Shardoola.Film Teaser Rel.

Saturday, August 03, 2019

95

ಗೊತ್ತಿಲ್ಲದಯೇ  ನಡೆಯುವ  ಘಟನೆಗಳ  ಶಾರ್ದೂಲ

        ಒಂದು ಕಾರು  ರಾತ್ರಿ  ಕಾಡಿನೊಳಗೆ ಹೋಗುವಾಗ ‘ಶಾರ್ದೂಲ’ ಎನ್ನುವ ಬೋರ್ಡ್ ನೋಡಿ ನಿಂತುಕೊಳ್ಳುತ್ತದೆ.  ಕೆಲವು ಸೆಕೆಂಡ್‌ಗಳ ನಂತರ  ಕೈತುಂಡು ಮೇಲಿನಿಂದ ಬೀಳುತ್ತದೆ. ಇಷ್ಟು ಇರುವ ಟ್ರೈಲರ್ ನೋಡಿದಾಗ ಇದೊಂದು ಥ್ರಿಲ್ಲರ್ ಸಿನಿಮಾವೆಂದು ಸುಲಭವಾಗಿ ಹೇಳಬಹುದು. ಹಾಗಂತ ಇದರಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸು, ರಾಕ್ಷಸ ಇರುವುದಿಲ್ಲ. ದಿನನಿತ್ಯದ ದೈನಂದಿನ ಕೆಲಸಗಳು ನಮಗೆ ತಿಳಿದಿರುತ್ತದೆ. ಅದರಂತೆ ನಾವುಗಳು  ಗೊತ್ತಿಲ್ಲದ ಜಾಗಕ್ಕೆ ಹೋದಾಗ ಅಲ್ಲಿನ ಅನುಭವ, ಜನ, ಸ್ಥಳ  ಅಗೋಚರವಾಗಿ ಕಾಣಿಸುತ್ತದೆ. ಅವೆಲ್ಲವು ಅತೀಂದ್ರಿಯ ಶಕ್ತಿಗಳು ಅಂತ ಅನ್ನಿಸೋಕೆ ಶುರುವಾಗುತ್ತದೆ. ಅಂತಹ ಜೀವನದಲ್ಲಿ  ನಡೆಯುವ ಘಟನೆಗಳಿಗೆ ‘ಶಾರ್ದೂಲ’ ಎನ್ನುವ ಚಿತ್ರವು ಉತ್ತರ ಕೊಡುತ್ತದೆ. ಅದಕ್ಕಾಗಿ ದೆವ್ವ ಇರಬಹುದಾ ಎಂದು ಉಪಶೀರ್ಷಿಕೆಯಲ್ಲಿ ಹೇಳಲಾಗಿದೆ. ಕತೆಗೆ ಅನುಗುಣವಾಗಿ ಆಗುಂಬೆ ಬಳಿ ಇರುವ ಹೆಬ್ಬಲ್ಲಿ ಕಡೆ ಚಿತ್ರೀಕರಣ ನಡೆಸಲಾಗಿದೆ. ಪಯಣದಲ್ಲಿ ಕತೆ ಸಾಗಲಿರುವುದರಿಂದ ಕಾರು ಒಂದು ಪ್ರಮುಖ ಪಾತ್ರವಹಿಸಿದೆಯಂತೆ. ಅದಕ್ಕಾಗಿ ತಂಡವು ಎಲ್ಲಾ ಕಡೆ ಸುತ್ತಿ ಕಡೆಗೆ ಹಳೇ ಬೆಂಜ್ ಕಾರನ್ನು  ತರುವಲ್ಲಿ ಯಶಸ್ವಿಯಾಗಿದ್ದಾರೆ.

      ಸಿನಿಮಾಕ್ಕೆ ಅಸಲಿ ತಾಕತ್ತು ಬರುವ ಪಾತ್ರದಲ್ಲಿ ಚೇತನ್‌ಚಂದ್ರ ನಾಯಕ. ರವಿತೇಜ ಉಪನಾಯಕ. ಹೆದರು ಪುಕ್ಕಲಿಯಾಗಿ ಕೃತಿಕಾರವೀಂದ್ರ ಮತ್ತು ಸಾಹಸಿ ಹುಡುಗಿಯಾಗಿ ಐಶ್ವರ್ಯಪ್ರಸಾದ್ ನಾಯಕಿಯರು. ಇವರೊಂದಿಗೆ  ಖಳನಟನಾಗಿ ಕುಮಾರ್‌ನವೀನ್, ಎರಡು ಶೇಡ್‌ಗಳಲ್ಲಿ ಮಹೇಶ್‌ಸಿದ್ದು ತಾರಬಳಗದಲ್ಲಿ ಇದ್ದಾರೆ.  ಕತೆ,ಚಿತ್ರಕತೆ, ಸಂಛಾಷಣೆ ಹಾಗೂ ನಿರ್ದೇಶನದ ಸಾರಥ್ಯವಹಿಸಿಕೊಂಡಿರುವುದು ಅರವಿಂದ್‌ಕೌಶಿಕ್.  ಹಾಡುಗಳಿಗೆ ಸತೀಶ್‌ಬಾಬು ಸಂಗೀತ, ಸಂಕಲನ ಶಿವರಾಜ್‌ಮೇಹು, ಛಾಯಗ್ರಹಣ ವೈ.ಬಿ.ಆರ್.ಮನು,  ಸಾಹಸ ಮಾಸ್‌ಮಾದ-ಅಲ್ಟಿಮೇಟ್‌ಶಿವು, ವಿಎಫ್‌ಎಕ್ಸ್ ಸಂತೋಷ್‌ರಾಧಾಕೃಷ್ಣನ್  ಅವರದಾಗಿದೆ. ಧಾರವಾಹಿಗಳನ್ನು ನಿರ್ಮಾಣ ಮಾಡಿರುವ ರೋಹಿತ್ ಮತ್ತು ಸಿ.ಕಲ್ಯಾಣ್ ಅವರುಗಳಿಗೆ ಹಿರಿತೆರೆಗೆ ಮೊದಲ ಬಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

       ಟ್ರೈಲರ್ ಬಿಡುಗಡೆ ಮಾಡಿದ ರಿಶಬ್‌ಶಟ್ಟಿ ಮಾತನಾಡಿ ಪ್ರಾರಂಭದ ದಿನಗಳಲ್ಲಿ ಕಷ್ಟದಲ್ಲಿದ್ದಾಗ ಅರವಿಂದ್‌ಕೌಶಿಕ್ ಅವರು ಕೆಲಸಕ್ಕೆ ತೆಗೆದುಕೊಂಡಿದ್ದರು. ಅದರಿಂದ ಅವರು ನನಗೆ ಗುರುಗಳ ಸಮಾನ. ಇಂತಹ ಚಿತ್ರಗಳು ಜನರಿಗೆ ತಲುಪಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಿತ್ರವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,