Kannad Gottilla.Film Teaser Rel.

Tuesday, August 06, 2019

62

ಕನ್ನಡ ಕಲಿಸಿರಿ, ಕನ್ನಡ ಕಲೀರಿ ಎಂದು  ಸಂದೇಶ  ಸಾರುವ  ಚಿತ್ರ

          ಸಿಲಿಕಾನ್ ಸಿಟಿಯಲ್ಲಿ ಪ್ರಸಕ್ತ  ಹೆಚ್ಚಾಗಿ ಕನ್ನಡೇತರರು ಇದ್ದಾರೆ. ಅವರುಗಳು ನಮ್ಮ ಭಾಷೆ ಬಾರದಿದ್ದರೂ ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಇಲ್ಲಿನವರಿಗೆ ಕೆಂಡದಂತ ಕೋಪ ಬರುತ್ತದೆ.  ಇಂತಹ ಅಂಶಗಳನ್ನು ಹೆಕ್ಕಿಕೊಂಡು ‘ಕನ್ನಡ್ ಗೊತ್ತಿಲ್ಲ’ ಎನ್ನುವ ಚಿತ್ರವೊಂದು ಸಿದ್ದಗೊಂಡಿದೆ. ರಾಜಕುಮಾರ ಖ್ಯಾತಿಯ ನಿರ್ದೇಶಕ ಸಂತೋಷ್‌ಆನಂದರಾಮ್ ಟೀಸರ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಸಿನಿಮಾದಲ್ಲಿ ಕನ್ನಡವನ್ನು ಹೇಗೆ ತೋರಿಸಿದ್ದಾರೆಂದು ಕುತೂಹಲವಿದೆ. ಹರಿಪ್ರಿಯಾರವರು ಒಳ್ಳೆ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಕನ್ನಡ ಗೊತ್ತಿರೋರು  ಅವರ ಭಾಷೆಯಲ್ಲಿ ಉತ್ತರ ಕೊಡುವುದು ಮನನೋಯಿಸುತ್ತದೆ. ಮೊದಲು ಅಂತಹ ಧೋರಣೆಯನ್ನು ಬಿಡಬೇಕು. ಜಪಾನಿನ ಚಿತ್ರಕ್ಕೆ ಪ್ರಶಸ್ತಿ ಬಂದಾಗ ನಿರ್ದೆಶಕರು ಮಾತೃ ಭಾಷೆಯಲ್ಲಿ ಮಾತನಾಡಿದ್ದರು. ಕಲೆಗೆ ಭಾಷೆ ಇಲ್ಲ. ಇಲ್ಲಿಯವರೆಗೂ ಮಾದ್ಯಮ, ವಾಹಿನಿ, ಚಿತ್ರಗಳು ಕನ್ನಡತನವನ್ನು ಉಳಿಸಿಕೊಂಡು ಬಂದಿದೆ. ಕನ್ನಡ ಸಾಯೊಲ್ಲ. ನಾವು ನಮ್ಮ ಭಾಷೆಯನ್ನು ಬಿಟ್ಟುಕೊಟ್ಟಾಗ ಮಾತ್ರ ಸಾಯುತ್ತೆ.  ಇಲ್ಲಿನ ಬದುಕು, ವಾತವರಣ ಎಲ್ಲವು ಬೇಕು ಎನ್ನುತ್ತಾರೆ ಹೂರತು  ಸ್ಥಳೀಯ ಭಾಷೆ ಮಾತನಾಡುವುದಲ್ಲ. ನಾವುಗಳು ನಮ್ಮದೆ ಧಾಟಿಯಲ್ಲಿ ಮಾತನಾಡಲು ಶುರು ಮಾಡಿದರೆ ಅವರು ಕನ್ನಡ ಕಲಿಯಲು ಆಸಕ್ತಿ ತೋರಿಸುತ್ತಾರೆಂದು ಆಭಿಪ್ರಾಯಪಟ್ಟರು.

      ಉನ್ನತ ಆರ್‌ಜೆ ಕೆಲಸ ತ್ಯಜಿಸಿ ಸಿನಿಮಾ ಮೇಲಿನ ಪ್ರೀತಿಯಿಂದ ಕತೆ ಬರೆದು ನಿರ್ದೇಶನ ಮಾಡಿರುವ ಮಯೂರರಾಘವೇಂದ್ರ ಹೇಳುವಂತೆ  ಮರ್ಡರ್ ಮಿಸ್ಟರ್ ಕತೆಯಲ್ಲಿ ಕನ್ನಡ ಯಾಕೆ ಸಂಬಂದವಿದೆ ಎಂದು ತಿಳಿಯಲು ಸಿನಿಮಾ ನೋಡಬೇಕು. ಐಟಿ, ಸ್ಥಳೀಯ ಘಟನೆಗಳು, ಕನ್ನಡಿಗರು, ಕನ್ನಡೇತರರು ಕುರಿತಂತೆ ಸನ್ನಿವೇಶಗಳು ಬರಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಜ್ಯ ಮಾತೃಭಾಷೆಗೆ ಬೆಲೆ ಕೊಡಿ ಅಂತ ಸಂದೇಶದಲ್ಲಿ ಹೇಳಲಾಗಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.

       ಸೂಜಿದಾರ, ಡಾಟರ್ ಆಫ್ ಪಾರ್ವತಮ್ಮ ಚಿತ್ರಗಳ ನಂತರ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಬಾರದೆಂಬ ಚಿಂತನೆ ಮಾಡಿದ್ದೆ. ನಿರ್ದೇಶಕರು ಕತೆ ಕೇಳಿ ಇಲ್ಲ ಎನ್ನಲು ಆಗದೆ ಎಲ್ಲವನ್ನು ಮರೆತು ನಟಿಸಿದೆ. ಬಿಡುಗಡೆ ನಂತರ ಕನ್ನಡ ಭಾಷೆಯ ಬಗ್ಗೆ ಚಳುವಳಿ, ಹೊರಗಿನ ಜನರಿಗೆ ಇದರ ಬಗ್ಗೆ ಅರಿವು, ಮತ್ತು ಭಾಷೆ ಕಲಿಯುವ ರೀತಿಯಂತೆ ದೊಡ್ಡ ಮಟ್ಟದ ಬದಲಾವಣೆ ಆಗುತ್ತದೆ. ಇವತ್ತಿನ ಪ್ರಪಂಚದಲ್ಲಿ ಏನು ನಡೀತಿದೆ ಎಂದು ತೋರಿಸುವ ಪ್ರಯತ್ನ ಮಾಡಲಾಗಿದೆ ಅಂತ ತನಿಖಾದಿಕಾರಿಯಾಗಿ ಕಾಣಿಸಿಕೊಂಡಿರುವ ಹರಿಪ್ರಿಯಾ  ಹೇಳಿದರು.

       ಮಾಂಟೇಜ್‌ದಲ್ಲಿ ಬರುವ ಮೂರು ಹಾಡುಗಳಿಗಿಂತ ಹಿನ್ನಲೆ ಸಂಗೀತಕ್ಕೆ ಹೆಚ್ಚು ಸ್ಕೋಪ್ ನೀಡಲಾಗಿದೆ ಎನ್ನುತ್ತಾರೆ ರಾಗ ಒದಗಿಸಿರುವ ನಕುಲ್‌ಅಭ್ಯಂಕರ್. ಛಾಯಾಗ್ರಹಣ ಮತ್ತು ಸಂಕಲನ ಜವಬ್ದಾರಿ ಹೊತ್ತುಕೊಂಡಿರುವ ಗಿರಿಧರ್‌ದಿವಾನ್, ಕಲಾವಿದರುಗಳಾದ  ಪವನ್‌ಕುಮಾರ್, ರೋಹಿತ್‌ಭಾನುಪ್ರಕಾಶ್, ರೆಮೋ, ಸಾಹಸ ಚೇತನ್‌ಡಿಸೋಜ ಉಪಸ್ತಿತರಿದ್ದು ಅನುಭವಗಳನ್ನು ಹಂಚಿಕೊಂಡರು. 

      ನಮ್ಮತನವನ್ನು ಉಳಿಸಬೇಕು ಎಂದು ಸಾರುವ ಕತೆಯಾಗಿದ್ದರಿಂದ ಅಭಿಮಾನದ ಮೇಲೆ ನಿರ್ಮಾಣ ಮಾಡಿದ್ದೇನೆ ಅಂತಾರೆ ಕುಮಾರ್‌ಕಂಠೀರವ.  ಕಣ ಕಣದಲ್ಲೂ ಕನ್ನಡ ಎಂದು ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ಚಿತ್ರವು ದಸರಾ ಹಬ್ಬಕ್ಕೆ  ಬರಲಿದೆ ಎಂಬ ಮಾಹಿತಿಯು ತಂಡದಿಂದ ಲಭ್ಯವಾಯಿತು. 

 

Copyright@2018 Chitralahari | All Rights Reserved. Photo Journalist K.S. Mokshendra,