Bimba.Film World Record and National Record.

Sunday, September 01, 2019

43

 

ಪ್ರಪಂಚ ದಾಖಲೆಗೆ  ಅರ್ಹಗೊಂಡ ಚಿತ್ರ ಬಿಂಬ

            ಒಂದೇ ಸ್ಥಳ, ಕಲಾವಿದ, ದೃಶ್ಯ ಹಾಗೂ ಸಂಗೀತ ಇರಲಿರುವ ‘ಬಿಂಬ’ ಚಿತ್ರವು ಈಗ ಗಿನ್ನಿಸ್ ದಾಖಲೆಗೆ ಸರಿಸಮನಾದ ಕೊಲ್ಕತ್ತಾದಲ್ಲಿರುವ ‘ಯುಆರ್‌ಎಫ್’ ಸಂಸ್ಥೆಯು ಗುರುತಿಸಿದೆ. ಇದರನ್ವಯ ಪ್ರಮಾಣಪತ್ರ ವಿತರಣೆ ಮಾಡಲು ಸಂಸ್ಥೆಯ ಮುಖ್ಯ ಸಂಪಾದಕ ಸುನಿಲ್‌ಜೋಸಫ್ ಆಗಮಿಸಿದ್ದರು. ಅವರು ಮಾತನಾಡಿ ಮಲೆಯಾಳಂದಲ್ಲಿ ಒಂದೇ ಸ್ಥಳದಲ್ಲಿ ೨.೧೦ ಗಂಟೆಯ ಸಿನಿಮಾವೊಂದು ಬಂದಿದ್ದು, ಅದರಲ್ಲಿ ಹಲವು ಕಲಾವಿದರು ಕಾಣಿಸಿಕೊಂಡಿದ್ದರು. ಆದರೆ ಇದರಲ್ಲಿ ಒಬ್ಬರೆ ಇರುವುದರಿಂದ ದಾಖಲೆಗೆ ಅರ್ಹಗೊಂಡಿರುವುದಾಗಿ ಸಭೆಯು ನಿರ್ಣಯ ತೆಗೆದುಕೊಂಡಿದೆ. ಬಿಂಬ ಆ ತೊಂಬತ್ತು ನಿಮಿಷಗಳಲ್ಲಿ ಒಬ್ಬರೆ ಸಂಭಾಷಣೆ ಹೇಳುತ್ತಾ ನಟಿಸುವುದು ಸುಲುಭದ ಕೆಲಸವಲ್ಲ. ಇಂದಿನಿಂದ ಶ್ರೀನಿವಾಸಪ್ರಭು, ಜಿ.ಮೂರ್ತಿ ನಮ್ಮ ಸಂಸ್ಥೆಗೆ ಸೇರಿದವರಾಗಿರುತ್ತಾರೆ. ಇಂತಹ ವಿನೂತನ ಪ್ರಯತ್ನಗಳು ಮುಂದುವರೆಯಲಿ ಎಂದರು.

       ಇದೊಂದು ತಂತ್ರಜ್ಘರ  ಸಿನಿಮಾವೆಂದು ಬಣ್ಣಿಸಿಕೊಳ್ಳುತ್ತಾರೆ ನಿರ್ಮಾಪಕ ಮತ್ತು ನಿರ್ದೇಶಕ ಜಿ.ಮೂರ್ತಿ. ವಿಗಡ ವಿಕ್ರಮರಾಯ ನಾಟಕ ನೋಡಿ ಮನೆಗೆ ಬಂದರೂ ೧೫ ದಿವಸ ಕಾಡಿಸಿತು.  ಶ್ರೀನಿವಾಸಪ್ರಭು ಅವರೊಂದಿಗೆ ಚರ್ಚಿಸಿದಾಗ ಪ್ರಾರಂಭದಲ್ಲಿ ಇದು ಕಷ್ಟವೆಂದು ಹೇಳಿದ್ದರು.  ಹಲವು ಸುತ್ತು ಚರ್ಚೆ ನಡೆಸಿ ಕೊನೆಗೆ ಸಿನಿಮಾರೂಪ ಪಡೆದುಕೊಂಡಿತು.  ಛಾಯಗ್ರಾಹಕ ಪಿ.ಕೆ.ಹೆಚ್.ದಾಸ್ ಅವರ ಕೆಲಸ ಮರೆಯುವ ಆಗಿಲ್ಲ. ಎಂಟು ಅಡಿ ಉದ್ದದ ಫ್ಲೂಟ್‌ದಲ್ಲಿ ಪ್ರವೀಣ್‌ಗೋಡ್ಕಂಡಿ ಸಂಗೀತ ಸಂಯೋಜಿಸಿದ್ದಾರೆಂದು ನೆನಪುಗಳನ್ನು ತೆರೆದಿಟ್ಟರು.

        ಸ್ವಾತಂತ್ರಪೂರ್ವ ದಿನಗಳಲ್ಲಿ ಕವಿ ಬ್ರಹ್ಮಚಾರಿ ಸಂಸರ (ಸ್ವಾಮಿ ವೆಂಕಟಾದ್ರಿ ಅಯ್ಯರ್) ಕುರಿತ ಕತೆಯಾಗಿದೆ. ಒಬ್ಬನೆ ಕ್ಯಾಮಾರ ಮುಂದೆ ೯೦ ನಿಮಿಷ ಇರಬೇಕಾದ ಕಾರಣ ಅಭಿನಯದಲ್ಲಿ ಹಲವು ರೀತಿಯ ಭಾವನೆಗಳನ್ನು ತೋರಿಸಿದ್ದು, ೫೮ ಪುಟಗಳ ಡೈಲಾಗ್ ಹೇಳಿದ್ದು ಛಾಲೆಂಜಿಂಗ್ ಆಗಿತ್ತು ಎಂಬುದು ಶ್ರೀನಿವಾಸಪ್ರಭು ಅನುಭವದ ನುಡಿಯಾಗಿತ್ತು.

       ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲು ಚಿತ್ರವು ಸದ್ದು ಮಾಡಲು ಕಾರಣರಾದ ಲಹರಿವೇಲು, ಮಾಜಿ ನಾಟಕ ಅಕಾಡಮಿ ಅಧ್ಯಕ್ಷ ಡಿ.ವಿ.ರಾಜರಾಮ್ ಸಮ್ಮುಖದಲ್ಲಿ ತಂಡವು ಸುನಿಲ್‌ಜೋಸಫ್ ಅವರನ್ನು ಸನ್ಮಾನಿಸಿತು. ಮೂರ್ತಿ ಪತ್ನಿ ಎಸ್.ಮಂಜುಳಾ, ಶ್ರೀನಿವಾಸಪ್ರಭು ಅರ್ಧಾಂಗಿ  ರಂಜಿನಿಪ್ರಭು  ಸಹ ನಿರ್ಮಾಪಕರಾಗಿರುವ ಚಿತ್ರವು ನಂತರ ಪ್ರದರ್ಶನಗೊಂಡಿತು. 

 

 

Copyright@2018 Chitralahari | All Rights Reserved. Photo Journalist K.S. Mokshendra,