ಅದ್ದೂರಿ ತಾರಗಣದ ಗರುಡ
ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಉಗ್ರಗಾಮಿಗಳನ್ನು ಸೆದೆ ಬಡಿಯುವಾಗ ‘ಗರುಡ’ ಹೆಸರಿನ ಅಸ್ತ್ರವನ್ನು ಬಳಸಲಾಗಿತ್ತು. ಈಗ ಇದೇ ಹಸೆರಿನ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದಲ್ಲಿ ಇದಕ್ಕೆ ಸಣ್ಣದೊಂದು ಲಿಂಕ್ ಇದೆಯಂತೆ. ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕಲಾವಿದರುಗಳನ್ನು ಕುಣಿಸಿದ್ದ ಕೆ.ಧನಕುಮಾರ್ ಇದೆಲ್ಲಾ ಸಂವೇದನೆಯಿಂದ ಚೂಚ್ಚಲಬಾರಿ ನಿರ್ದೇಶಕನ ಸೀಟನ್ನು ಅಲಂಕರಿಸಿದ್ದಾರೆ. ಕುಟುಂಬದ ಜವಬ್ದಾರಿಯನ್ನು ಹೊತ್ತುಕೊಂಡಿರುವ ಹುಡುಗ ಅವರಿಗಾಗಿ ಏನು ಮಾಡ್ತಾನೆ, ಯಾವ ರೀತಿಯ ತ್ಯಾಗಕ್ಕೆ ಮುಂದಾಗುತ್ತಾನೆ. ಸುಂದರ ಕುಟುಂಬದಲ್ಲಿ ಎಲ್ಲವು ಚೆನ್ನಾಗಿದ್ದು, ಖುಷಿ ಖುಷಿಯಾಗಿರುವಾಗ, ಆಕಸ್ಮಿಕ ಘಟನೆ ಅವನ ಜೀವನವನ್ನೆ ಬದಲಾವಣೆ ಮಾಡುತ್ತದೆ. ಆ ಸಂದರ್ಭದಲ್ಲಿ ಅವನಿಗೆ ಮಾನಸಿಕ ಶಾಂತಿಭಂಗ ಆದಾಗ, ಹೇಗೆ ಪ್ರತಿಪಾದಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ.
ಸಿಪಾಯಿ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್ಮಹೇಶ್ ಕತೆ ಬರೆದು ಮೂರು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ನೌಕಾಸೇನೆ ಕ್ಯಾಪ್ಟನ್ ಲುಕ್ ಒಂದಾಗಿದೆ. ಕಾಲೇಜು ಹುಡುಗಿಯಾಗಿ ಆಶಿಕಾರಂಗನಾಥ್ ಮತ್ತು ಐಂದ್ರಿತಾರೈ ನಾಯಕಿಯರು. ಚಿತ್ರ ನೋಡಿದವರು ಆದಿಲೋಕೇಶ್ಗೆ ಹೆಣ್ಣುಮಕ್ಕಳು ಶಾಪಹಾಕುವ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ರಗಡ್ ಪೋಲೀಸ್ ಅಧಿಕಾರಿಯಾಗಿ ಶ್ರೀನಗರಕಿಟ್ಟಿ, ಉಳಿದಂತೆ ರಂಗಾರಣರಘು, ರಾಜೇಶ್ನಟರಂಗ, ರಮೇಶ್ಪಂಡಿತ್ ಮುಂತಾದವರು ನಟಿಸಿದ್ದಾರೆ. ಆಕ್ಷನ್ ಅಲ್ಲದೆ ಭಾವನೆಗಳು ಮತ್ತು ಹಾಸ್ಯ ಸನ್ನಿವೇಶಗಳಿಗೆ ಆನಂದ್, ಗಿರಿ, ಜಹಾಂಗೀರ್, ಸುನೇತ್ರಪಂಡಿತ್, ಸುಜಯ್ಶಾಸ್ತ್ರೀ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳಿಗೆ ರಘುದೀಕ್ಷಿತ್ ಸಂಗೀತ ಸಂಯೋಜಿಸುವ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಬೆಂಗಳೂರು, ಮೈಸೂರು, ಕೆಜಿಎಫ್, ಗೋವಾ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಛಾಯಾಗ್ರಾಹಕ ಜೈಆನಂದ್ಗೆ ೨೩ನೇ ಚಿತ್ರವಾಗಿದೆ. ಸಂಕಲನ ದೀಪು.ಎಸ್.ಕುಮಾರ್, ಸಾಹಸ ವಿನೋಧ್-ವಿಕ್ರಂಮೋರ್-ಡಾ.ರವಿವರ್ಮ, ಕಾಸ್ಟ್ಯೂಮ್ ಆರುಂಧತಿ-ಗಣೇಶ್ ನಿರ್ವಹಿಸಿದ್ದಾರೆ. ನಾಯಕನ ತಂದೆ ಬಿ.ಕೆ.ರಾಜಾರೆಡ್ಡಿ ಮತ್ತು ಎಸ್.ಪ್ರಸಾದ್ರೆಡ್ಡಿ ಜಂಟಿಯಾಗಿ ಆರೆಂಜ್ ಪಿಸೆಲ್ಸ್ ಫಿಲ್ಮ್ ಫ್ಯಾಕ್ಟರಿ ಮುಖಾಂತರ ನಿರ್ಮಾಣ ಮಾಡಿರುವ ಚಿತ್ರವು ಇದೇ ವರ್ಷದಲ್ಲಿ ಬಿಡುಗಡೆಯಾಗುವ ಸಾದ್ಯತೆ ಇದೆ. ಸಿನಿಮಾದ ಟ್ರೈಲರ್ನ್ನು ಶಿವರಾಜ್ಕುಮಾರ್ ಅನಾವರಣಗೊಳಿಸಿದ್ದನ್ನು ಮಾದ್ಯಮದವರಿಗೆ ತೋರಿಸಲಾಯಿತು.