Aadisinodu Beelisinodu.Film Press Meet.

Monday, July 01, 2019

43

ಬುದ್ದಿವಂತರಿಗೆ ಪ್ರವೇಶದಡ್ಡರಿಗೆ ನೋ ಎಂಟ್ರಿ

ಚಿತ್ರವನ್ನು ಹೇಗಾದರೂಜನರಿಗೆತಲುಪಿಸಬೇಕೆಂದುಚಿತ್ರತಂಡವುಏನಾದರೂ ಗಿಮಿಕ್‌ಗಳನ್ನು ಮಾಡುತ್ತಾರೆ.ಇದುಎಷ್ಟರಮಟ್ಟಿಗೆ ಸಪಲವಾಗುತ್ತದೆಂದುಬಿಡುಗಡೆ ನಂತರ ಫಲಿತಾಂಶ ಸಿಗುತ್ತದೆ.ಆ ಸಾಲಿಗೆ ‘ಆಡಿಸಿ ನೋಡು ಬೀಳಿಸಿ ನೋಡು’ ಚಿತ್ರವೊಂದು ಸೇರ್ಪಡೆಯಾಗುತ್ತದೆ.  ಸಾಹಿತಿ, ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ ಮನೋಜ್‌ಶ್ರೀಹರಿ ಚೊಚ್ಚಲ ಬಾರಿಕತೆ,ಚಿತ್ರಕತೆ, ಗೀತರಚನೆ, ಸಂಗೀತ, ಛಾಯಾಗ್ರಹಣ ಮತ್ತು ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪೋಸ್ಟರ್‌ದಲ್ಲಿ ಈ ಸಿನಿಮಾ ಬುದ್ದಿವಂತರಿಗೆಅರ್ಪಣೆಎಂದು ಹೇಳಲಾಗಿದ್ದು, ಇದರ ಬಗ್ಗೆ ಮಾದ್ಯಮದಿಂದ ಪ್ರಶ್ನೆತೂರಿಬಂತು.ಇದಕ್ಕೆ ಉತ್ತರಿಸಿದ ನಿರ್ದೇಶಕರು ಬುದ್ದಿವಂತರಿಗೆ ಪ್ರವೇಶವಿದೆ.ದಡ್ಡರಿಗಲ್ಲ. ಕತೆಗಳ ಒಳಗೊಂದು ಕತೆಗಳು ಇರುವಕಾರಣ ಮೊದಲ ಪ್ರಯತ್ನ ನಮ್ಮದಾಗಿದೆ.  ವಿರಾಮದ ವರೆಗೂಗೊಂದಲದಲ್ಲಿಇರಲಿದ್ದು, ತಾಳ್ಮೆಯಿಂದ ನೋಡಿದಾಗಎಲ್ಲವುಅರ್ಥವಾಗುತ್ತದೆ.ಅದಕ್ಕಾಗಿಈ  ರೀತಿ ಹೇಳಲಾಗಿದೆ.  ಉಪ್ಪಿ ಸರ್‌ಅಭಿಮಾನಿ, ಅವರ ಪ್ರೇರಣೆಯಿಂದಎಂದುತೆರೆದ ಮನಸ್ಸಿನಿಂದ ಒಪ್ಪಿಕೊಂಡರು.

ನಮ್ಮಗಳ ಜೀವನದಲ್ಲಿ ನಡೆಯುವ ಸಂದರ್ಭಗಳು, ಸನ್ನಿವೇಶಗಳು ಶೀರ್ಷಿಕೆಯಂತೆ ಆದಾಗಯಾರು ಸೋಲ್ತಾರೆ, ಗೆಲ್ತಾರೆ.ಯುವತಂಡವೊಂದುಕಷ್ಟುಪಟ್ಟು ಕೆಲಸ ಮಾಡುತ್ತಾರೆ.ಒಂದು ಹಂತದಲ್ಲಿತೊಂದರೆಆದಾಗ,ಅದನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ  ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿ, ಹಾಸನ, ಚಿಕ್ಕಮಗಳೂರು, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹೊಸಬರಾದಕಾವ್ಯ, ಸೋಮ, ಮಂಜುನಾಥ್‌ಬಿರಾದಾರ್, ಯೋಜರಾಜ್‌ಶ್ರೀಹರಿ ಇವರೊಂದಿಗೆ ಪತ್ರಕರ್ತೆಯಾಗಿಆಶಾಭಂಡಾರಿ ನಾಯಕಿ.

ವಿಶೇಷ ರೀತಿಯಲ್ಲಿಎಟಿಎಂಕಾರ್ಡ್‌ನಂತೆಅದರಲ್ಲಿ ಅಳವಡಿಸಲಾಗಿದ್ದ ಹಾಡುಗಳನ್ನು  ಅಯೋಗ್ಯನಾಯಕನೀನಾಸಂಸತೀಶ್ ಅನಾವರಣಗೊಳಿಸಿದರು. ಅವರು ಮಾತನಾಡುತ್ತಾ ಹೊಸದಾಗಿ ಬರುವ ನಿರ್ಮಾಪಕರು, ನಿರ್ದೇಶಕರು ತಿಳಿದುಕೊಂಡು ಉದ್ಯಮಕ್ಕೆ ಬರುವುದು ಒಳಿತು.ಇಡೀಜೀವನದಲ್ಲಿಕಷ್ಟಪಟ್ಟುದುಡಿದ ಹಣವನ್ನುಇಲ್ಲಿಗೆ ಹಾಕಿ ಬಂಡವಾಳ ವಾಪಸ್ಸು  ಬಾರದಿದ್ದರೆ ಭವಿಷ್ಯದಲ್ಲಿ ನೋವನ್ನುಕಾಣಬೇಕಾಗುತ್ತದೆ. ಎಚ್ಚರಿಕೆಯಿಂದ ಹೆಜ್ಜೆಇಡುವುದು. ನಾನು ಇದೇರೀತಿ ಮಾಡಿಸೋತುಜಿಗುಪ್ಷೆಗೊಂಡು ಮೂರು ವರ್ಷ ಹಿಂದಕ್ಕೆ ಹೋಗಿದ್ದೆ. ಪ್ರಾರಂಭದಲ್ಲಿ ನಿಮ್ಮಂತೆ ನನಗೂ ಆಗಿತ್ತು.ಮುಂದೆ ನನ್ನಜಾಗದಲ್ಲಿ ನೀವುಗಳು ನಿಲ್ಲಬೇಕೆಂದು ಶುಭಹಾರೈಸಿದರು. ಪೂರ್ಣಚಂದ್ರತೇಜಸ್ವಿ ಹೊರತಂದಿರುವ ‘ಹಾಡಿಯೋ’ದಕಾರ್ಡ್‌ನಲ್ಲಿಗೂಗಲ್‌ಲೆನ್ಸ್‌ಮೂಲಕ ಹಾಡುಗಳನ್ನು  ಆಲಿಸಬಹುದಾಗಿದೆ.  ಹಾಸನದ ಮನುಗೌಡ ನಿರ್ಮಾಪಕರು, ಶಿವಪ್ರಸಾದ್-ಮೋಹನ್.ಡಿಸಿ ಸಹನಿರ್ಮಾಪಕರಾಗಿಚಿತ್ರಕ್ಕೆಇಲ್ಲಿಯವರೆಗೂ ೯೦ ಲಕ್ಷ ಹಣ ಹೂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,