Kurukshetra 3D.Film Press Meet.

Saturday, August 03, 2019

49

ಮುನಿರತ್ನ  ಕುರುಕ್ಷೇತ್ರ  ಮಾತುಗಳು

        ಸತತ ಎರಡು ವರ್ಷಗಳಿಂದ ಸುದ್ದಿಯಾಗಿದ್ದ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೆ ತೆರೆಗೆ ಬರಲು ಸಿದ್ದವಾಗಿದೆ. ಅದರಂತೆ ಕೊನೆಬಾರಿ ತಂಡವು  ಸಿನಿಮಾ ಹಿಂದಿನ ಶ್ರಮದ ಸಣ್ಣ ತುಣುಕುಗಳನ್ನು ತೋರಿಸಿ ಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು. 

ಮುನಿರತ್ನ, ನಿರ್ಮಾಪಕ; ಎರಡನೇ ತಾರೀಖು ಬರಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷೀ ಹಬ್ಬ ಶುಭದಿನವೆಂದು ಹಿತೈಷಿಗಳು ಸಲಹೆ ನೀಡಿದ್ದರಿಂದ ಒಂದು ವಾರ ಮುಂದಕ್ಕೆ ಹೋಗಲಾಗಿದೆ. ವಿತರಣೆಯನ್ನು ರಾಕ್‌ಲೈನ್ ಸಂಸ್ಥೆಯು ವಹಿಸಿಕೊಂಡಿದೆ. ೨ಡಿ,೩ಡಿಯಲ್ಲಿ ಎರಡು ಸಲ ಚಿತ್ರೀಕರಣ ನಡೆಸಿ, ಡಬ್ಬಿಂಗ್ ಮಾಡಲಾಗಿದೆ. ಇದರಲ್ಲಿ ದರ್ಶನ್ ಶ್ರಮ ಜಾಸ್ತಿ ಇದೆ. ಅಂಬರೀಷ್ ಕೊನೆ ಚಿತ್ರವೆಂದು ಹೇಳಿಕೊಳ್ಳಲು ಬೇಸರವಾಗುತ್ತದೆ. ಮಹಾಭಾರತದಲ್ಲಿ ಒಬ್ಬೋರನ್ನು ತೆಗೆದುಕೊಂಡರೂ ಕತೆ ಮಾಡಬಹುದು. ಪರಭಾಷಾ ಚಿತ್ರಗಳ ಎದುರು ನಾವುಗಳು ಪೈಪೋಟಿ ನಡೆಸಬೇಕಾಗಿದೆ. ಇಂತಹ ಸಿನಿಮಾಗಳು ಬಂದ್ರೆ ಕನ್ನಡ ಚಿತ್ರರಂಗ ಬೆಳಯುತ್ತದೆ.

ಶಶಿಕುಮಾರ್, ಧರ್ಮರಾಯ: ಇಂತಹ ಚಿತ್ರಗಳು ಮೈಲಿಗಲ್ಲಾಗಲಿದೆ.

ಡ್ಯಾನಿಷ್‌ಅಕ್ತರ್, ಭೀಮ: ದುರ್ಯೋಧನ ಹೋರಾಟದ ಚಿತ್ರೀಕರಣವನ್ನು ೨೦ ದಿವಸ ತೆಗೆಯಲಾಗಿದ್ದು ಮರೆಯಲಾಗದ ಅನುಭವ.

ರವಿಶಂಕರ್,ಶಕುನಿ: ರಾಮಾಯಣ, ಮಹಾಭಾರತದ ಯಾವ ಪಾತ್ರದಲ್ಲರೂ ನಟಿಸಬೇಕೆಂಬ ಬಯಕೆ ಇದರಿಂದ ಕೈಗೂಡಿದೆ. ನಂತರ ಒಂದೇ ಟೇಕ್,ಶಾಟ್‌ನಲ್ಲಿ ಚಿತ್ರೀಕರಿಸಿದ ದೃಶ್ಯದ ಡೈಲಾಗ್‌ನ್ನು ಹೇಳಿದರು.

ರಾಕ್‌ಲೈನ್‌ವೆಂಕಟೇಶ್, ವಿತರಕ: ಶಲ್ಯ ಮಹಾರಾಜನಾಗಿ ಕಾಣಿಸಿಕೊಂಡಿದ್ದೇನೆ. ಎಲ್ಲಾ ಕಡೆಗಳಿಂದ ಬೇಡಿಕೆ ಬರುತ್ತಿರುವುದರಿಂದ ವಿತರಣೆ ಮಾಡಲು ಕಷ್ಟವಾಗುತ್ತಿಲ್ಲ. ೨ಡಿ,೩ಡಿಯಲ್ಲಿ ಸಿದ್ದವಾಗಿರುವುದರಿಂದ ಎಲ್ಲರ ಕೆಲಸ ಜಾಸ್ತಿ ಇದೆ. ಮೊದಲ ೩ಡಿ ಚಿತ್ರ ಚೋಟಾಚೇತನ್ ಸಿನಿಮಾವನ್ನು ಜನರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅದರಂತೆ ಕುರುಕ್ಷೇತ್ರ ಆಗಲಿದೆ. ಪ್ರಸಕ್ತ ಯುವಜನಾಂಗಕ್ಕೆ ರಾಮಾಯಣ-ಮಹಾಭಾರತ ತಿಳಿದಿಲ್ಲ. ಇದನ್ನು ನೋಡಿದಾಗ ಮಕ್ಕಳಿಗೆ ಮುಂದೆಯೂ ಇದು ಶಾಶ್ವತವಾಗಿ ಉಳಿಯುತ್ತದೆ. ಮೊದಲು ಕನ್ನಡ-ತೆಲುಗು ಬಿಡುಗಡೆ ಮಾಡಲಾಗುವುದು. ಒಂದುವಾರ ಅಂತರದಂತೆ ತಮಿಳು, ಹಿಂದಿಯಲ್ಲಿ ಜನರಿಗೆ ತೋರಿಸಲು  ಯೋಜನೆ ಹಾಕಲಾಗಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಇಂದಿನಿಂದ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಡಾ.ನಾಗೇಂದ್ರಪ್ರಸಾದ್, ಸಂಭಾಷಣೆ,ಸಾಹಿತ್ಯ: ಸುಯೋಧನ ದೃಷ್ಟಿಯಿಂದ ಕುರುಕ್ಷೇತ್ರ ಮುಖ್ಯ ಪಾತ್ರ ಹೋಗುತ್ತದೆ. ಸುಯೋಧನ ದುಯೋರ್ಧನ ಹೇಗೆ ಆಗುತ್ತಾನೆಂದು ತೋರಿಸಲಾಗಿದೆ. ಅದ್ಬುತ ಮಹಾಕಾವ್ಯದಲ್ಲಿ ಕೆಲಸ ಮಾಡಿದ್ದು ಸಂತಸ ತಂದಿದೆ. ಮೆಜಸ್ಟಿಕ್ ನಿಂದ ಕುರುಕ್ಷೇತ್ರ ಚಿತ್ರಗಳಿಗೆ ಸಾಹಿತ್ಯ ರಚಿಸಿದ್ದು ಹೆಮ್ಮೆ ಅನಿಸಿದೆ.

ದರ್ಶನ್, ದುಯೋರ್ಧನ: ಆಗಸ್ಟ್ ೯, ೨೦೧೭ರಂದು ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಅದೇ ದಿನದಂದು ಬಿಡುಗಡೆಯಾಗುತ್ತಿರುವುದು ಕಾಕತಾಳೀಯವಾಗಿದೆ. ನಿಜವಾದ ಹೀರೋ  ನಿರ್ಮಾಪಕರು. ಅದ್ದೂರಿ ಚಿತ್ರಕ್ಕೆ ಹಣ ಹೂಡುವುದು ಸುಲಭದ ಮಾತಲ್ಲ. ಪ್ರತಿ ಪಾತ್ರದ ಲುಕ್ಕು, ಕಾಸ್ಟ್ಯೂಮ್ ಎಲ್ಲವನ್ನು ಅವರೇ ನೋಡಿದ್ದಾರೆ. ಈಗಿನ ತಲೆಮಾರಿಗೆ ದುಯೋರ್ಧನ, ಭೀಮ ಯಾರು ಅಂತ ತಿಳಿದಿರುವುದಿಲ್ಲ. ನಾಗೇಂದ್ರಪ್ರಸಾದ್ ಸಂಭಾಷಣೆ ಪ್ರತಿ ಪಾತ್ರಕ್ಕೂ ಅಂಕ ಗಳಿಸಲು ಅವಕಾಶ ಸಿಕ್ಕಿದೆ.  ೧೯೭೦ ರಿಂದ ೨೦೧೯ರ ವರೆಗಿನ ಕಲಾವಿದರು ನಟನೆ ಮಾಡಿರುವುದು ವಿಶೇಷ, ಅಂಬಿಯಣ್ಣ ಬಣ್ಣ ಹಚ್ಚಿದ ಮೇಲೆ ಎಷ್ಟೇ ಕಷ್ಟ ಇದ್ದರೂ ಪಾತ್ರದಲ್ಲಿ ತಲ್ಲೀನರಾಗುತ್ತಿದ್ದರು. ಆಗ ಬಣ್ಣದ ಬೆಲೆ ತಿಳಿಯಿತು. ಚಿತ್ರದಲ್ಲಿ ದೊಡ್ಡವರು,ಚಿಕ್ಕವರು ಅಂತ ನೋಡಬೇಡಿ. ಇಂತಹ ಚಿತ್ರ ಗೆದ್ದರೆ ನಿರ್ಮಾಪಕರು ಹುಟ್ಟಿಕೊಳ್ತಾರೆ.  ೨ಡಿ, ೩ಡಿ ಬೇರೆ ರೀತಿ ಇರುವುದರಿಂದ ಎರಡನ್ನು ಪ್ರತ್ಯೇಕವಾಗಿ ನೋಡಬೇಕು.  ನಿರ್ಮಾಪಕರು ಒಂದು ಚಿತ್ರಕ್ಕೆ ಸಂಭಾವನೆ ನೀಡಿ ಎರಡು ಕೆಲಸ ಮಾಡಿಸಿಕೊಂಡಿದ್ದಾರೆಂದು ಹಾಸ್ಯ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮುನಿರತ್ನ  ಮಾತನಾಡಿ   ಜನರ ಮೊದಲ ಟಿಕೆಟ್  ನಿರ್ಮಾಪಕರಿಗೆ, ಎರಡನೆ ಟಿಕೆಟ್ ದರವನ್ನು  ದರ್ಶನ್ ಕೊಡಲಾಗುವುದು ಎಂದರು.

ಭೀಮನಾಗಿ ಡ್ಯಾನಿಷ್‌ಅಕ್ತರ್, ಅರ್ಜುನನಾಗಿ ಸೋನುಸೂದ್, ಭಾನುಮತಿಯಾಗಿ  ಮೇಘನಾರಾಜ್, ದುಶ್ಯಾಸನ ರವಿಚೇತನ್, ದುಷ್ಟನಾಗಿ ವಾಸು, ಸಹದೇವನಾಗಿ ಯಶಸ್‌ಸೂರ್ಯ ಹಾಜರಿದ್ದು ಸಂತಸ ಹಂಚಿಕೊಂಡರು. ನಿರ್ದೇಶಕ ನಾಗಣ್ಣ ತೂಕದ ನಿರೂಪಣೆ ನಡೆಸಿಕೊಟ್ಟರು.

 

Copyright@2018 Chitralahari | All Rights Reserved. Photo Journalist K.S. Mokshendra,