Kilaadi Police.Film Press Meet.

Tuesday, July 02, 2019

61

ತಿರುಡನ್ ಪೋಲೀಸ್ ಇಲ್ಲಿ ಕಿಲಾಡಿ ಪೋಲೀಸ್

        ೨೦೧೫ರ ತಮಿಳು ಚಿತ್ರ ಸ್ಯಾಂಡಲ್‌ವುಡ್‌ದಲ್ಲಿ ‘ಕಿಲಾಡಿ ಪೋಲೀಸ್’ ಹೆಸರಿನಲ್ಲಿ ಶೂಟಿಂಗ್ ಮುಗಿಸಿ ಚಿತ್ರಿಕರಣೋತ್ತರ ಕೆಲಸದಲ್ಲಿ ಬ್ಯುಸಿ ಇದೆ. ಶ್ರೀ ಸತ್ಯ ನಾರಾಯಣ ಸಿನಿಮಾಕ್ಕೆ  ಒಂದೇ ಸಲ ಹದಿನಾರು ಪಾತ್ರಗಳಲ್ಲಿ ನಟಿಸಿ ಗಿನ್ನಿಸ್ ದಾಖಲೆಗೆ ಅರ್ಹರಾಗಿದ್ದ ಹರೀಶ್‌ರಾಜ್ ಕಾಲಿವುಡ್, ಮಾಲಿವುಡ್‌ನ ದೊಡ್ಡ ಚಿತ್ರಗಳಲ್ಲಿ  ಬ್ಯುಸಿ ಇದ್ದರು. ಆದರೂ ಭಾಷೆಯ ಅಭಿಮಾನದಿಂದ ವರ್ಷಗಳ ನಂತರ ಇವರು ನಾಯಕ,ಎರಡು ಗೀತೆಗೆ ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಪೋಲೀಸ್ ಕ್ವಾರ್ಟಸ್‌ದಲ್ಲಿ ನಡೆಯುವ ಕತೆಯಲ್ಲಿ ತಂದೆ ಮಗನ ಬಾಂದವ್ಯ ಇರಲಿದ್ದು,  ಅಪ್ಪ ಪೇದೆ ಆಗಿದ್ದಾಗ ಹೀಯಾಳಿಸುತ್ತ, ಸೋಮಾರಿಯಾಗಿರುತ್ತಾನೆ. ಮುಂದೆ ಇನ್ಸ್‌ಪೆಕ್ಟರ್ ಆದಾಗ ಕಾನ್ಸ್‌ಸ್ಟೇಬಲ್ ಕೆಲಸ ಎಷ್ಟು ಕಷ್ಟವೆಂದು  ಅರಿವು ಬರುತ್ತದೆ. ನಂತರ ಕಾನೂನನ್ನು ಹೇಗೆ ಕಾಪಾಡುತ್ತಾನೆ ಎಂಬುದು ಆಕ್ಷನ್ ರೂಪದಲ್ಲಿ ಬರುತ್ತದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕೊಡಗಿನ ಸಾನ್ವಿಪೊನ್ನಪ್ಪ ನಾಯಕಿ. ಶಾಸಕನಾಗಿ ಅನಂತವೇಲು, ಇನ್ಸ್‌ಪೆಕ್ಟರ್‌ಗಳಾಗಿ ಶೋಭರಾಜ್, ರಮೇಶ್‌ಪಂಡಿತ್, ಎಸಿಪಿಯಾಗಿ ಸುಚೇಂದ್ರಪ್ರಸಾದ್, ಪೋಷಕರಾಗಿ  ಶ್ರೀನಿವಾಸಮೂರ್ತಿ-ಪದ್ಮವಾಸಂತಿ, ರೌಡಿಗಳಾಗಿ ಮುನಿ, ಮೋಹನ್‌ಜುನೇಜ, ಗೆಳಯನಾಗಿ ಗಿರಿ ಮುಂತಾದವರು ನಟಿಸಿದ್ದಾರೆ.

       ಸಂತೋಷ್‌ನಾಯಕ್, ಎಸ್‌ಐಡಿ. ವಿ.ಮನೋಹರ್ ಸಾಹಿತ್ಯದ ಒಟ್ಟು ಐದು ಹಾಡುಗಳಿಗೆ ಎಲ್ವಿನ್‌ಜೋಶ್ವ ಸಂಗೀತ ಸಂಯೋಜಿಸಿದ್ದಾರೆ. ಹಿರಿಯ ಛಾಯಾಗ್ರಾಹಕ ಜಿ.ಜೆ.ಕೃಷ್ಣ ಪುತ್ರ ಜೆ.ಕೆ.ದೀಪಕ್‌ಕುಮಾರ್  ಕ್ಯಾಮಾರಮನ್ ಆಗಿ ಪಾದರ್ಪಣೆ ಮಾಡಿದ್ದಾರೆ. ರಚನೆ ಕಾರ್ತಿಕ್‌ರಾಜು, ಸಂಕಲನ ಸುರೇಶ್-ಜೀವನ್, ನೃತ್ಯ ಮುರಳಿ, ಸಂಭಾಷಣೆ ಶರವಣಪ್ರಭು, ಸಾಹಸ ಡಿಫರೆಂಟ್‌ಡ್ಯಾನಿ, ಹಿನ್ನಲೆ ಶಬ್ದ ರೊನ್ನಿರ‍್ಯಾಫಲ್ ಅವರದಾಗಿದೆ. ಮುಂದಿನ ದಿನಗಳಲ್ಲಿ ಧ್ವನಿಸಾಂದ್ರಿಕೆ ಅನಾವರಣಗೊಳಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ. ಹರೀಶ್‌ರಾಜ್  ಪ್ರೊಡಕ್ಷನ್ ಮೂಲಕ ನಿರ್ಮಾಣವಾಗಿರುವ ಚಿತ್ರವು ಆಗಸ್ಟ್‌ದಲ್ಲಿ ಬರುವ ಸೂಚನೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,