Khanana.Film 50 Days Celb.

Monday, July 01, 2019

41

ಯೋಜನಾ ವರದಿ ಸಿದ್ದಪಡಿಸಿ ಚಿತ್ರ ಮಾಡಿ - ನೂತನಅಧ್ಯಕ್ಷರು

ಇತ್ತೀಚೆಗೆ ಹೊಸ ಚಿತ್ರಗಳು ಹೆಚ್ಚು ಬರುತ್ತಿದ್ದರೂಯಶಸ್ಸುಎನ್ನುವುದು ಬಹಳ ಕಡಿಮೆಇದೆಎಂದುಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಅಧಿಕಾರ ಸ್ವೀಕರಿಸಿದ ಡಿ.ಆರ್.ಜೈರಾಜ್ ಮೊದಲ ಕಾರ್ಯಕ್ರಮ  ‘ಖನನ’ ಚಿತ್ರದ ೫೦ನೇ ದಿನದ ಸಮಾರಂಭಕ್ಕೆ ಆಗಮಿಸಿದ್ದರು. ಅವರು ಮಾತನಾಡಿಜನರುಆಯ್ಕೆ ಮಾಡಿಚಿತ್ರಮಂದಿರಕ್ಕೆ ಬರುತ್ತಾರೆ.ಸಿಂಗಲ್ ಪರದೆಗಳ ಟಾಕೀಸ್‌ಗಳು ನಶಿಸಿ ಹೋಗುತ್ತಿದೆ. ಹೊಸದಾಗಿ ಬರುವ ನಿರ್ಮಾಪಕರು,ನಿರ್ದೇಶಕರುಯೋಜನಾ ವರದಿ ಸಿದ್ದಪಡಿಸಿಕೊಂಡು ಬರುವುದಿಲ್ಲ. ಇದರಿಂದ ಸಿನಿಮಾಗಳು ಹೆಚ್ಚು ದಿನ  ನಿಲ್ಲದೆ ಬಂಡವಾಳ ಲುಕ್ಸಾನುಆಗುತ್ತಿದೆ. ನುರಿತತಂತ್ರಜ್ಘರು, 

ನಿರ್ಮಾಪಕರಿಂದ ಸಲಹೆ ಪಡೆದುಕೊಂಡು ಬಂದರೆ ಹೆಚ್ಚಿನ ಮಟ್ಟದಅಪಾಯಒದಗುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ  ಪ್ರತ್ಯೇಕವಾಗಿ ಹಾಗೂ ಚಿತ್ರಮಂದಿರ ಹೂರಗಡೆ ಪೋಸ್ಟರ್ ಹಾಕಲು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ. ಅವರಿಂದ ಸೂಕ್ತ ಸ್ಪಂದನೆ ಸಿಗಬಹುದೆಂಬ ಆಶಾಭಾವನೆಇದೆ.  ಇಂದಿನ ಪರಿಸ್ಥಿತಿಯಲ್ಲಿ ಐವತ್ತನೇ ದಿನವೆಂದರೆ  ಹಬ್ಬದ ದಿನವಾಗಿದೆ. ಇಂತಹ ಫಲಕಗಳಿಗೆ ಬೆಲೆ ಕಟ್ಟೋಕೆ ಆಗುವುದಿಲ್ಲವೆಂದುಫಲಕಗಳನ್ನು ವಿತರಿಸಿದರು.

ನಿರ್ದೇಶಕರಾಧ, ನಿರ್ಮಾಪಕ ಶ್ರೀನಿವಾಸರಾಜು, ನಾಯಕಆರ್ಯವರ್ಧನ್ ಮತ್ತುವಿತರಕ ಬಾಷಾ ಮೆಮೊಂಟೋಗಳನ್ನು ಸ್ವೀಕರಿಸಿದರು. ಇದೇ  ಯಶಸ್ಸಿನಿಂದ ಶ್ರೀನಿವಾಸರಾಜುಎರಡನೆ ಬಾರಿ ಮಗನಿಗೋಸ್ಕರಐವಿರಾಎಂಟರ್‌ಟೈನ್‌ಮೆಂಟ್‌ಅವರೊಂದಿಗೆಕೈಜೋಡಿಸಿ ಮತ್ತೋಂದುಥ್ರಿಲ್ಲರ್, ಮರ್ಡರ್, ಮಿಸ್ಟರ್‌ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಆರ್ಯವರ್ಧನ್, ರವಿಹಿಸ್ಟರಿದಲ್ಲಿ ನಟಿಸಿದ್ದಕಾರ್ತಿಕ್‌ಚಂದ್ರ ನಾಯಕರಾಗಿ ನಟಿಸುತ್ತಿರುವ ಫಸ್ಟ್ ಲುಕ್ ಅನಾವರಣಗೊಂಡಿತು. ಮೈಸೂರಿನರಾಹುಲ್‌ವೀರಯ್ಯ ನಿರ್ದೇಶಕ.ಟೈಟಲ್, ತಾರಗಣ, ತಂತ್ರಜ್ಘರ ಸದ್ಯದಲ್ಲೆಆಯ್ಕೆಯಾಗಲಿದೆ.ಪದಾದಿಕಾರಿಗಳಾದ ಕರಿಸುಬ್ಬು, ಉಮೇಶ್‌ಬಣಕಾರ್, ಎನ್.ಎಂ.ಸುರೇಶ್ ಉಪಸ್ತಿತರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,