Naanu Nan Jaanu.Film Press Meet.

Tuesday, August 06, 2019

74

ಪ್ರೀತಿ ಕಥನ ನಾನು ನನ್  ಜಾನು

        ಬದುಕೇ ಚೆಂದ  ಇನ್ನು  ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ  ‘ನಾನು ನನ್ ಜಾನು’ ಚಿತ್ರದ ಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮ ಕತೆ ಜೊತೆಗೆ ತೆಳು ಹಾಸ್ಯ ಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನ ಕೊಡುವ ಬದಲು  ನಿಂದನೆ ಮಾಡುತ್ತಾರೆ. ಆಡೋ ಜನರು ಕಡೆಗಣಿಸಿದರೂ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆ ಎಲ್ಲವನ್ನು ಕಳೆದುಕೊಂಡಿರುತ್ತಾನೆ. ಪ್ರಚಲಿತ ವಾಸ್ತವ ಜಗತ್ತನ್ನು ತೋರಿಸಲಾಗಿದೆ. ಇದರ ಜೊತೆಗೆ ಪ್ರೀತಿಯ ಭಾವನೆಗಳ ಸನ್ನಿವೇಶಗಳು ಬರಲಿದೆ. ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡಿರುವ ಶ್ರೀಹರಿ ರಚನೆ, ನಿರ್ದೇಶನ ಮಾಡಿರುವುದು ಹೊಸ ಅನುಭವ.  ಕರ್ನಾಟಕದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.  ಏಳು ಹಾಡುಗಳಿಗೆ ರಾಗ ಒದಗಿಸಿರುವ ಶ್ರೀಧರ್‌ಕಶ್ಯಪ್ ಅವರಿಗೆ  ಮೂರನೇ ಚಿತ್ರವಾಗಿದೆ.

      ಕ, ಮೋಜೋ ಸಿನಿಮಾಗಳಲ್ಲಿ ನಟಿಸಿದ್ದ  ಮನು  ಬೇಜವಬ್ದಾರಿ ಹುಡುಗ, ಅತ್ಯುನ್ನುತ ಕೆಲಸ ಸಿಕ್ಕಿ ಜವಬ್ದಾರಿ ಬಂದಾಗ ಅದನ್ನು ಹೇಗೆ ನಿಭಾಯಿಸುತ್ತಾನೆ  ಎನ್ನುವ ಎರಡು ಶೇಡ್‌ಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕ್ಷನ್, ಕಾಮಿಡಿ ತೋರಿಸಲು ಅವಕಾಶ ಸಿಕ್ಕಿದೆಯಂತೆ. ಕುಟುಂಬದ ಸಲುವಾಗಿ ಯಾವುದೇ ತ್ಯಾಗಕ್ಕೂ ಸಿದ್ದಳಾದಾಗ ಅಂತಿಮವಾಗಿ ಜಯ ಸಿಗುತ್ತದಾ ಎನ್ನುವ ರುತ್ವಿಕಾಶೆಟ್ಟಿ ನಾಯಕಿ. ಇವರೊಂದಿಗೆ ಮಜಾಭಾರತದ ಕಲಾವಿದರು ಮತ್ತು  ಕತೆಗೆ ತಿರುವು ಕೊಡುವ ಮಹತ್ವದ ಪಾತ್ರದಲ್ಲಿ ಸೃಜನ್‌ಲೋಕೇಶ್  ಅಭಿನಯಿಸಿರುವುದು ವಿಶೇಷ. ನೋಡುಗರಿಗೆ  ಅವರ ಹಳೆಯ ಲವ್ ಸ್ಟೋರಿ ನೆನಪಿಗೆ ಬರುತ್ತದಂತೆ. ಛಾಯಾಗ್ರಹಣ ಆನಂದ್‌ಇಳಯರಾಜ-ಮಾರವರ್ಮನ್, ಸಂಕಲನ ವಿಶ್ವ.ಎಂ.ಎನ್,  ಸಾಹಸ ಅಪ್ಪುವೆಂಕಟೇಶ್, ನೃತ್ಯ ಹೇಮಂತ್‌ರಾಜ್, ವಿಎಫ್‌ಎಕ್ಸ್ ಪ್ರಣವ್ ಅವರದಾಗಿದೆ.  ಬಿಲ್ಡರ್ ಕೆಂಪೆಗೌಡ.ಎನ್ ಹಾಗೂ ಕಾಸ್‌ಮೋಟಿಕ್ಸ್ ಶಾಪ್ ಮಾಲೀಕ ಹರೀಶ್.ಪಿ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ಅಕ್ಟೋಬರ್‌ದಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ. 

 

Copyright@2018 Chitralahari | All Rights Reserved. Photo Journalist K.S. Mokshendra,