Raaja Patha.Film Audio Rel.

Monday, September 30, 2019

50

ರಾಜಪಥ  ಹಾಡುಗಳ  ಪರ್ವ

       ಕಳೆದ ವರ್ಷ ರಾಜರಥ ಎನ್ನುವ ಚಿತ್ರವೊಂದು ಬಿಡುಗಡೆಗೊಂಡಿತ್ತು. ಈಗ ‘ರಾಜಪಥ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ನಿಜವಾದ ದಾರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ಹೊಸಬರೇ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಹಿರಿಯ ನಿರ್ದೇಶಕರುಗಳಾದ ಕೆ.ವಿ.ಜಯರಾಂ, ರಾಮದಾಸನಾಯ್ಡು ಬಳಿ ಕೆಲಸ ಕಲಿತಿರುವ ಸಿದ್ದುಮೂಗೂರು ಚಿತ್ರಕ್ಕೆ ರಚನೆ ಮತ್ತು ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಪ್ರತಿಯೊಬ್ಬರ ಜೀವನದಲ್ಲಿ ಪುಟ್ಟ ಪುಟ್ಟ ಕನಸುಗಳು ಇರುತ್ತವೆ.  ಅದನ್ನು ನನಸು ಮಾಡಿಕೊಳ್ಳಬೇಕಾದರೆ ತಾಳ್ಮೆ, ನಂಬಿಕೆ  ಮುಖ್ಯವಾಗಿರುತ್ತದೆ. ಹಾಗೆ ಪ್ರೀತಿ, ಸಂಸಾರ, ಸ್ನೇಹ ನಿಲ್ಲಬೇಕು ಅಂದರೆ ಇವರೆಡು ಇರಲೇ ಬೇಕು. ಇದರ ಸುತ್ತ ನಡೆಯಲಿರುವ ಸನ್ನಿವೇಶಗಳಲ್ಲಿ ಒಟ್ಟಾರೆ ಮೂವತ್ತಾರು ಪಾತ್ರಗಳು ಸಾಗುತ್ತದೆ. ಆ ಪೈಕಿ ಆರು ಪಾತ್ರಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ, ಬೆಂಗಳೂರು, ನೆಲಮಂಗಲ ಕಡೆಗಳಲ್ಲಿ ಇಪ್ಪತ್ತೆರಡು ದಿನಗಳ ಕಾಲ  ಚಿತ್ರೀಕರಿಸಲಾಗಿದೆ.

       ಗೋಕರ್ಣದ ಸಂತೋಷ್.ಹೆಚ್.ರಾಯ್ಕರ್  ಸಹಾಯಕ ನಿರ್ದೇಶಕ, ಕಿರುತೆರೆಯಲ್ಲಿ ಕಲಾವಿದನಾಗಿ ಈಗ ಪೂರ್ಣ ಪ್ರಮಾಣದ ನಾಯಕ ಜೊತೆಗೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕೊಳ್ಳೆಗಾಲದ ನಿತ್ಯಾ ಮಗುವಿನ ತಾಯಿಯಾಗಿ ನಾಯಕಿ. ಸಿಂಧೂಗೊಂಬೆ ಉಪನಾಯಕಿ. ಇವರೊಂದಿಗೆ ಉಮೇಶ್, ಸುಧೀರ್.ಹೆಚ್.ರಾಯಕರ್, ಆನಂದ್.ಡಿ.ಕಳಸ, ಎಸ್.ಎ.ಮುತ್ತಗಿ, ಲಕ್ಷಣ್‌ಪೂಜಾರಿ, ರಮಾಕಾಂತ್‌ಆರ್ಯನ್, ಬೇಬಿ ಪರಿಣಿತ, ಬೇಬಿ ಐಶ್ವರ್ಯ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ  ಹಾಗೂ ಮೂರು ಗೀತೆಗಳಿಗೆ ಕಂಠದಾನ ಮಾಡಿರುವುದು ಚಂದ್ರುಓಬಯ್ಯ. ಛಾಯಾಗ್ರಹಣ ರಘುರೂಗಿ, ಸಂಕಲನ ಸಂಜೀವ್‌ರೆಡ್ಡಿ, ಹಿನ್ನಲೆ ಶಬ್ದ ಜೇಮ್ಸ್‌ಪರಿಕಟ್ಟಿಲ್, ಕಲೆ ರಘುಚಾರ್ಲಿ ಅವರದಾಗಿದೆ.

       ಪ್ರಚಾರದ ಮೊದಲ ಹಂತವಾಗಿ ಕಲಾವಿದರ ಸಂಘದಲ್ಲಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ಇದೇ ಸಂದರ್ಭದಲ್ಲಿ  ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಗುರೂಜಿ ಆಗಮಿಸಿ ಲಿರಿಕಲ್ ವಿಡಿಯೋ ಹಾಡಿಗೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಸೆನ್ಸಾರ್‌ನಿಂದ ಪ್ರಶಂಸೆ ಪಡೆದುಕೊಂಡು ಯು ಪ್ರಮಾಣ ಪತ್ರ ಪಡೆದುಕೊಂಡಿದೆ. ಚಿತ್ರ ನೋಡಿರುವ ಮಾಲಿವುಡ್ ಸಿನಿಪಂಡಿತರು  ಡಬ್ಬಿಂಗ್ ಹಕ್ಕುಗಳನ್ನು ಖರೀದಿ ಮಾಡಿರುವುದು ನಿರ್ಮಾಪಕರಿಗೆ ಸಂತಸ ತಂದಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,