Ogara.Press Meet.

Wednesday, September 04, 2019

92

ಸಂಪ್ರದಾಯ  ಮತ್ತು  ಸ್ವಾದಕ್ಕೆ ಮತ್ತೋಂದು  ಹೆಸರು  ಓಗರ

          ಓಗರ ಅಂದರೆ ಕರ್ನಾಟಕದಲ್ಲಿ ಅನ್ನ ಎಂದರ್ಥ ಕೊಡುತ್ತದೆ. ಸ್ವಾದಿಷ್ಟ ಆರೋಗ್ಯಕರ ಅಡುಗೆಯನ್ನು ದಿಢೀರ್ ತಯಾರಿಸಲು ಸಾಂಪ್ರದಾಯಿಕ  ಮಸಾಲಾ ಮಿಶ್ರಣಗಳ ಶ್ರೀಮಂತ ಪರಂಪರೆಯನ್ನು ಇದು ಮನೆ ಮನೆಗೆ ತರುತ್ತದೆ. ಇದರಲ್ಲಿ  ತಯಾರಾಗುವ ಸಿದ್ದ ತಿನಿಸುಗಳು ಗ್ರಾಹಕರ ನಾಲಿಗೆಗೆ ರುಚಿಕರವಾಗಿ ಧೀರ್ಘಕಾಲದವರೆಗೂ ಉಳಿಸುತ್ತದೆ. ಶ್ರೀಚಕ್ರ ಫುಡ್ಸ್ ಅಂಡ್ ಬಿವರೇಜಸ್ (ಪ್ರೈ) ಲಿ. ಸಂಸ್ಥೆಯ ‘ಓಗರ’ ಮಾಲೀಕ ರಘುನಾಥ್ ರಾಷ್ಟದಲ್ಲಿ ಅಂದಾಜು ೫೦ ಸಾವಿರ ಓಗರ ಮಳಿಗೆ ಸ್ಥಾಪಿಸಲು ನಿರ್ಧರಿಸಲಾಗಿದೆ.  ರಾಜ್ಯದಲ್ಲಿ ೮ ಸಾವಿರ ಮಳಿಗೆಗಳು, ಅಲ್ಲದೆ ತಮಿಳುನಾಡು, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ನಾನಾ  ಭಾಗಗಳಲ್ಲಿ  ಮಳಿಗೆಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.  ಅಮೇರಿಕ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಪುರದಲ್ಲಿ ಮಳಿಗೆ ತೆರೆಯಲು ಅರ್ಜಿ ನೀಡಲಾಗಿದೆ.  ಶ್ರೀಘ್ರದಲ್ಲೆ ಆ ಕಡೆಯಿಂದ ಹಸಿರುನಿಶಾನೆ ಸಿಕ್ಕಿದ ತಕ್ಷಣ ಅಲ್ಲಿಯೂ ಶಾಖೆ ತೆರೆಯಲಾಗುವುದು ಎಂದರು.  ಇದೇ ಸಂದರ್ಭದಲ್ಲಿ ಇದಕ್ಕೆಲ್ಲಾ ಕಾರಣರಾದ ಪತ್ನಿ ವಾಣಿಶ್ರೀ ಸಲಹೆ, ಸಹಕಾರ, ಕಷ್ಟ ಕಾಲದಲ್ಲಿ ಕೈಹಿಡಿದ ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಸಹಾಯ ಮಾಡಿದೆ ಅಂತ  ಸ್ಮರಿಸಿದರು.

        ವಿಶೇಷ ಎಂದರೆ ಓಗರ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟ ಅನಂತನಾಗ್ ಇರುವುದು ತಂಡಕ್ಕೆ ಆನೆ ಬಲ ಬಂದಂತೆ ಆಗಿದೆ. ನಟನ ೭೧ನೇ ಹುಟ್ಟುಹಬ್ಬದಂದು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ  ಅನಂತನಾಗ್ ಮಾತನಾಡಿ ಎರಡು ಕಂಪೆನಿಗಳಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದೆ.  ಇವರೊಂದಿಗೆ ಮೊದಲಬಾರಿ ವಿದೇಶದಲ್ಲಿ ಓಗರ ಬಗ್ಗೆ ಅರಿವು ಮೂಡಿಸಲು  ಹಾಜರಾಗಿದ್ದೆ. ಈಗ ಆಹಾರ ಉತ್ಪನ್ನ ತಯಾರಿಕೆಗೆ ರಾಯಭಾರಿಯಾಗಿ ಇರುವುದು ಹೆಮ್ಮ ಅನಿಸಿದೆ.  ವರ್ಷದಲ್ಲಿ ೬೦ ದಿನಗಳನ್ನು ಇವರಿಗೆ ಮೀಸಲಿಡುತ್ತೇನೆಂದು ಕೇಕ್‌ನ್ನು ಕತ್ತರಿಸಿ, ನಾರದ ವಿಜಯ ಚಿತ್ರದ ‘ಎಂಥ ಲೋಕವಯ್ಯ’ ಗೀತೆಯ ಸಾಲನ್ನು ಹಾಡಿದರು.

       ಶ್ರೀಘ್ರದಲ್ಲೆ ಬೆಂಗಳೂರು-ಮೈಸೂರು ಹೆದ್ದಾರಿಯ ಕಂಗೇರಿ ಬಳಿ ಓಗರ ರೆಸ್ಟೋರೆಂಟ್ ನಿರ್ಮಾಣವಾಗಲಿದೆ. ನಂತರ ಇತರೆ ಕಡೆಗಳಲ್ಲಿ ರೆಸ್ಟೋರೆಂಟ್‌ನ್ನು ಆರಂಭಿಸಲಾಗುತ್ತದೆ.  ಸದ್ಯ ಹದಿನಾರು ತರಹದ  ಆಹಾರ ಉತ್ಪನ್ನಗಳು ಲಭ್ಯವಿದ್ದು, ಹದಿಮೂರು ಉತ್ಪನ್ನಗಳು ಸಿದ್ದವಾಗುತ್ತಿದೆ. ಮುಂದೆ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಮಹಿಳೆಯರು, ನಿರುದ್ಯೋಗಿ ಯುವಕರುಗಳಿಗೆ  ಭವಿಷ್ಯದಲ್ಲಿ ಸುಮಾರು ೨೮ ಲಕ್ಷ ಮಂದಿಗೆ ಕಂಪೆನಿಯು ಉದ್ಯೋಗ ನೀಡಲಿದೆ ಎಂಬುದರ ಮಾಹಿತಿಯನ್ನು ರಘುನಾಥ್ ತಿಳಿಸಿ, ಇದರ ಕುರಿತಂತೆ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದರು.

 

 

Copyright@2018 Chitralahari | All Rights Reserved. Photo Journalist K.S. Mokshendra,