Ranganayaki.Film Trailer Rel.

Tuesday, September 03, 2019

58

ಪ್ರಚಲಿತ  ಶೋಷಿತ ಮಹಿಳೆಯ ಪ್ರತಿನಿಧಿ ರಂಗನಾಯಕಿ

       ಅನುಗಾಲದಿಂದಲೂ ಹೆಣ್ಣು ಮಕ್ಕಳಿಗೆ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿ ಅತ್ಯಾಚಾರವಾಗುತ್ತಿದೆ. ಈ ಪದವೇ ಹೆಣ್ಣಿಗೆ ಶಿಕ್ಷೆಯಾಗಿದೆ ಎಂದು ಖಾರವಾಗಿ ತಾರ ಮಾತನಾಡಲು ‘ರಂಗನಾಯಕಿ’ ಚಿತದ ಟ್ರೈಲರ್ ಬಿಡುಗಡೆ ಕಾಯಕ್ರಮವು ವೇದಿಕೆಯಾಗಿತ್ತು. ಒಂಬತ್ತು ತಿಂಗಳು  ಗರ್ಭದಲ್ಲಿ ಭಾರವನ್ನು ಹೊತ್ತುಕೊಂಡು, ನಂತರವು ಅದರ ನೊಗವನ್ನು ಹೊರುತ್ತಲೆ ಇರುತ್ತಾಳೆ.   ಎಲ್ಲಿಯವರೆಗೂ ಇಂತಹ ದೌರ್ಜನ್ಯ ನಿಲ್ಲವುದಿಲ್ಲವೋ ಅಲ್ಲಿಯವರೆಗೂ ಸ್ರೀಯರ ನಂಜು  ಕಡಿಮೆಯಾಗುವುದಿಲ್ಲ್ಲವೆಂದು ಅಭಿಪ್ರಾಯ ಪಟ್ಟರು.

       ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪಾತ್ರವಾಗಿ ಅಭಿನಯಿಸಿದ್ದು  ಛಾಲೆಂಜಿಂಗ್ ಆಗಿತ್ತು. ಪ್ರಾರಂಭದಲ್ಲಿ ಶೇಕಡ ೧೦ರಷ್ಟು ಭಯವಿತ್ತು. ಕೊನೆಯಲ್ಲಿ  ಮಹಿಳೆ ಪರ ನಿಲ್ಲುವ ಧೈರ್ಯ ಬಂತು. ಚಿತ್ರವು ಈಗಿನ ಟ್ರೆಂಡ್‌ಗೆ ಪೂರಕವಾಗಿದೆ. ಪಾತ್ರ ಮಾಡಲು ಸುಲಭವಾಗುವಂತೆ ನಿರ್ದೇಶಕರು ಇದಕ್ಕೆ ಸಂಬಂದಪಟ್ಟ ಪುಸ್ತಕಗಳನ್ನು ನೀಡಿದ್ದರು. ೧೦೦೦ ಹೆಣ್ಣು ಮಕ್ಕಳ ಗೋಳಿನ ಕತೆಯ ಪ್ರತಿನಿಧಿಯಾಗಿ ರಂಗನಾಯಕಿ ಇರ‍್ತಾಳೆ. ಏನೇ ಆದರೂ ನಮ್ಮ ಜೀವನ, ಜೀವಕ್ಕೆ ನಾವೇ ಹೊಣೆಯಾಗಿರುತ್ರವೆಂದು  ಮಹಿಳಾ ಪ್ರಧಾನ ನಾಯಕಿ ಅದಿತಿಪ್ರಭುದೇವ ಹೇಳಿದರು.

       ಸಮಾಜದ ಕೊಳಕುಗಳನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ದೆಹಲಿಯಲ್ಲಿ ನಡೆದ ನಿರ್ಭಯ ಕೇಸ್‌ನಲ್ಲಿ ನ್ಯಾಯಲಯ ದುರಳರಿಗೆ ಶಿಕ್ಷಿ ವಿಧಿಸಿದ್ದರೂ, ಆಕೆಯ ಸಾವು ಭಾರಿ ಸುದ್ದಿಯಾಗಿತ್ತು. ಊಹಿಸುವಂತೆ ಆಕೆಯು ಬದುಕಿದ್ದರೆ ಯಾವ ರೀತಿ ನ್ಯಾಯಲಯದಲ್ಲಿ ಹೋರಾಟ ಮಾಡುತ್ತಿದ್ದಳು. ಇದನ್ನು ಸಕರಾತ್ಮಕ, ನಕರಾತ್ಮಕವಾಗಿ ತೋರಿಸಲಾಗಿದೆ.  ಕನ್ಯತ್ವ ಅಂದರೆ ಏನು. ಅದನ್ನು ದಾಟಿ ಇನ್ನೋಂದು  ವಿಷಯವನ್ನು ಹೇಳಲಾಗಿದೆ. ಮಾಮೂಲಿ ಹಾಡುಗಳಂತೆ ಇರದೆ ಕೃಷ್ಣ ನೀ ಬೇಗನೇ ಬಾರೋ, ಸೀತಾ ಕಲ್ಯಾಣ ವೈಭವ ಸಾಹಿತ್ಯವನ್ನು ಬಳಸಲಾಗಿ, ಮಧ್ಯೆ ಬರುವ ಪದಗಳಿಗೆ ಪಲ್ಲವಚಾರ್ಯ ಸಾಹಿತ್ಯವನ್ನು ಬರೆದು,  ಕದ್ರಿಮಣಿಕಾಂತ್ ಸಂಗೀತ ಸಂಯೋಜಸಿದ್ದಾರೆ. ಸಂಪುಟ-೨ ಕತೆ ಕೇಳಿದ ನಿರ್ಮಾಪಕರು ಚಿತ್ರ ಮಾಡಲು ಆಸಕ್ತಿ ತೋರಿಸಿದ್ದಾರೆ. ಇದರಲ್ಲಿ ತಾರಾ ನಟಿಸಿದರೆ ಸೂಕ್ತ. ಅದಕ್ಕಾಗಿ ಎಲ್ಲರ ಸಮ್ಮುಖದಲ್ಲಿ ಕಾಲ್‌ಶೇಟ್ ಕೇಳುತ್ತಿರುವೆ.  ನಿರ್ಮಾಪಕರಿಗೆ ಮಾತುಕೊಟ್ಟಂತೆ ನಿಗದಿತ ಸಮಯದಲ್ಲಿ ಸಿನಿಮಾ ನೀಡಲಾಗಿದೆ. ನನ್ನ ಕೆಲಸ ಮುಗಿದಿದೆ ಅಂತ ನಿರ್ದೇಶಕ ದಯಾಳ್‌ಪದ್ಮನಾಭನ್ ಅವರನ್ನು ನೋಡುತ್ತಾ ಮಾತಿಗೆ ವಿರಾಮ ಹಾಕಿದರು.

       ಪ್ರತಿಯೊಬ್ಬ ಹೆಂಗಸರ ಮನಸ್ಸಿನಲ್ಲಿ ಗೆಲುವು, ಸೋಲು ಇರಲಿದ್ದು, ಅವರಿಗೆ ಧೈರ್ಯ ತುಂಬಲು ರಂಗನಾಯಕಿ ಬರುತ್ತಿದ್ದಾಳೆಂದು ನಿರ್ಮಾಪಕ ಎಸ್.ವಿ.ನಾರಾಯಣ್ ಬಣ್ಣನೆ ಮಾಡಿದರು.

       ಶೀರ್ಷಿಕೆ ಮೊದಲ  ಸಂಪುಟವಾಗಿದೆ. ಇನ್ನು ಅನೇಕ ಸಂಪುಟಗಳು ಗರ್ಭದಿಂದ ಹೊರಬರಲಿ. ನಿರ್ದೇಶಕರ ಹೆಸರಲ್ಲಿ ದಯೆ ತುಂಬಿದೆಯಾದರೂ ಅವರ ಚಿತ್ರಗಳು ಕ್ರೂರ, ಅತ್ಯಾಚಾರದ ಕತೆಗಳಾಗಿದೆ. ರಂಗನಾಯಕಿ ಈ ಶತಮಾನದ ಜಗತ್ತನ್ನು ಕಾಡುವ ಸಮಸ್ಯೆಗೆ ಒಳ್ಳೆಯ ಸಮಕಾಲೀನಳಾಗಿ ಇರುತ್ತಾರೆ. ಇಂದಿನ ಕಲಾವಿದೆಯರು ಕನ್ನಡ ಮಾತನಾಡಿದ್ದು ನೋಡಿದಾಗ, ಕನ್ನಡಕ್ಕೆ ಇನ್ನು ಭವಿಷ್ಯವಿದೆ ಎಂದು ನಾಗತ್ತಿಹಳ್ಳಿಚಂದ್ರಶೇಖರ್ ಆಹ್ವಾನಿತರನ್ನು  ನಗಿಸಿದರು.

      ನಾಯಕರುಗಳಾದ ಶ್ರೀನಿ, ತ್ರಿವಿಕ್ರಮ್, ಉಳಿದಂತೆ ಕಲಾವಿದರುಗಳಾದ ಸುಂದರ್, ಚಂದ್ರಚೂಡ್, ಛಾಯಾಗ್ರಾಹಕ ರಾಕೇಶ್, ಕಾರ್ಯಕಾರಿ ನಿರ್ಮಾಪಕ ಅವಿನಾಶ್, ಅತಿಥಿಗಳ ಪೈಕಿ ಕೆಜಿಎಫ್ ಖ್ಯಾತಿಯ ಅರ್ಚನಾಜೋಯಿಸ್, ಒರಟ ಪ್ರಶಾಂತ್, ಬಾಮಾ.ಹರೀಶ್ ಮುಂತಾದವರು ಚುಟುಕು ಸಮಯ ತೆಗೆದುಕೊಂಡರು. ಅಂದುಕೊಂಡಂತೆ  ಆದರೆ ಮುಂದಿನ ತಿಂಗಳು  ತೆರೆಕಾಣುವ ಸಾದ್ಯತೆ ಇದೆ ಎಂಬ ಮಾಹಿತಿ ತಂಡದಿಂದ ಲಭ್ಯವಾಯಿತು.

 

 

Copyright@2018 Chitralahari | All Rights Reserved. Photo Journalist K.S. Mokshendra,