Bhinna.Film Show Press Meet.

Tuesday, October 01, 2019

91

ಡಿಜಿಟಲ್ ಮೂಲಕ ನೇರವಾಗಿ ಬಿಡುಗಡೆಯಾದ ಚಿತ್ರ

       ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ರೀಲ್ ಕಾಲದಿಂದ,  ಈಗ ಡಿಜಿಟಲ್ ಯುಗ ಬಂದಿರುವುದರಿಂದ ಎಲ್ಲವು ಅಂಗೈನಲ್ಲೆ ಸಿಗುತ್ತದೆ. ಬೇರೆ ಭಾಷೆಯ ಚಿತ್ರಗಳನ್ನು ಅಮೆಜಾನ್, ನೆಟ್‌ಫ್ಲಿಕ್ಸ್‌ನವರು ಖರೀದಿಸುತ್ತರುವಂತೆ, ಕನ್ನಡ ಸಿನಿಮಾಗಳು ಸೇರ್ಪಡೆಯಾಗುತ್ತಾ ಬಂದಿರುವುದು ಆರೋಗ್ಯಕರ  ಬೆಳವಣಿಗೆಯಾಗಿದೆ.  ಹೆಸರಾಂತ ಜೀ ವಾಹಿನಿ ಅವರ ಜಿ ೫ ಆನ್‌ಲೈನ್ ಸಂಸ್ಥೆಯು ೧೯೦ ದೇಶಗಳಲ್ಲಿ ತಮ್ಮದೆ ಆದ ವೀಕ್ಷಕರನ್ನು  ಸೆಳದುಕೊಂಡಿದೆ. ಅದರಿಂದಲೇ  ಹಿಂದಿ, ತಮಿಳು, ಮರಾಠಿ ತೆಲುಗು ಸೇರಿದಂತೆ ಹಲವು ಭಾಷೆಯ ಚಿತ್ರಗಳನ್ನು ಪ್ರಸಾರ ಮಾಡುತ್ತಿದೆ. ಈಗ ವಿನೂತನ ಕತೆ ಹೊಂದಿರುವ ಸೈಕಾಲಾಜಿಕಲ್ ಥ್ರಿಲ್ಲರ್  ‘ಭಿನ್ನ’ ಕನ್ನಡ ಚಿತ್ರವನ್ನು  ಜಾಲತಾಣದಲ್ಲಿ  ನೇರವಾಗಿ  ಪ್ರಸಾರ ಮಾಡುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಇದರಿಂದ ನಿರ್ಮಾಪಕರಿಗೆ  ವೇದಿಕೆ ಸಿಕ್ಕಂತಾಗಿ  ಚಿತ್ರಮಂದಿರದ ಮಾಲೀಕರಿಂದ ಆಗುವ  ಕಿರಿಕಿರಿಯಿಂದ ದೂರವಿರಬಹುದು. ಒಳ್ಳೆಯ ಅಂಶಗಳು ಇದ್ದರೆ ಯಾವುದೇ ಸ್ಟಾರ್‌ಡಮ್ ನೋಡದೆ ಚಿತ್ರವನ್ನು ತೆಗೆದುಕೊಳ್ಳುವುದಾಗಿ ಸಂಸ್ಥೆಯು ಹೇಳಿಕೊಂಡಿದೆ.

       ಸಿನಿಮಾ ಕುರಿತು ಹೇಳುವುದಾದರೆ ‘ಭಿನ್ನ’ ಶಬ್ದಕ್ಕೆ ವಿಭಿನ್ನ ಅರ್ಥವಿದೆ. ಅದರ ಜೊತೆಗೆ ಚೂರಾಗಿರುವ ಎಂಬ ಅರ್ಥವನ್ನು ನೀಡುತ್ತದೆ,.  ನಾಯಕಿ ಆಗಬೇಕು ಎಂದು ಕನಸು ಕಂಡಿರುವ ಹುಡುಗಿಯೊಬ್ಬಳ ಜೀವನ ನುಚ್ಚು ನೂರಾಗಿರುತ್ತದೆ. ಅದು ಏಕೆ,ಹೇಗೆ ಅವಳು ಏಕೆ ಹಾಗಾಗಿರುತ್ತಾಳೆ. ಆಕೆ ನಟಿಸಲಿರುವ  ಸ್ಕ್ರಿಪ್ಟ್‌ನ್ನು  ತೆಗೆದುಕೊಂಡು ನಗರದಿಂದ ಆಚೆ ಹೋಗಿ ಏಕಾಂಗಿಯಾಗಿ ಕೂತು ಓದಲು ಆರಂಭಿಸುತ್ತಾಳೆ. ನಿಜ ಜೀವನದ ಜೊತೆಗೆ ಅದರಲ್ಲಿರುವ ಕತೆ ಮತ್ತೋಂದು ಟ್ರ್ಯಾಕ್‌ನಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.  ಕ್ಲೈಮಾಕ್ಸ್‌ದಲ್ಲಿ ಚಿತ್ರಕತೆ ತನಗೂ ಇರುವ ಸಂಬಂದವನ್ನು ಹೇಳುತ್ತಾ ಹೋಗುವುದೇ ಸಿನಿಮಾದ  ಸಾರಾಂಶವಾಗಿದೆ.

       ರಚನೆ,ಚಿತ್ರಕತೆ, ಸಂಕಲನ ಮತ್ತು  ನಿರ್ದೇಶನ  ಆದರ್ಶ್‌ಈಶ್ವರಪ್ಪ, ಸಂಗೀತ ಜೆಸ್ಸಿಕ್ಲಿಂಟನ್, ಛಾಯಾಗ್ರಹಣ ಅಂಡ್ರೂಆಯಿಲೋ, ಧ್ವನಿ ನಿತೀನ್‌ಲುಕೋಸ್ ಅವರದಾಗಿದೆ. ತಾರಗಣದಲ್ಲಿ ಸಿದ್ಧಾರ್ಥ, ಪಾಯಲ್‌ರಾಧಕೃಷ್ಣ, ಶಶಾಂಕ್‌ಪುರುಷೋತ್ತಮ್ ಮತ್ತು  ಯುಟರ್ನ್ ನಿರ್ದೇಶಕರ ಪತ್ನಿ ಸೌಮ್ಯ ಅಭಿನಯಿಸಿದ್ದಾರೆ. ಚಿತ್ರಕ್ಕೆ ಯತೀಶ್‌ವೆಂಕಟೇಶ್ ಹಾಗೂ ಪರ್ಪಲ್ ಆರೋ ಫಿಲ್ಮ್ ಬಂಡವಾಳ ಹೂಡಿದ್ದಾರೆ. ಮೊನ್ನೆ ನಡೆದ ವಿಶೇಷ ಪ್ರದರ್ಶನಕ್ಕೆ ಸಿನಿಪಂಡಿತರು, ಕಲಾವಿದರು ಮತ್ತು ಮಾದ್ಯಮದವರು ಸಾಕ್ಷಿಯಾಗಿದ್ದರು.  

 

Copyright@2018 Chitralahari | All Rights Reserved. Photo Journalist K.S. Mokshendra,