Ward No.11.New Film Muhurath.

Thursday, September 05, 2019

122

ವಾರ್ಡ್  ನಂ.೧೧ರಲ್ಲಿ  ನಡೆಯುವ  ಗಾಥೆ

       ವಾರ್ಡ್ ಅಂತ ಆಸ್ಪತ್ರೆ, ಪಟ್ಟಣಗಳಲ್ಲಿ ಬಳಸುವ ಪದವಾಗಿದೆ. ಈಗ ‘ವಾರ್ಡ್ ನಂ.೧೧’ ಎನ್ನುವ ಪೊಲಟಿಕಲ್ ಥ್ರಿಲ್ಲರ್ ಚಿತ್ರವೊಂದು ಸೆಟ್ಟೇರಿದೆ. ಪಾಂಡವಪುರದ ಶ್ರೀಕಾಂತ್ ಇಂಜನಿಯರಿಂಗ್ ಓದುವಾಗಲೇ ಕತೆಗಳನ್ನು ಬರೆಯುವ ಹವ್ಯಾಸ ರೂಡಿಸಿಕೊಂಡಿದ್ದರು. ಅದರಲ್ಲಿ ಇದು ಒಂದಾಗಿದೆ. ಹಲವು ನಿರ್ದೇಶಕ ಬಳಿ ಸಹಾಯಕರಾಗಿ ಕೆಲಸ, ಕಿರುಚಿತ್ರ ಸಿದ್ದಪಡಿಸಿದ್ದು,  ಈಗ ಅನುಭೂತಿಯಿಂದ ಚಿತ್ರಕ್ಕೆ ರಚನೆ, ನಿರ್ದೇಶನ ಮಾಡುತ್ತಿದ್ದಾರೆ. ಕಾಲ್ಪನಿಕ ವಾರ್ಡ್‌ನಲ್ಲಿ  ನಾಲ್ಕು ಗೆಳಯರು ಇರುತ್ತಾರೆ. ಅದರಲ್ಲಿ ಒಬ್ಬನ ಕೊಲೆಯಾಗುತ್ತದೆ. ಇದನ್ನು ತನಿಖೆ ಮಾಡಲು ಹೋದಾಗ ಹಲವು ಸಂಗತಿಗಳು ಹೊರಬಂದು ತಿರುವು ಪಡೆದುಕೊಳ್ಳುತ್ತದೆ. ಮುಂದಿನದನ್ನು ಸಿನಿಮಾ ನೋಡಬೇಕಂತೆ. 

        ರಾಜಕೀಯ ಸಿನಿಮಾದಲ್ಲಿ ಇಲ್ಲ. ಆದರೆ ಚಿತ್ರದಲ್ಲಿ ರಾಜಕೀಯ ಇದೆ ಅಂತ ಬಣ್ಣಿಸಿಕೊಳ್ಳುವ ರಾಘವೇಂದ್ರರಾಜ್‌ಕುಮಾರ್ ಖಾದಿ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಕಾರ್ಪೋರೇಟರ್/ಶಾಸಕ ಇರಬಹುದು. ಏರಿಯಾದಲ್ಲಿ ಏನಾದ್ರು ತೊಂದರೆ ಆದರೆ ಅದನ್ನು ಬಗೆಹರಿಸುವ ರಕ್ಷಿತ್ ನಾಯಕನಾಗಿ ಹೊಸ ಅನುಭವ. ಉಳಿದಂತೆ ಮೂರು ಗೆಳಯರುಗಳಾಗಿ ನಾಲ್ಕು ವರ್ಷದ ನಂತರ ಬಣ್ಣ ಹಚ್ಚುತ್ತಿರುವ ಜೋಷ್ ಖ್ಯಾತಿಯ ವಿಶ್ವಾಸ್, ಕಾಮಿಡಿಕಿಲಾಡಿಗಳು ಗೋವಿಂದೆಗೌಡ, ಸಾಗರ್. ಕಾಲೇಜು ಹುಡುಗಿಯಾಗಿ ಮೇಘಶ್ರೀ ಹಾಗೂ ಮಧ್ಯಮ ವರ್ಗದವಳಾಗಿ ಅಮೃತ ನಾಯಕಿಯರು. ಇವರೆಲ್ಲರ ಜೊತೆಗೆ ಸುಮನ್‌ನಗರ್‌ಕರ್ ನಿರ್ವಹಿಸುತ್ತಿರುವ ಪಾತ್ರವನ್ನು ತಂಡವು ಗುಟ್ಟಾಗಿ ಇಟ್ಟಿದೆ.

       ಡಾ.ನಾಗೇಂದ್ರಪ್ರಸಾದ್, ಜಯಂತ್‌ಕಾಯ್ಕಣಿ, ತಪಸ್ವಿ ಸಾಹಿತ್ಯದ ಐದು ಹಾಡುಗಳಿಗೆ ಬಿ.ಆರ್.ಸುರೇಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಾಕೇಶ್.ಸಿ.ತಿಲಕ್, ನೃತ್ಯ ಹೈಟ್‌ಮಂಜು, ಸಂಕಲನ ಗಣೇಶ್‌ಮಲ್ಲಯ್ಯ, ಸಂಭಾಷಣೆ ಶ್ರೀಕಾಂತ್-ಹರೀಶ್ ಅವರದಾಗಿದೆ. ದಾವಣಗೆರೆಯ ಉದ್ಯಮಿ ಗುರುರಾಜ್.ಎ ಮತ್ತು ಸಂದೀಪ್‌ಶಿವಮೊಗ್ಗ ಜಂಟಿಯಾಗಿ ಬ್ಲೂಬೆಲ್ ಎಂಟರ್‌ಟೈನ್ ಮೆಂಟ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಶ್ರೀ ವೇಣುಗೋಪಾಲ ದೇವಾಲಯದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ ಪುನೀತ್‌ರಾಜ್‌ಕುಮಾರ್ ಮೊದಲ  ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ರಿಶಬ್‌ಶೆಟ್ಟಿ ಕ್ಯಾಮಾರಾ ಚಾಲನೆ ಮಾಡಿ ತಂಡಕ್ಕೆ ಶುಭಹಾರೈಸಿದರು.

 

 

Copyright@2018 Chitralahari | All Rights Reserved. Photo Journalist K.S. Mokshendra,