Gantu Moote.Film Press Meet.

Tuesday, October 01, 2019

123

ಗಂಟುಮೂಟೆಗೆ ಪ್ರಶಸ್ತಿಗಳ ಸುರಿಮಳೆ

           ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೇ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ತುಡಿಗಳ ಸಮ್ಮಿಲದಿಂದ ಕೂಡಿದ ಚಿತ್ರ ‘ಗಂಟುಮೂಟೆ’  ಪ್ರದರ್ಶನವಾದ ಕಡೆಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ೨೦೧೯ರ ನ್ಯೂಯಾರ್ಕ್ ಇಂಡಿಯನ್ ಫಿಲಿಂ ಫಿಸ್ಟಿವಲ್‌ದಲ್ಲಿ ಉತ್ತಮ ಚಿತ್ರಕತೆ ಪಡೆದುಕೊಂಡ ಮೊದಲ ಕನ್ನಡ ಸಿನಿಮಾವಾಗಿದೆ. ಕೆನಡಾ, ಆಸ್ಟ್ರೇಲಿಯಾ, ಯುಎಸ್ ಇಟಲಿ ಮುಂತಾದ ದೇಶದ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.  ೧೯೯೦ರ ಕಾಲಘಟ್ಟದಲ್ಲಿ ನಡೆಯುವ ಕತೆಯಲ್ಲಿ  ವಿದ್ಯಾಭ್ಯಾಸದ ಒತ್ತಡ, ಶಾಲೆಯ ವಾತವರಣ, ಅಂಕ ಪಡೆಯಲು ಸ್ಪರ್ಧೆ, ತರಲೆ, ಪಾರದರ್ಶಕ ರೀತಿಯ ಗಲಾಟೆ.  ಇವುಗಳ ನಡುವೆ ಕಾಡುವ ಮೊದಲ ಉತ್ಕಟ ಪ್ರೇಮ. ಇವೆಲ್ಲವು ಸಿನಿಮಾದಲ್ಲಿ ಸನ್ನಿವೇಶಗಳಾಗಿ ಮೂಡಿ ಬಂದಿದೆ.

         ಟೆಂಟ್ ಸಿನಿಮಾ ವಿದ್ಯಾರ್ಥಿ ತೀರ್ಥಹಳ್ಳಿ ಮೂಲದ ನಿಶ್ವಿತ್‌ಕೊರೋಡಿ, ಹಿರಿಯ ನಟ ಪ್ರಕಾಶ್‌ಬೆಳವಾಡಿ ಕಿರಿ ಪುತ್ರಿ ತೇಜುಬೆಳವಾಡಿ ವಿದ್ಯಾರ್ಥಿಗಳಾಗಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಹೊಸ ಅನುಭವ. ಉಳಿದಂತೆ ಭಾರ್ಗವ್‌ರಾಜು, ಸೂರ್ಯವಸಿಷ್ಟ, ಶರತ್‌ಗೌಡ, ಶ್ರೀರಂಗ, ಅರ್ಚನಾಶ್ಯಾಮ್, ಚಂದನ,  ನಮಿತ್ ನಟಿಸಿದ್ದಾರೆ.  ಐಟಿ ಉದ್ಯೋಗ ತ್ಯಜಿಸಿ, ಚಿತ್ರರಂಗದ ಮೇಲಿನ ಪ್ರಭಾವದಿಂದ ವಿದೇಶದಲ್ಲಿ ಇದರ ಕುರಿತಂತೆ ತರಭೇತಿ ಪಡೆದಿರುವ ರೂಪರಾವ್  ರಚನೆ, ನಿರ್ದೇಶನ ಅಲ್ಲದೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಸಂಗೀತ ಅಪ್ರಜಿತ್‌ಸ್ರಿಸ್, ಸಂಕಲನ ಪ್ರದೀಪ್‌ನಾಯಕ್, ಛಾಯಾಗ್ರಹಣ ಮತ್ತು ನಿರ್ಮಾಪಕ ಸಹದೇವ್‌ಕೆಲ್ವಾಡಿ ಅವರದಾಗಿದೆ. ಅಮೆಯುಕ್ತಿ ಸ್ಟುಡಿಯೋ ಮೂಲಕ ನಿರ್ಮಾಣವಾಗಿರುವ ಚಿತ್ರವು  ಮೈಸೂರು ಟಾಕೀಸು ಮುಖಾಂತರ ಅಕ್ಟೋಬರ್ ಹದಿನೆಂಟರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

 

 

Copyright@2018 Chitralahari | All Rights Reserved. Photo Journalist K.S. Mokshendra,