ಫ್ಯಾಂಟಸಿ ಚಿತ್ರ ಕಾಣದಂತೆ ಮಾಯವಾದನು
ಬಾಹುಬಲಿ ನಿರ್ದೇಶಕ ರಾಜಮೌಳಿ ಅಭಿಮಾನಿಯಾಗಿರುವ ರಾಜ್ ಪತ್ತಿಪಾಟಿ ಅವರದೇ ರೀತಿಯ ‘ಕಾಣದಂತೆ ಮಾಯವಾದನು’ ಫ್ಯಾಂಟಸಿ, ಆಕ್ಷನ್, ಕಾಮಿಡಿ, ಲವ್ ಕುರಿತಾದ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ನಾಲ್ಕು ವರ್ಷಗಳ ಹಿಂದೆ ಶುರು ವಾಗಿದ್ದ ಚಿತ್ರವು ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಕಥಾನಾಯಕ ರಮ್ಮಿ ಪ್ರಾರಂಭದಲ್ಲೆ ರೂಕ್ಷನೊಬ್ಬನಿಂದ ಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂ ಆತ್ಮ ಅಲ್ಲಿಯೇ ಇರುತ್ತದೆ. ಎಲ್ಲಾ ಚಿತ್ರದಲ್ಲಿ ಆತ್ಮಕ್ಕೆ ಪವರ್ ಇರುತ್ತದೆ. ಇದರಲ್ಲಿ ಆ ರೀತಿ ಇರದೆ ತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತು ಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಪ್ರೀತಿಸಿದ ಹುಡುಗಿಗೆ ಇವನು ಶೀರ್ಷಿಕೆಯಾಗಿರುತ್ತನೆ. ಭಟ್ಟರ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶನ, ಜಯಮ್ಮನ ಮಗ ಚಿತ್ರಕ್ಕೆ ನಿರ್ದೇಶನ ಮಾಡಿರುವ ವಿಕಾಸ್ ನಾಯಕ ಮತ್ತು ನಿರ್ದೇಶಕರಿಗೆ ಡೈಲಾಗ್ ವಿಚಾರದಲ್ಲಿ ಪ್ರೋತ್ಸಾಹ ನೀಡಿದ್ದಾರೆ.
ಸಿಂಧೂಲೋಕನಾಥ್ ಎನ್ಜಿಓದಲ್ಲಿ ಕೆಲಸ ಮಾಡುತ್ತಾ, ನಿರ್ಗತಿಕರಿಗೆ ಕೈಲಾದಷ್ಟು ಸೇವೆ ಮಾಡುವ ಪಾತ್ರದಲ್ಲಿ ನಾಯಕಿ. ಸೀನಿಯರ್ ಆತ್ಮವಾಗಿ ಅಚ್ಯುತಕುಮಾರ್, ಖಳನಟ ಉದಯ್ ಬದುಕಿದ್ದಾಗ ನಾಯಕನನ್ನು ಕೊಲ್ಲುವ ದುಷ್ಟ. ಮುಂದೆ ವಿಜಯ್ ಸಿನಿಮಾದಲ್ಲಿ ಸಾಹಸ ಮಾಡಲು ಹೋಗಿ ಮರಣಗೊಂಡಿದ್ದರು. ಅದೇ ಪಾತ್ರಕ್ಕೆ ಭಜರಂಗಿ ಲೋಕಿ ವಿರಾಮದ ನಂತರ ಕಾಣಿಸಿಕೊಂಡಿದ್ದಾರೆ. ಟ್ರಕ್ ಚಾಲಕ, ಆಕಸ್ಮಿಕವಾಗಿ ಲಕ್ಷ ಸಿಗುತ್ತದೆ. ಅದು ಎಲ್ಲಿಂದ ಬಂತು ಎಂದು ತಿಳಿಯುವಷ್ಟರಲ್ಲೆ ಕಷ್ಟಕ್ಕೆ ಸಿಲುಕಿ ಅದರಿಂದ ತಪ್ಪಿಸಿಕೊಂಡು ಹೂರಬರುವ ಹಾಸ್ಯ ಪಾತ್ರಕ್ಕೆ ಧರ್ಮೇಂದ್ರ, ತಾಯಿಯಾಗಿ ಸೀತಾಕೋಟೆ ಮುಂತಾದವರು ನಟಿಸಿದ್ದಾರೆ. ಗುಮ್ಮಿನೇನಿವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುಜ್ಘಾನ್ಮೂರ್ತಿ, ಸಂಕಲನ ಸುರೇಶ್ಆರುಮುಗಮ್, ಸಾಹಸ ವಿನೋಧ್ ನಿರ್ವಹಿಸಿದ್ದಾರೆ. ಶಿಷ್ಯನ ಚಿತ್ರಕ್ಕೆ ಶುಭಹಾರೈಸಲು ಯೋಗರಾಜಭಟ್ ಆಗಮಿಸಿ ತಂಡದ ಶ್ರಮವನ್ನು ಶ್ಲಾಘಿಸಿದರು. ನಿರ್ದೇಶಕರ ತಂದೆ ಚಂದ್ರಶೇಖರ್ನಾಯ್ಡು, ಇವರೊಂದಿಗೆ ಸೋಮ್ಸಿಂಗ್,ಪುಷ್ಟಸೋಮ್ಸಿಂಗ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಏನೇ ಆದರೂ ಮುಂದಿನ ತಿಂಗಳು ತಪ್ಪದೆ ಜನರಿಗೆ ತೋರಿಸಲು ತಂಡವು ಯೋಜನೆ ಹಾಕಿಕೊಂಡಿದೆ. ಪ್ರಚಾರದ ಸಲುವಾಗಿ ತುಣುಕುಗಳನ್ನು ಮಾದ್ಯಮದವರಿಗೆ ತೋರಿಸಲಾಯಿತು.