Vishnupriya.Film Press Meet.

Tuesday, September 03, 2019

69

ಹಲವು  ವಿಶೇಷತೆಗಳ  ವಿಷ್ಣು ಪ್ರಿಯ

        ನೂತನ ಚಿತ್ರ ‘ವಿಷ್ಣು ಪ್ರಿಯ’ದಲ್ಲಿ  ಒಂಬತ್ತು  ಔನ್ನತ್ಯಗಳು ಇರುವುದರಿಂದ  ಸುದ್ದಿಯಾಗಲು ಕಾರಣವಾಗಿದೆ. ಮೊದಲನೆಯದಾಗಿ  ಹಿರಿಯ ನಿರ್ಮಾಪಕ ಕೆ.ಮಂಜು ಬ್ಯಾನರ್‌ದಲ್ಲಿ ೪೫ನೇ ಚಿತ್ರವಾಗಿದ್ದು, ಅವರ  ಹೃದಯದಿಂದ ಬಂದಂತ  ಶೀರ್ಷಿಕೆ, ಹಾಗೂ ಮೂರು ಭಾಷೆಯಲ್ಲಿ ಬರುವ ಸಾದ್ಯತೆ ಇದೆ.  ಎರಡನೆಯದಾಗಿ  ಪ್ರೀತಿ ಎಂದರೆ ಏನು ಎಂಬುದನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರಿಗೆ ಮಕ್ಕಳು ಯಾವ ರೀತಿ ಗೌರವ ಕೊಡಬೇಕು, ಹಿರಿಯರಾದವರು ಯುವ ಪ್ರೇಮಿಗಳಿಗೆ ಪ್ರೋತ್ಸಾಹ ನೀಡಬೇಕು.  ಕೃತಕವಲ್ಲದ ೯೦ರ ದಶಕದ ಪ್ರೀತಿ ಕತೆ, ಸಂಬಂದಗಳ ಮೌಲ್ಯಗಳು ಇರಲಿದೆ. ಮೊರನೆಯದಾಗಿ ನೈಜ ಘಟನೆ ಆಧಾರಿತ, ಧಾರವಾಡದ ಸಿಂಧೂಶ್ರೀ  ವಿರಚಿತ ಕಾದಂಬರಿಯಾಗಿದೆ. ನಾಲ್ಕನೆಯದಾಗಿ ೧೨೦೦ ಕ್ಕೂ ಹೆಚ್ದು  ಆಡ್ ಫಿಲಿಂಗಳು, ತೆಲುಗು,ತಮಿಳು, ಹಿಂದಿ ಮತ್ತು ಮಲೆಯಾಳಂ ಸೇರಿದಂತೆ ೩೦ ಚಿತ್ರಗಳ ನಿರ್ದೇಶನ, ರಾಜ್ಯ, ಅಂತರರಾಜ್ಯ  ಪ್ರಶಸ್ತಿ ಪಡೆದಿರುವ ವಿ.ಕೆ.ಪ್ರಕಾಶ್ ನಿರ್ದೇಶನ ಮಾಡುತ್ತಿರುವುದು. ಐದನೆಯದಾಗಿ ನಿರ್ಮಾಪಕರ ಪುತ್ರ ಶ್ರೇಯಸ್‌ಮಂಜು ಹಿಂದಿನ ಚಿತ್ರ ಪಡ್ಡೆಹುಲಿಗಿಂತ ವಿಭಿನ್ನ ಲುಕ್‌ನಲ್ಲಿ  ವಿಷ್ಣು ಹೆಸರಿನೊಂದಿಗೆ ಕಾಣಿಸಿಕೊಳ್ಳುತ್ತಿರುವುದು.

      ಆರನೆಯದಾಗಿ ವಿಶ್ವದಾದ್ಯಂತ ತನ್ನ ಕಣ್‌ಸನ್ನೆ  ಮೂಲಕ ಮೋಡಿ ಮಾಡಿದ್ದ ಪ್ರಿಯಾವಾರಿಯರ್ ಸಂಕೀರ್ಣ ಶೇಡ್‌ಗಳಲ್ಲಿ ಪ್ರಿಯಳಾಗಿ ನಾಯಕಿ. ಏಳನೆಯದಾಗಿ ೬೦ ಚಿತ್ರಗಳಿಗೆ ಸಂಭಾಷಣೆ, ೭ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿರುವ ರವಿಶ್ರೀವತ್ಸ  ಮಾತುಗಳಿಗೆ ಪದಗಳನ್ನು ಪೋಣಿಸುತ್ತಿದ್ದಾರೆ. ಎಂಟನೆಯದಾಗಿ ತೆಲುಗುದಲ್ಲಿ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಗೋಪಿಸುಂದರ್ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.  ಒಂಬತ್ತನೆಯದಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಸುರೇಶ್‌ಅರಸ್ ಸಂಕಲನವಿದೆ.

      ತಾರಗಣದಲ್ಲಿ ಸುಚೇಂದ್ರಪ್ರಸಾದ್, ಚಿತ್ಕಲಾಬಿರದಾರ್, ಅಚ್ಯುತ್‌ಕುಮಾರ್, ಅಶ್ವಿನಿಗೌಡ, ನವೀನ್‌ಪಟೀಲು, ನಿಹಾಲ್ ಮುಂತಾದವರು ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ಡಾ.ನಾಗೇಂದ್ರಪ್ರಸಾದ್ ಸಾಹಿತ್ಯ, ಅಷ್ಟೇ ಸಂಖ್ಯೆಯ ಹೊಡೆದಾಟಗಳಿಗೆ  ಜಾನಿ-ರವಿವರ್ಮ-ವಿನೋಧ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.  ಛಾಯಾಗ್ರಹಣ ವಿನೋಧ್‌ಭಾರತಿ, ಕಲೆ ಮೋಹನ್‌ಪಂಡಿತ್, ಕಾರ್ಯಕಾರಿ ನಿರ್ಮಾಪಕ ಸುರೇಶ್.ಕೆ.ಮಂಜು ನಿರ್ವಹಣೆ ಇದೆ. ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಕಡೆಗಳಲ್ಲಿ ಎರಡು ಹಂತದ ಮಟ್ಟಿಗೆ ಚಿತ್ರೀಕರಣ ನಡೆಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,