Beega.Film Press Meet.

Monday, July 01, 2019

394

ಲಾಕ್‌ಆಯ್ತು  ಬೀಗ ಬಂತು

ಕಳೆದ  ವರ್ಷ ಲಾಕ್‌ಎನ್ನುವಚಿತ್ರವೊಂದುತೆರೆಕಂಡಿತ್ತು. ಈಗ ‘ಬೀಗ’ ಎನ್ನುವ ಸಿನಿಮಾದಚಿತ್ರೀಕರಣವುಕಾಡು ಮಲ್ಲೇಶ್ವರದೇವಸ್ಥಾನದಆವರಣದಲ್ಲಿ ಕುಂಬಳಕಾಯಿ ಒಡೆಯುವುದರೊಂದಿಗೆ ಯಶಸ್ವಿಯಾಗಿ ಶೂಟಿಂಗ್‌ನ್ನುಪೂರೈಸಿದೆ.ಸೈಂಟಫಿಕ್, ಥ್ರಿಲ್ಲರ್, ಪ್ರೀತಿಕತೆ ಹೊಂದಿದೆ.ರಂಗಎನ್ನುವ ಮುಖ್ಯ ಪಾತ್ರಧಾರಿಯು ಬೀಗವನ್ನುತೆಗೆದಾಗಒಂದಷ್ಟು ರಹಸ್ಯಗಳು,ಜೊತೆಗೆಒಂದುಅತ್ಯಾಚಾರಘಟನೆಯು ತೆರೆದುಕೊಳ್ಳುತ್ತದೆ. ಐದು ನಿಮಿಷ ಕ್ಷಣಿಕ ಸುಖಕ್ಕೋಸ್ಕರದುರುಳರು ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು.ಅವರುಬದಲಾಗಬೇಕನ್ನುವ ಸಂದೇಶಇರಲಿದೆ.ಪಟ್ಟಣದ ಹಿನ್ನಲೆಯಲ್ಲಿ ನಡೆಯಲಿರುವುದರಿಂದಕ್ಯಾಚಿಇರಲೆಂದುಇದೇ ಹೆಸರನ್ನು ಬಳಸಲಾಗಿದೆ.ಸಂಪೂರ್ಣಚಿತ್ರೀಕರಣ ಬೆಂಗಳೂರಿನಲ್ಲಿ ನಡೆಸಲಾಗಿದೆ.ಅಗ್ರಜ, ಲೀ ಸಿನಿಮಾಗಳಿಗೆ ಆಕ್ಷನ್‌ಕಟ್ ಹೇಳಿರುವ ಕೆ.ಎಂ.ಶ್ರೀನಂದನ್ ಮೂರನೇ ಪ್ರಯತ್ನಎನ್ನುವಂತೆಕತೆ ಬರೆದು  ನಿರ್ದೇಶನ ಮಾಡಿದ್ದಾರೆ.

ರಂಗ ಆಗಿ ಅಮಾನತ್ತುಗೊಂಡಿರುವ ಪೋಲೀಸ್‌ಆಧಿಕಾರಿಯಾಗಿರವಿಶಂಕರ್ ನಟಿಸಿದ್ದಾರೆ. ಮೊಗ್ಗಿನ ಮನಸುದಲ್ಲಿ ಅಭಿನಯಿಸಿದ್ದ ಆಕಾಶ್‌ವಿಜ್ಘಾನಿಯಾಗಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡರೆ, ಕಳ್ಳನಾಗಿ ಇರ್ಫಾನ್‌ನಾಯಕರುಗಳು.ಸಹರ್‌ಆಫ್‌ಶಾ ಮತ್ತು ಅನು ನಾಯಕಿಯರು.  ಉಳಿದಂತೆ ಸುಚೇಂದ್ರಪ್ರಸಾದ್, ಮೈಸೂರುಮೋಹನ್, ಕುಮಾರ್‌ಅರಸೇಗೌಡ,  ಸನ್ನಿವೇಶಕ್ಕೆತಿರುವಕೊಡುವ ಪಾತ್ರದಲ್ಲಿಬೇಬಿ ಶರಣ್ಯ ನಟನೆಇದೆ.  ನವ ಪ್ರತಿಭೆಚೆನ್ನಯ್ಯ ಸಾಹಿತ್ಯದ ಮೂರು ಗೀತೆಗಳಿಗೆ ಗುರುಪ್ರಿಯ ಸಂಗೀತ ಸಂಯೋಜಿಸಿದ್ದಾರೆ. ನಾಲ್ಕು ಫೈಟ್‌ಗಳಿಗೆ ಥ್ರಿಲ್ಲರ್‌ಮಂಜು-ಅಲ್ಟಿಮೇಟ್‌ಶಿವ ಸಾಹಸ, ರೋಷಿತ್‌ಮಾದವನ್‌ಸಹ ನಿರ್ದೇಶನ ಮತ್ತು ಸಂಭಾಷಣೆ, ಎಂ.ಬಿ.ಹಳ್ಳಿಕಟ್ಟಿ ಛಾಯಾಗ್ರಹಣ, ಆರ್.ವಿ.ನಾಗೇಶ್ವರರಾವ್‌ಸಂಕಲನ ನಿರ್ವಹಿಸಿದ್ದಾರೆ .

ಕೊನೆ ದೃಶ್ಯಕ್ಕೆಗುರುಕಿರಣ್‌ಕ್ಯಾಮಾರ್‌ಆನ್ ಮಾಡಿತಂಡಕ್ಕೆ ಶುಭ ಹಾರೈಸಿದರು.  ಪ್ರಚಾರದ ಮೊದಲ ಹಂತವಾಗಿ ಸಿನಿಮಾದಟೀಸರ್‌ನ್ನು ಹಿರಿಯ ನಿರ್ದೇಶಕ ಭಗವಾನ್  ಅನಾವರಣಗೊಳಿಸಿದರು. ವಿಎಂಆರ್ ಪ್ರೊಡಕ್ಷನ್ ಮೂಲಕ ರಮೇಶ್‌ಮುನಿಹನುಮಪ್ಪ ಸಿನಿಮಾ ಕೃಷಿಗೆ ಹಣ ಹೊಡುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,