Arjun Gowda.Film Teaser Rel.

Friday, August 02, 2019

55

ಆಕ್ಷನ್   ಅರ್ಜುನ್‌ಗೌಡ

       ಕಳೆದ ವರ್ಷ ಟಾಲಿವುಡ್‌ನಲ್ಲಿ ಅರ್ಜುನ್‌ರೆಡ್ಡಿ ಚಿತ್ರವೊಂದು ಹಿಟ್ ಆಗಿ ಎಲ್ಲರಿಗೂ ಹೆಸರು ತಂದುಕೊಟ್ಟತ್ತು. ಈಗ ಚಂದನವನದಲ್ಲಿ ‘ಅರ್ಜುನ್‌ಗೌಡ’ ಸಿನಿಮಾವೊಂದು ಕೊನೆ ಹಂತದ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿದೆ. ಆ ಚಿತ್ರಕ್ಕೂ ಇದಕ್ಕೂ ಸಂಬಂದವಿಲ್ಲವೆಂದು ಹೇಳಿಕೊಳ್ಳುವುದಕ್ಕೆ  ಟೀಸರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಮೊದಲಬಾರಿ ಆಕ್ಷನ್ ಚಿತ್ರಕ್ಕೆ ನಿರ್ದೇಶನ ಮಾಡಿರುವ ಶಂಕರ್ ಹೇಳುವಂತೆ ೬೫ ದಿನಗಳ ಕಾಲ ಬೆಂಗಳೂರು, ಮಂಗಳೂರು, ಊಟಿ, ಚಿಕ್ಕಮಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡನ್ನು ಸಿಂಗಪೂರ್, ಮೆಲೇಶಿಯಾ, ಥೈಲ್ಯಾಂಡ್ ಶೂಟ್ ಮಾಡಲು ಯೋಜನೆ ಹಾಕಲಾಗಿದೆ. ಇದೊಂದು ರೋಮ್ಯಾಂಟಿಕ್ ಆಕ್ಷನ್ ಚಿತ್ರವೆನ್ನಬಹುದು. ಸಾಮಾನ್ಯ ಮನುಷ್ಯ ನಾರ್ಮಲ್ ಆಗಿ ಇರಬಾರದು. ಬೇರೆ ತರಹ ಇರಬೇಕು. ಮುಂದಿನ ದಿನಗಳಲ್ಲಿ ಟ್ರೈಲರ್, ಹಾಡುಗಳ ಅನಾವರಣಗೊಳ್ಳಲಿದೆ ಎಂಬುದಾಗಿ ವ್ಯಾಖ್ಯಾನ ಬಿಚ್ಚಿಟ್ಟರು.

       ಅಪ್ಪನ ಚಿತ್ರದ ಮುಖಾಂತರ ರಾಮು ಅವರು ಕೋಟಿರಾಮು ಅಂತ ಗುರುತಿಸಿಕೊಂಡರು. ಸಂಕೀರ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಜಗಮೊಂಡಾ. ಏನೇ ಮಾಡಿದರೂ ಸರಿಯಾಗಿ ಮಾಡುವ, ಯಾರಿಗೂ ಕೇರ್ ಮಾಡದ ಹುಡುಗ. ಕಿಕ್ ಬಾಕ್ಷಿಂಗ್ ತರಭೇತಿ ಪಡೆಯುತ್ತಿರುತ್ತೇನೆ. ಮೂರು  ಗೆಟಪ್‌ನಲ್ಲಿ ಇರಲಿದ್ದು, ಒಂದು ಹಂತದಲ್ಲಿ ಅಮ್ಮನಿಗೆ ತೊಂದರೆಯಾದಾಗ ಸಹಾಯ ಮಾಡುತ್ತೇನೆಂದು ನಾಯಕ ಪ್ರಜ್ವಲ್‌ದೇವರಾಜ್ ಹೇಳಿದರು.

      ಬೋಲ್ಡಾ ಆಗಿ ನಾಯಕಿ ಪ್ರಿಯಾಂಕಾತಿಮ್ಮೇಶ್,  ವಾಹಿನಿ ಒಡತಿ,  ನಾಯಕನ   ಅಮ್ಮನಾಗಿ ಸ್ವರ್ಶಾರೇಖಾ, ಪ್ರಕಾಶ್‌ನಟನ ಪಾತ್ರದ ಪರಿಚಯ ಮಾಡಿಕೊಂಡರು.  ರಾಘವೇಂದ್ರಕಾಮತ್, ಶಂಕರ್  ಸಾಹಿತ್ಯದ ನಾಲ್ಕು ಗೀತೆಗಳಿಗೆ ಧರ್ಮವಿಶ್ ಸಂಗೀತ ಸಂಯೋಜಸಿದ್ದಾರೆ.  ಛಾಯಾಗ್ರಹಣ  ಜೈಆನಂದ್, ನೃತ್ಯ ಮೋಹನ್, ಸಾಹಸ ಮಾಸ್‌ಮಾದ, ಸಂಕಲನ ಕಿಟ್ಟು, ಕಲೆ ಈಶ್ವರಿಕುಮಾರ್ ಅವರದಾಗಿದೆ. 

       ನಮ್ಮ ಸಂಸ್ಥೆಯ ೩೯  ಚಿತ್ರಗಳ ಪೈಕಿ ಆಕ್ಷನ್ ಸಿನಿಮಾಗಳು  ಹೆಚ್ಚು ಹೆಸರು ಮಾಡಿದೆ. ಬೇರೆ ರೀತಿಯದ್ದು ಸದ್ದು ಮಾಡಲಿಲ್ಲ. ಸೌಂಡ್ ಚೆನ್ನಾಗಿದೆ ಅಂತ ಇದನ್ನೆ ಇಡಲಾಗಿದೆ. ಮೂರು ನಿಮಿಷದ ನಾಯಕನ ಪರಿಚಯದ ಹಾಡಿನಲ್ಲಿ ಫೈಟ್ ಜೊತೆಗೆ ೫೦ ಬೈಕ್, ೧೦ ಕಾರುಗಳನ್ನು ಜಖಂ ಮಾಡಲಾಗಿದೆ. ಸಾಹಸದ ಚಿತ್ರ ಎಂದು ಹೇಳುವಾಗ ಇದೆಲ್ಲಾ ಮಾಮೂಲಿ  ಅಂತ ಸಮರ್ಥನೆ ಉತ್ತರವನ್ನು ನಿರ್ಮಾಪಕರ ರಾಮು ನೀಡಿದರು. ಅಂದುಕೊಂಡಂತೆ ಆದರೆ ಸೆಪ್ಟಂಬರ್‌ದಲ್ಲಿ  ಗೌಡನ ಆರ್ಭಟವನ್ನು ನೋಡಬಹುದಂತೆ.

 

Copyright@2018 Chitralahari | All Rights Reserved. Photo Journalist K.S. Mokshendra,