Shaibya.Film Audio Rel.

Monday, August 05, 2019

50

ಮಹಿಳೆಯ ಒಳ್ಳೆಯ ಗುಣಗಳಿಗೆ  ಮತ್ತೋಂದು ಪದ  ಶೈಬ್ಯ

         ಮಹಾಭಾರತದಲ್ಲಿ ಬರುವ ಕೃಷ್ಣನ ಮೂರನೇ ಹೆಂಡತಿ ಮತ್ತು  ರಥದ ಬಲಭಾಗದ ಕುದರೆ ಹೆಸರು ‘ಶ್ಯೆಬ್ಯ’ ಆಗಿರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಕತೆಯು ಅದೇ ರೀತಿ ಇರುವುದಿಲ್ಲ. ಬ್ಲಾಕ್ ಮ್ಯಾಜಿಕ್ ಪಾಯಿಂಟ್ ಕುರಿತ ಸೆಸ್ಪನ್ಸ್, ಥ್ರಿಲ್ಲರ್ ಚಿತ್ರ ಇರಲಿದೆ. ನಾವುಗಳು ನಮ್ಮ ಬುದ್ದಿಶಕ್ತಿಯಿಂದ ಬೆಳೆದಿರೋದು ಹೂರತು ಮೂಡನಂಬಿಕೆಯಿಂದ ಅಲ್ಲವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಒಳ್ಳೆಯ ಹೆಂಡತಿ, ಉತ್ತಮ ಗುಣ ಇರುವವಳನ್ನು ಶೀರ್ಷಕೆಗೆ ಹೋಲಿಸುತ್ತಾರೆ.  ಅದು ಯಾವ ರೀತಿ ಎಂಬುದನ್ನು ಚಿತ್ರ ನೋಡಬೇಕಂತೆ.  ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.  ಸ್ಕ್ರಾಪ್ ಆಗಿದ್ದ ಹುಡುಗನೊಬ್ಬ ಸಾಧನೆ ಮಾಡುವ ಪಯಣದಲ್ಲಿ ಏನೋ ಒಂದು ಸಿಗುತ್ತದೆ. ಅದರ ಕಾರಣವನ್ನು ಹುಡುಕುವ ಪಾತ್ರದಲ್ಲಿ ಹುಬ್ಬಳ್ಳಿ ಮೂಲದ ಸನ್ಮಿತ್‌ವಿಹಾನ್  ನಾಯಕ.  ಇವರಿಗೆ ಇಬ್ಬರು ನಾಯಕಿಯರು. ಪಟ್ಟಣದ ಆಧುನಿಕ ಬೋಲ್ಡ್ ಹುಡುಗಿ, ಯಾರಿಗೂ ಕೇರ್ ಮಾಡುವುದಿಲ್ಲ. 

ಇಂತಹವಳಿಗೆ ಜೀವನದಲ್ಲಿ ತಿರುವು ಬಂದಾಗ ಹೇಗೆ ಎದುರಿಸುತ್ತಾಳೆ  ಎನ್ನುವ ಮೇಘಶ್ರೀಗೌಡ.

        ಬಾಲನಟಿಯಾಗಿ ಕಾಣಿಸಿಕೊಂಡಿದ್ದು, ಪ್ರಸಕ್ತ  ಹದಿನಾರು ವರ್ಷದ ಮುಗ್ದಹುಡುಗಿ.  ಈಕೆಯ ಗುಣ ಕಂಡು ಹಲವರು ದುರಪಯೋಗ ಪಡಿಸಿಕೊಂಡು ತಪ್ಪು ದಾರಿಗೆ ಕರೆದುಕೊಂಡು  ಹೋಗುತ್ತಾರೆ. ಇದರಿಂದ ನಂಬಿಕೆ ಕಳೆದುಕೊಳ್ಳುವ ಮಿಲನರಮೇಶ್. ಇವರೊಂದಿಗೆ ಕುರಿಸುನಿಲ್. ಕಾಮಿಡಿ ಕಿಲಾಡಿಗಳು ಸೀಸನ್-೨ ಖ್ಯಾತಿ ಮಡೆನೂರುಮನೋಹರ್, ಮಣಿ, ಡಾ.ರಾಘವೇಂದ್ರಮೋಕ್ಷಗೊಂಡಂ ಗುರೂಜಿ, ಗಣೇಶ್,  ಕವಿತ, ಸೌಂದರ್ಯ ಮುಂತಾದವರು ಬಣ್ಣ ಹಚ್ಚಿದ್ದಾರೆ. ಟಾಲಿವುಡ್‌ದಲ್ಲಿ ನಿರ್ದೇಶನ ಮಾಡಿರುವ ಎಂ.ಗುರುರಾಜ್ (ಎಂಜಿಆರ್) ಸಂಭಾಷಣೆ, ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್‌ವುಡ್‌ಗೆ ಪಾರ್ದಾಪಣೆ ಮಾಡಿದ್ದಾರೆ. ಸಿದ್ದುವಡೆಯರ್ ಸಾಹಿತ್ಯದ ಮೂರು ಹಾಡುಗಳಿಗೆ ಕಾರ್ತಿಕ್‌ಶರ್ಮಾ ಸಂಗೀತವಿದೆ. ಛಾಯಾಗ್ರಹಣ ನಾಗರಾಜಮೂರ್ತಿ, ಸಂಕಲನ ಶಿವಶಂಕರ್, ಸಾಹಸ ಸ್ಟಂಟ್‌ಸಿದ್ದು ಅವರದಾಗಿದೆ. ಮಗನ ಭವಿಷ್ಯ ರೂಪಿಸಲು  ಯಶೋಧ.ಎಸ್.ಸನ್ನಪ್ಪನವರು ಶ್ರದ್ದಾ ಮೂವೀಸ್ ಮುಖಾಂತರ ನಿರ್ಮಾಣ ಮಾಡಿದ್ದಾರೆ.  ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಎರಡು ಹಾಡುಗಳನ್ನು ತೋರಿಸಲಾಯಿತು. 

 

 

Copyright@2018 Chitralahari | All Rights Reserved. Photo Journalist K.S. Mokshendra,