Vishnu Circle.Film Press Meet.

Tuesday, September 03, 2019

97

 

ಚಿತ್ರಮಂದಿರದಲ್ಲಿ  ವಿಷ್ಣು  ಸರ್ಕಲ್

        ಸಾಹಸ ಸಿಂಹ ಡಾ.ವಿಷ್ಣುವರ್ಧನ್  ಹೆಸರನ್ನು ಬಳಸಿಕೊಂಡು ಬಂದಿರುವ ಬಹುತೇಕ ಚಿತ್ರಗಳು  ಯಶಸ್ಸನ್ನು ಕಂಡಿದೆ. ಅದರ ಪಸೆಯಿಂದಲೇ ‘ವಿಷ್ಣು ಸರ್ಕಲ್’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಫ್ ಮೆಂಟಲ್ ನಿರ್ದೇಶನ ಮಾಡಿರುವ ಲಕ್ಷೀದಿನೇಶ್ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಅಂತ ಉಪಶೀರ್ಷಿಕೆಯಲ್ಲಿ ಹೇಳಿರುವಂತೆ ಪ್ರತಿಯೊಬ್ಬರ ಜೀವನಾಂಶ ಸಾರುವ ಸಾರಾಂಶವಾಗಿದೆ. ಒಳ್ಳೆ ಕತೆಯನ್ನು ಬ್ಲೆಂಡ್ ಮಾಡಿ ಅದಕ್ಕೆ ಪ್ರಯೋಗಾತ್ಮಕ ಚಿತ್ರವಾಗುವಂತೆ ಸ್ಪರ್ಶ ನೀಡಲಾಗಿದೆ. ಹಿಂದಿನ ಸಿನಿಮಾದಲ್ಲಿ ಪ್ರೀತಿಯ ಹುಡುಕಾಟ ಏನೆಂಬುದನ್ನು ಹೇಳಲಾಗಿತ್ತು. ಇದರಲ್ಲಿ ಅದನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ. ಮೂವರು ತರುವಲಿಗಳು, ಒಬ್ಬ ತರುವರಿ, ಜೊತೆಗೆ ದತ್ತಣ್ಣನ ಪ್ರೀತಿ ಸೇರಿದರೆ ಒಟ್ಟಾರೆ ನಾಲ್ಕು ಲವ್ ಸ್ಟೋರಿಗಳು ಬರಲಿದೆ. ಮುತ್ಸದ್ದಿಗೆ ಹಿರಿಯ ನಟಿ ಜಯಂತಿ  ಭಾವಚಿತ್ರದಲ್ಲಿ ಜೋಡಿಯಾಗಿರುತ್ತಾರೆ, ಐದು ಜನ ಹುಡುಗರ ತಂಡವೊಂದು ಸೇರಿಕೊಂಡು ವಿಷ್ಣುಸರ್ಕಲ್‌ನ್ನು ಕಟ್ಟಿರುತ್ತಾರೆ. ಏನೇ ಘಟನೆ ನಡೆದರೂ ಇದೇ ವೃತ್ತ ಅದಕ್ಕೆ ಸಾಕ್ಷಿಯಾಗಿರುತ್ತದೆ. ಸಿನಿಮಾದಲ್ಲಿ ಡಾ.ವಿಷ್ಣುವಿನ ಆದರ್ಶಗಳು ಹುಡುಗರಲ್ಲಿ ಇರುತ್ತದೆ,  ಪ್ರತಿ ಪಾತ್ರಗಳ ಆಗಮನ, ನಿರ್ಗಮನ ಅರ್ಥಪೂರ್ಣವಾಗಿ ಇರುವುದು ಪ್ಲಸ್ ಪಾಯಿಂಟ್ ಆಗಿದೆ.  

         ಸಾಲ ಮರುಪಾವತಿ ಮಾಡುವ ಹುಡುಗನಾಗಿ  ಗುರುರಾಜ್‌ಜಗ್ಗೇಶ್ ನಾಯಕ.  ಆಕೃತಿ, ಪ್ರಕೃತಿ, ಸಂಸ್ಕ್ರತಿ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸಂಹಿತಾವಿನ್ಯಾ, ಡಾ.ಜಾನವಿ, ದಿವ್ಯಾಗೌಡ ನಾಯಕಿಯರು. ಮಡಕೇರಿ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿದ್ದುಕೋಡಿಪುರ ಸಾಹಿತ್ಯದ ಐದು ಗೀತೆಗಳ ಪೈಕಿ,  ನಾಲ್ಕು ಹಾಡುಗಳಿಗೆ ಶ್ರೀವತ್ಸ ರಾಗ ಒದಗಿಸಿದ್ದರೆ, ಪ್ರದೀಪ್‌ವರ್ಮ ಹಿನ್ನಲೆ ಶಬ್ದ  ಮತ್ತು ಇಳೆ ಗೀತೆಗೆ ಸಂಗೀತ  ಸಂಯೋಜಿಸಿದ್ದಾರೆ.  ಸನ್ನಿವೇಶಕ್ಕೆ ಪೂರಕವಾಗಿ ೩ ಘಿ ೪ ಅಡಿಯ ವಿಷ್ಣು ಪ್ರತಿಮೆಯನ್ನು ಸಿದ್ದಪಡಿಸಿ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.

       ಸಂಕಲನ ಸತೀಶ್‌ಚಂದ್ರಯ್ಯ,  ನೃತ್ಯ ಹೈಟ್‌ಮಂಜು, ಛಾಯಾಗ್ರಹಣ ಪಿ.ಎಲ್.ರವಿ, ಸಾಹಸ ಪಳನಿರಾಜ್ ಅವರದಾಗಿದೆ. ಡಾ.ವಿಷ್ಣು ಅಭಿಮಾನಿ, ರಿಯಲ್ ಎಸ್ಟೇಟ್ ಉದ್ಯಮಿ ಆರ್.ಭಾಸ್ಕರ್ ಅವರು ಪುತ್ರ ರುತ್ವಿಕ್.ಬಿ (ಆರ್‌ಬಿ) ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಕೊನೆ ಹಂತವಾಗಿ ಎರಡು ಹಾಡುಗಳು ಮತ್ತು ಟ್ರೈಲರ್‌ದಲ್ಲಿ ವಿರಾಮ ಅಂತ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದು  ವಿನೂತನವಾಗಿತ್ತು. ಸಚಿತ್ ಫಿಲಿಂಸ್‌ನ ವೆಂಕಟ್ ಸುಮಾರು ೧೫೦ ಕೇಂದ್ರಗಳಲ್ಲಿ ಚಿತ್ರವನ್ನು ಇದೇ ಶುಕ್ರವಾರದಂದು ತೆರೆ ಕಾಣಿಸಲು ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,