌ವಾನಮ್  ತಮಿಳು ಚಿತ್ರದಲ್ಲಿ ನಟಿಸಿದ್ದರೂ, ಮೊದಲ  ಆದ್ಯತೆ ಕನ್ನಡಕ್ಕೆ ಎಂದು ಭಾಷೆಯ ಬಗ್ಗೆ ಅಭಿಮಾನ ತೋರಿಸುತ್ತಾರೆ ಸಂಹಿತಾವಿನ್ಯಾ.

 

Copyright@2018 Chitralahari | All Rights Reserved. Photo Journalist K.S. Mokshendra,