Swecha.Film Press Meet.

Saturday, August 03, 2019

38

ಹೊಸಬರ  ಸ್ವೇಚ್ಛಾ

        ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚು  ನಿರ್ಮಾಪಕರು ಬರುತ್ತಿರುವಂತೆ, ಈಗ ಬಳ್ಳಾರಿ ಕಡೆಯಿಂದ ಅನ್ನದಾತರ ಆಗಮನವಾಗುತ್ತಿದೆ. ಇದರ ಸಾಲಿಗೆ ‘ಸ್ವೇಚ್ಛಾ’ ಚಿತ್ರವೊಂದು ಸೇರಿದೆ. ಸಿರಗುಪ್ಪ ತಾಲ್ಲೋಕಿನ ಕೆ.ಆರ್.ಮುರಹರಿರೆಡ್ಡಿ ನಿರ್ಮಾಣ ಮಾಡಿದ್ದಾರೆ.  ತೆಲುಗು ಚಿತ್ರಗಳನ್ನು ವಿತರಣೆ ಮಾಡಿ ಕೈ ಸುಟ್ಟುಕೊಂಡಿದ್ದ ಸ್ಟಾರ್‌ಮಸ್ತಾನ್ ಅವರಿಗೆ ಶಿವರಾಜ್‌ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಡಬ್ಬಿಂಗ್ ಚಿತ್ರವು ಲಾಭ ತಂದುಕೊಟ್ಟಿದೆ. ಅದರಿಂದ ಕನ್ನಡ ಚಿತ್ರರಂಗದ ಬಗ್ಗೆ ಒಲವು ಬಂದು ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ.  ಸೂಕ್ಷ ವಿಷಯಗಳ ಕುರಿತಾದ ಎರಡು ಸಮಾನಾಂತರದ ಕತೆಗಳು ಇರಲಿದೆ. ಹಳ್ಳಿಯಲ್ಲಿ ಮುಗ್ದ ಹುಡುಗ ಪ್ರೀತಿಯಲ್ಲಿ ಬಿದ್ದಾಗ, ಯುವ ಪ್ರೇಮಿಗಳ ಮಧ್ಯದಲ್ಲಿ ಆಕೆಯ ತಂದೆ ರಾವಣನ ಪ್ರತಿರೋಷವನ್ನು  ತೋರಿಸುತ್ತಾನೆ. ಅದನ್ನು ಎದುರಿಸಿ ತನ್ನ ಪ್ರೇಯಸಿಯನ್ನು ಉಳಿಸಿಕೊಳ್ಳುತ್ತಾನಾ?. ಎರಡನೆಯದರಲ್ಲಿ  ಸ್ವೇಚ್ಛಾ ಹೆಸರಿನ ಬಾಲಕಿಯೊಬ್ಬಳು ಅಮ್ಮ  ಹೇಳಿದ್ದನ್ನು ಅಚ್ಚುಕಟ್ಟಾಗಿ ಪಾಲಿಸುವ  ಮುದ್ದಿನ ಮಗಳು.  ಎಂಟರಿಂದ ಐವತ್ತು ವರ್ಷದವರಗಿನ ವಯೋಮಾನದವರು ನೋಡಬಹುದಾದ ಚಿತ್ರ್ರವಾಗಿದೆ.  ರಾಯಚೂರು ಬಳಿ ಇರುವ ಬುರ್ದಿಪಾಡ್‌ನಲ್ಲಿ ಶೇಕಡ ೬೦, ಉಳಿದುದನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

        ಹಲವು ನಿದೇಶಕರ ಬಳಿ ಕೆಲಸ ಮಾಡಿದ ಅನುಭವ ಇರುವ ಸುರೇಶ್‌ರಾಜ್ ಸ್ವತಂತ್ರವಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಹಿತೇಶ್ ನಾಯಕನಾಗಿ ಮೊದಲ ಚಿತ್ರ. ಕಿರುತೆರೆ ನಟಿ ಪವಿತ್ರಾನಾಯಕ್  ಹಿರಿತೆರೆಗೆ ನಾಯಕಿಯಾಗಿ ಆರಂಗ್ರೇಟಂ. ಒಂಬತ್ತು ವಯಸ್ಸಿನಲ್ಲೇ ಮೂರು ಅಂತರರಾಷ್ಟ್ರೀಯ, ನಾಲ್ಕು ರಾಷ್ಟ್ರೀಯ ಮತ್ತು ಆರು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬೇಬಿಶ್ರೀ ಶೀರ್ಷಿಕೆ ಹೆಸರಿನಲ್ಲಿ ನಟಿಸಿದ್ದು ೧೦ನೇ ಚಿತ್ರವಾಗಿದೆ. ಉಳಿದಂತೆ ಸ್ಪಂದನಾ, ಪ್ರಕಾಶ್ ನಟನೆ ಇದೆ. ಮೂರು ಹಾಡುಗಳಿಗೆ ಲೋಕಿ ಸಂಗೀತವಿದೆ. ಕತೆ,ಚಿತ್ರಕತೆ,ಸಂಭಾಷಣೆ,ಸಹನಿರ್ದೇಶನ ಸುರೇಶ್‌ರೆಡ್ಡಿ, ಛಾಯಾಗ್ರಹಣ ಸತೀಶ್, ಸಂಕಲನ ಸುಜನ್, ನೃತ್ಯ ಆರ್ಯನ್‌ರೋಷನ್ ನಿರ್ವಹಿಸಿದ್ದಾರೆ. ನಟ ಚೇತನ್‌ಚಂದ್ರ ಟ್ರೈಲರ್ ಬಿಡುಗಡೆ ಮಾಡಿ, ಗೆಳೆಯ ಹಿತೇಶ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.  ಬೇಬಿಶ್ರೀ ನಡೆಸಿಕೊಟ್ಟ ನಿರೂಪಣೆ ಎಲ್ಲರ ಮನೆ ಸೆಳೆಯಿತು. ಚಿತ್ರವು ಸದ್ಯದಲ್ಲೆ ಸೆನ್ಸಾರ್‌ಗೆ ಹೋಗಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,