Gnanam.Film Audio Rel

Tuesday, July 02, 2019

44

ಬುದ್ದಿಮಾಂದ್ಯರು  ದೇವರ ಮಕ್ಕಳು

        ಪ್ರಯೋಗಾತ್ಮಕ ಚಿತ್ರ  ‘ಜ್ಘಾನಂ’ ಚಿತ್ರವು  ಈಗಾಗಲೇ ಹನ್ನೊಂದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಚಿತ್ರವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರದರಾಜ್‌ವೆಂಕಟಸ್ವಾಮಿ ಮನೆಯ ಪಕ್ಕದಲ್ಲಿ ಬುದ್ದಿಮಾಂದ್ಯ ಮಗುವೊಂದರ ಚಲನವಲನಗಳನ್ನು ಕಂಡು ಅದರ ಪ್ರೇರಣೆಯಿಂದ ಕತೆ,ಚಿತ್ರಕತೆ,ಸಾಹಿತ್ಯ,  ಸಂಭಾಷಣೆ ಬರೆದು ಸಂಕಲನ, ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಒಂದೇ ದಿನದಂದು ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೋಬ್ಬ ಬುದ್ದಿಮಾಂದ್ಯನಾಗಿರುತ್ತಾನೆ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ಶಕ್ತಿ ಹೇಗಿದೆ ಅನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.  ಇಂತಹುದೆ ಗುಣವಿರುವ ಪಾತ್ರದಲ್ಲಿ ಮಾಸ್ಟರ್ ಧ್ಯಾನ್. ಇದೇ ರೀತಿ ಮಕ್ಕಳು ಇರುವ ಸ್ಥಳಕ್ಕೆ ಭೇಟಿ ನೀಡಿ ಅವರ ಚಲನವಲನಗಳನ್ನು ಕಂಡು ಕ್ಯಾಮಾರ ಮುಂದೆ ನಿಂತಿದ್ದಾರೆ.  ಬುದ್ದಿವಂತನಾಗಿ ಲೋಹಿತ್ ಐದು ಪುಟದ ಸಂಭಾಷಣೆಯನ್ನು ಒಂದೇ ಟೇಕ್‌ಗೆ ಓಕೆ ಮಾಡಿದ್ದಾನಂತೆ.

      ಧೀರ್ಘ ಗ್ಯಾಪ್ ನಂತರ  ಹಿರಿಯ ನಟ ದಿ.ಸುದರ್ಶನ್ ಪತ್ನಿ ನಟಿ ಶೈಲಶ್ರೀ ಬಣ್ಣ ಹಚ್ಚಿದ್ದಾರೆ. ಮಕ್ಕಳು ಎಷ್ಟೇ ಪ್ರೀತಿ ತೋರಿಸಿದರೂ ಅಸಡ್ಡೆಯಿಂದ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಿ.ವೇಣುಭಾರದ್ವಾಜ್, ರಾಧಿಕಾಶೆಟ್ಟಿ, ಸಂತೋಷ್,ಜ್ಯೋತಿಮುರೂರು, ನವ್ಯ, ಕುಶಾಲ್‌ನಾರಾಯಣ್ ಸೇರಿದಂತೆ ದೊಡ್ಡ ತಾರಗಣವಿದೆ.  ಆಡಿಯೋ  ಸಿಡಿ ಅನಾವರಣಗೊಳಿಸಿದ ಲಹರಿವೇಲು ಮಾತನಾಡಿ ಇಂತಹ ಮಕ್ಕಳು ಎನ್ನುವಾಗ ಯಾವ ರೀತಿ ನೋಡುತ್ತಾರೆಂದು ತಿಳಿದಿದೆ. ಅಂತಹವರು ದೇವರಮಕ್ಕಳು. ಇವರನ್ನು ಚೆನ್ನಾಗಿ ನೋಡಿಕೊಳ್ಳುವ ಪೋಷಕರಿಗೆ ನೋವಾಗದಂತೆ ಮಾತನಾಡಬೇಕು ಎಂದು ಅಭಿಪ್ರಾಯಪಟ್ಟರು. ಹಾಡುಗಳಿಗೆ ರೋಹಿತ್‌ಸೋವರ್ ಸಂಗೀತ ಸಂಯೋಜನೆ ಜೊತೆಗೆ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಬಾಕಿ ಎರಡು ಗೀತೆಗಳನ್ನು  ಸ್ವರ್ಶಾ ಹಾಡಿದ್ದಾರೆ.

      ಕಾರ್ಯಕ್ರಮದಲ್ಲಿ ಟ್ರೈಲರ್, ಲಿರಿಕಲ್ ವಿಡಿಯೋ ಹಾಡುಗಳು ಪ್ರದರ್ಶನಗೊಂಡಿತು. ಸಹೋದರರಾಗಿರುವ  ಸಿ.ವೇಣುಭಾರದ್ವಾಜ್ ಮತ್ತು ಸಿ.ರಾಜ್‌ಭಾರದ್ವಾಜ್ ತಾಯಿ  ‘ವಸಂತ ಸಿನಿ ಕ್ರಿಯೇಶನ್’ ಮೂಲಕ ನಿರ್ಮಾಣ ಮಾಡಿರುವ ಸಿನಿಮಾವು ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆ ಇದೆ. 

 

Copyright@2018 Chitralahari | All Rights Reserved. Photo Journalist K.S. Mokshendra,