Nishkarsha.Old Film Re-Release Press Meet.

Thursday, September 05, 2019

61

ಹೊಸ  ತಂತ್ರಜ್ಘಾನದಲ್ಲಿ  ನಿಷ್ಕರ್ಷ

        ೧೯೯೪ರಲ್ಲಿ ಬಿಡುಗಡೆಗೊಂಡ ‘ನಿಷ್ಕರ್ಷ’  ಸೂಪರ್ ಹಿಟ್ ಚಿತ್ರದಲ್ಲಿ ಡಾ.ವಿಷ್ಣುವರ್ಧನ್, ಅನಂತ್‌ನಾಗ್, ಸುಮನ್‌ನಗರ್‌ಕರ್, ಪ್ರಕಾಶ್‌ರೈ, ರಮೇಶ್‌ಭಟ್ ಮತ್ತು ವೈಟ್ ಕಾಲರ್ ವಿಲನ್ ಆಗಿ ಬಿ.ಸಿ.ಪಾಟೀಲ್ ಮೊದಲ ಬಾರಿ ಬಣ್ಣ ಹಚ್ಚಿದ್ದರು.  ರಾಜ್ಯ ಸರ್ಕಾರದಿಂದ ಮೂರು ಪ್ರಶಸ್ತಿಗಳು, ಉದಯ ವಾಹಿನಿಯಿಂದ ಒಂಬತ್ತು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿತು. ಸದರಿ ಚಿತ್ರಕ್ಕೆ  ಅಧುನಿಕ ತಂತ್ರಜ್ಘಾನದ ಸ್ಪರ್ಶ ನೀಡಿದೆ. ಇದರನ್ವಯ ಮಾಹಿತಿ ನೀಡಲು ನಿರ್ಮಾಪಕಿ ವನಜಾ.ಬಿ.ಪಾಟೀಲ್  ಮಾದ್ಯಮದವರನ್ನು ಭೇಟಿ ಮಾಡಿದ್ದರು.

        ಬಿ.ಸಿ.ಪಾಟೀಲ್ ಮಾತನಾಡುತ್ತಾ ಒಂದು ದಿನ, ಒಂದೇ ಸ್ಥಳದಲ್ಲಿ ನಡೆಯುವ ಕತೆಯಾಗುವುದರಿಂದ ವೆಚ್ಚ ಕಡಿಮೆಯಾಗುತ್ತದೆಂದು ಭಾವಿಸಲಾಗಿತ್ತು. ಆ ಕಾಲಕ್ಕೆ ಅರವತ್ತು ಲಕ್ಷ ಖರ್ಚಾಗಿತ್ತು. ೫೬ ದಿವಸದ ಚಿತ್ರೀಕರಣ ನಡೆದಿತ್ತು. ವರಾತ ಮಾಡಿ ನಿರ್ದೇಶಕರಿಂದ  ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಂತೆ  ಮುಂದೆ ಅಂತಹುದೆ ಅವಕಾಶಗಳು ಒದಗಿಬಂತು.  ವಿಷ್ಣುರವರ ಸಂಭಾವನೆ ಏಳೂವರೆ ಲಕ್ಷದಲ್ಲಿ  ನಮ್ಮ ಕಷ್ಟ ನೋಡಿ  ಒಂದು ಲಕ್ಷ ಕಡಿಮೆ ತೆಗೆದುಕೊಂಡರು. ಚಿತ್ರವು  ಈಗಿನ ಟೆಕ್ನಾಲಜಿಗೆ ಅಳವಡಿಸಿಕೊಂಡು ಎಂದಿನಂತೆ ಸಂಗೀತ, ಕಲಾವಿದರ ಧ್ವನಿಯನ್ನು ಉಳಿಸಿಕೊಳ್ಳಲಾಗಿದೆ. ಸಾಹಸ ಸಿಂಹನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ  ಕೊಡಲಾಗುವುದು  ಎಂದರು.

       ಬೆಳದಿಂಗಳ ಬಾಲೆ ಮಾಡುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಗೆ ಗೌರವ ಕೊಡುವಂತ ಸಿನಿಮಾ ಮಾಡಬೇಕಂದು ಯೋಚಿಸಿದ್ದೆ ನಿಷ್ಕರ್ಷ ಕತೆ ಹೊಳೆಯಿತು. ಮಣಿಪಾಲ್ ಸೆಂಟರ್‌ನ ಹನ್ನೊಂದನೇ ಮಹಡಿಯಲ್ಲಿರುವ ಸರ್ಕಾರಿ ಕಚೇರಿಯನ್ನು ಬ್ಯಾಂಕ್ ಆಗಿ ಪರಿವರ್ತಿಸಿ ಭಾನುವಾರ ಹೂರತುಪಡಿಸಿ ಉಳಿದ ದಿನದಂದು ರಾತ್ರಿ ಚಿತ್ರೀಕರಣ ನಡೆಸಲಾಯಿತು.  ವಿಷ್ಣು ಸರ್ ೪೫ ನಿಮಿಷ ನಂತರ ಬರುತ್ತಾರೆಂದು ಅವರಿಗೆ ತಿಳಿದಿರಲಿಲ್ಲ. ಹೀಗೆ ಪಾರಿವಾಳ ತರಿಸಿದ್ದು, ಡೈಲಾಗ್ ಮೂಲಕವೇ ಅತ್ಯಾಚಾರ ನಡೆಸಿದ್ದು, ಡಿಲಿವರಿ ದೃಶ್ಯ ಸೆರೆ ಹಿಡಿದುದನ್ನು  ನಿರ್ದೇಶಕ ಸುನಿಲ್‌ಕುಮಾರ್ ದೇಸಾಯಿ ನೆನಪು ಮಾಡಿಕೊಳ್ಳುತ್ತಾ ಹೋದರು.

       ಸುಮನ್‌ನಗರ್‌ಕರ್, ಗುರುಕಿರಣ್, ನಿರ್ಮಾಪಕಿ,  ಸೌಮ್ಯಾಪಾಟೀಲ್, ಡಿಜಿಟಲ್ ಮಾಡಿರುವ ಈಶ್ವರ್ ಉಪಸ್ತಿತರಿದ್ದು ಒಂದಷ್ಟು  ಅನುಭವಗಳನ್ನು ಹಂಚಿಕೊಂಡರು. ಜಯಣ್ಣ ಮೂವೀಸ್ ಮುಖಾಂತರ ಸೆಪ್ಟಂಬರ್ ೨೦ರಂದು ಕನ್ನಡದಲ್ಲಿ ೧೦೦ ಕೇಂದ್ರಗಳು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,