Savarnadeerga Sandhi..Film Audio Rel.

Tuesday, October 01, 2019

92

ಬ್ದಕ್ಕೆ ಅದರದೇ ಆದ ಸಂಗೀತ ಇರುತ್ತದೆ – ಜಯಂತ್ ಕಾಯ್ಕಣಿ

       ಸದಭಿರುಚಿಯ ಸಾಹಿತಿ ಜಯಂತ್ ಕಾಯ್ಕಣಿ ಅವರ ಮಾತುಗಳನ್ನು ಕೇಳುವುದೇ ಚೆಂದ.  ‘ಸವರ್ಣ ಧೀರ್ಘ ಸಂದಿ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಲು ಅವರು ಆಗಮಿಸಿದ್ದರು. ನಂತರ ಮಾತನಾಡುತ್ತಾ  ಇದೊಂದು  ಸುಂದರ ಆವರಣ. ನಾವು ಮೊದಲ ಹಾಡು ಬರೆದಾಗ ಹುಟ್ಟಿದಂತ ಏಳೆ ಚೇತನಗಳು ಈಗ ವಯಸ್ಕರಾದ ಮೇಲೆ ಚಿತ್ರ ಮಾಡಿದ್ದಾರೆ.  ನಾವು ಅಲ್ಲೆ ಈಜುತ್ತಾ ಇದ್ದೇವೆ. ನಾನು ಯಾವತ್ತು ಹಾಡು ಬರೆದಿರಲಿಲ್ಲ. ಗೀತೆ ಬರೆಯುವ ಕಾಯಕಕ್ಕೆ ತಳ್ಳಿದವರು ಯೋಗರಾಜಭಟ್ಟರು. ನನ್ನ ಜೀವನದಲ್ಲಿ ಹೊಸ ಅಧ್ಯಾಯ, ಮಗ್ಗಲು, ಕಲೆ, ಕೌಶಲವನ್ನು  ಕಲಿಯುವಂತ ವಿಶ್ರಾಂತಿರಹಿತ ಕಲಸಕ್ಕೆ ಹಚ್ಚಿದವರು. ಇವರು ಆಗಮಿಸಿರುವುದು ಸಂತಸ ತಂದಿದೆ. 

ತಂಡದಲ್ಲಿ ಇರುವ ಬಾಂದವ್ಯ ಕಾಣುತ್ತದೆ. ವೀರೇಂದ್ರ ಕವಿ ಹೃದಯದ ನಿರ್ದೇಶಕ. ಭಟ್ಟರ ತರಹ ಅಪರೂಪದ ತಳಿ. ಮನೋಮೂರ್ತಿ ಅವರ ಮಾಧುರ್ಯ ಒಂದು ಕಡೆ ಇದ್ದರೆ, ಶಬ್ದಕ್ಕೆ ಅದರದೇ ಆದ ಸಂಗೀತ ಇರುತ್ತದೆ. ಎರಡು ಸೇರಿಕೊಂಡಂತೆ ಬರೆಯುವುದೆ ಸಾಹಿತ್ಯ. ಇಲ್ಲದಿದ್ದರೆ ಎರಡು ಕಡೆ ಹಾಳಾಗುತ್ತೆ, ಮನೋಮರ್ತಿ ನಾನು ತುಂಬ ಆಪ್ತರು. ಅವರದು  ನಿರಾಭರಣ ಮಾಧುರ್ಯ. ಅದಕ್ಕೆ ಯಾವ ಅಲಂಕಾರ ಬೇಡ. ಅವರ ಹಾಡಿನೊಳಗೆ ಆತ್ಮದ ಹಾಗೆ ಒಂದು ಏಳೆ ಇರುತ್ತದೆ. ಅದಕ್ಕೆ ಏನು ಸಿಂಗಾರ ಬೇಡ. ಅವರು ಇನ್ನು ಚುರುಕಾಗಿರುವುದೇ ದೊಡ್ಡ ಸಂಗತಿ. ಕನ್ನಡಿಗರು ಮಾತನಾಡುತ್ತಾರೆ.  ಚಿತ್ರ ನೋಡುವುದಿಲ್ಲ.  ಬೇರೆ ಭಾಷೆಗೆ ಡಬ್ಬಿಂಗ್ ಆಗುವ ತನಕ ಕಾಯುತ್ತಾರೆ. ಪ್ರೀತಿಸುವ ಹುಡುಗಿಗೆ ತರಾತುರಿಯಲ್ಲಿ ಐ ಲವ್ ಯು ಹೇಳುವಂತೆ ಅದೇ ಆತುರದಲ್ಲಿ ಚಿತ್ರ ನೋಡಿ. ಭಾಷೆಯ ಕುರಿತಾದ ದೊಡ್ಡ ವ್ಯಾಕರಣ, ಎಚ್ಚರ ಈ ಸಿನಿಮಾದಲ್ಲಿ ಇದೆ. ಪತ್ರಿಕೆಗಳನ್ನು ಹೆಚ್ಚು ಓದಿದರೆ ಪದಗಳು ಸಿಗುತ್ತದೆ. ಅದಕ್ಕಾಗಿ ಕನ್ನಡವನ್ನು ಓದೋಣ, ಚಿತ್ರಗಳನ್ನು ನೋಡೋಣ, ಕನ್ನಡದಲ್ಲಿ ಪ್ರೀತಿ,ಜಗಳವಾಡೋಣವೆಂದು ಅರ್ಥಪೂರ್ಣ ಮಾತಿಗೆ ವಿರಾಮ ಹಾಕಿದರು.

       ಇದಕ್ಕೂ ಮುನ್ನ ಮೈಕ್ ತೆಗೆದುಕೊಂಡ ಯೋಗರಾಜಭಟ್ಟರು ತಮ್ಮ ಮಾತಿನಲ್ಲಿ ಇದೊಂದು ದಿವ್ಯವಾದ ಕ್ಷಣ ಎನ್ನಬಹುದು. ಚಿತ್ರ್ರರಂಗಕ್ಕೆ ನನ್ನನ್ನು ಸೇರಿದಂತೆ ಪರಿಚಯ ಮಾಡಿಸಿದ   ಮಹನಿಯರ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ. ಮಾಧುರ್ಯ ತಾಯಿ ತರಹ. ಮಸಾಲೆ ಹಾಡಿಗೆ ರಾಜಪಟ್ಟ ನೀಡಿದಂತ ಪಟ್ಟ ಮನೋಮೂರ್ತಿಗೆ ಸಲ್ಲಬೇಕು. ಒಂಟಿತನ ಇದ್ದಾಗ ಇವರಿಬ್ಬರ ಹಾಡುಗಳನ್ನು ಕೇಳುತ್ತಾ ಸಮಯ ಕಳೆಯುತ್ತೇನೆ. ಕಾಯ್ಕಣಿ ಅವರ ಸಾಹಿತ್ಯದಲ್ಲಿ ಯೋಚನೆ ಮಾಡುವಂತ ಹಾಡುಗಳು ಇರುತ್ತದೆ.  ಒಂದು ಹಾಡಿನ ಹಿಂದೆ ೧೫೦ ಜನರು ಕೆಲಸ ಮಾಡುತ್ತಾರೆ. ಮನೋಮೂರ್ತಿರವರು ಕೆಲಸ ಮಾಡಿದವರನ್ನು ಪರಿಚಯಿಸುವುದು ಅವರ ದೊಡ್ಡ ಗುಣ. ಹೊಸಬರು ಸೇರಿಕೊಂಡು ಹೊಸ ರೀತಿಯ ಚಿತ್ರ ಮಾಡಿದ್ದಾರೆ. ಇಂತಹವರ ಚಿತ್ರಕ್ಕೆ ನಾವುಗಳು ಕೈ ಹಿಡಿದಾಗ ಮಾತ್ರ ಹತ್ತಾರು ಸಿನಿಮಾಗಳು ಹುಟ್ಟಿಕೊಳ್ಳುತ್ತದೆಂದು ಅಭಿಪ್ರಾಯಪಟ್ಟರು.

      ಏಳು ಹಾಡಿಗೆ ಸಂಗೀತ ಮತ್ತು ಚಿತ್ರಕ್ಕೆ ಪಾಲುದಾರರಾಗಿರುವ ಮನೋಮೂರ್ತಿ, ಕಥೆ, ನಿರ್ದೇಶನ, ಸಾಹಿತ್ಯ, ನಿರ್ಮಾಪಕ ಮತ್ತು ನಾಯಕ ವೀರೇಂದ್ರಶೆಟ್ಟಿ, ನಾಯಕಿ ಕೃಷ್ಣಾ, ಪಾಲುದಾರರಾದ ಲುಷಿಂಗ್ಟನ್ ಥಾಮಸ್, ಹೇಮಂತ್‌ಕುಮಾರ್ ಮಿತಭಾಷಿಗಳಾಗಿದ್ದರು. ನಾಯಕಿ ತಾಯಿ ಮಲ್ಲಿಕಾಭಟ್ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟಿತು.  ಚಿತ್ರವು ಇದೇ ಹದಿನೆಂಟರಂದು ರಾಜ್ಯದ್ಯಂತ ತೆರೆಕಾಣಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,