Sree.Film Muhurth Press Meet.

Wednesday, October 02, 2019

229

ಡಾ.ರಾಜ್‌ಕುಮಾರ್  ಆದರ್ಶಗಳನ್ನು   ತೋರಿಸುವ  ಚಿತ್ರ

        ಡಾ.ರಾಜ್‌ಕುಮಾರ್ ಚಿತ್ರಗಳು ಹಲವರನ್ನು ಬದಲಾವಣೆ ಮಾಡಿತ್ತು. ಹಾಗೆಯೇ ಅವರ ಆದರ್ಶಗಳು ಇತರರಿಗೆ ಮಾದರಿಯಾಗಿದೆ. ಹೊಸಬರ ‘ಶ್ರೀ’ ಎನ್ನುವ ಚಿತ್ರದಲ್ಲಿ ಅಪ್ಪ ಮಗನ ಬಾಂದವ್ಯವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ತಂದೆಯಾಗಿ ರಾಘವೇಂದ್ರರಾಜ್‌ಕುಮಾರ್, ಮಗನಾಗಿ ಚಂದೂಗೌಡ ನಾಯಕ. ರಾಘಣ್ಣ ಹೇಳುವಂತೆ ಅಪ್ಪಾಜಿ ನಡೆದು ಬಂದ ದಾರಿ, ರೀತಿ, ನೀತಿ.  ಅವರ ತಿಳುವಳಿಕೆ, ನಡವಳಿಕೆ  ಜನರ ಮೇಲೆ ಹೇಗೆ ಪರಿಣಾಮ ಬೀರಿತು. ಕಿರಿ ಮಗನ ಹೆಸರು ಗುರು, ಸೊಸೆ ಶ್ರೀದೇವಿ. ಎರಡು ಹೆಸರುಗಳು ಚಿತ್ರದಲ್ಲಿ ಇರುವುದರಿಂದ ಮನಸ್ಸಿಗೆ ಹತ್ತಿರವಾದ ಸಿನಿಮಾವೆಂದು ಬಣ್ಣಸಿಕೊಳ್ಳುತ್ತಾರೆ.  ಸಿದ್ದಗಂಗೆ  ಮಠದಲ್ಲಿ ಓದಿದ ಹುಡುಗನೊಬ್ಬ ಮುಂದೆ ಸರ್ಕಾರಿ  ಉನ್ನತ ಹುದ್ದೆಯನ್ನು ಅಲಂಕರಿಸಿ ಸಮಾಜಕ್ಕೆ ಹೇಗೆ ಉಪಕಾರಿಯಾಗುತ್ತಾನೆಂದು  ಹೇಳಲಾಗಿದೆ.  ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಕೆಲವೊಂದು ತುಣುಕುಗಳನ್ನು ಸನ್ನಿವೇಶದಲ್ಲಿ ಬಳಸುತ್ತಿರುವುದರಿಂದ ಸ್ವಾಮಿಗಳು ನಮ್ಮ ಕಣ್ಣ ಮುಂದೆ ಇದ್ದಂತೆ ಆಗುತ್ತದಂತೆ. ಶುಭಕಾರ್ಯಕ್ಕೆ  ಶೀರ್ಷಿಕೆ ಬರೆದು  ಓಂಕಾರ ಹಾಕುತ್ತಾರೆ. ಅದಕ್ಕಾಗಿ ತಸ್ಮೈ ಶ್ರೀ ಗುರುವೇ ನಮ:ವೆಂದು ಅಡಿಬರಹದಲ್ಲಿ ಹೇಳಿಕೊಂಡಿದ್ದಾರೆ.  ತುಮಕೂರು, ಬೆಂಗಳೂರು ಕಡೆಗಳಲ್ಲಿ ೯೦ ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

        ಅಧಿಕಾರಿಯು ವರ್ಗಾವಣೆಗೊಂಡು  ಹಳ್ಳಿಗೆ ಹೋದಾಗ ಅಲ್ಲಿ ಪ್ರೀತಿಗೆ ಬೀಳುವ ಅನುಪಸತೀಶ್ ನಾಯಕಿ. ಉಳಿದಂತೆ ಹೊನ್ನವಳ್ಳಿಕೃಷ್ಣ, ಡಿಂಗ್ರಿನಾಗರಾಜ್, ಶೋಭರಾಜ್, ಬಾಲನಟ ನೀಲ್ ಮುಂತಾದವರು ಅಭಿನಯಿಸುತ್ತಿದ್ದಾರೆ.  ಎಂಟು ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಅನುಭವ, ನಂತರ ನಿರೂಪಕಿಯಾಗಿದ್ದ ಉಷಾ ಉರುಫ್ ಆಧಿತಿಮಹದೇವ ಚೂಚ್ಚಲಬಾರಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ.  ಮೂರು ಹಾಡುಗಳಿಗೆ ಸಂಗೀತ ಒದಗಿಸುತ್ತಿರುವುದು ಡ್ಯಾನಿಯಲ್, ಕತೆ,ಚಿತ್ರಕತೆ ಮತ್ತು  ಛಾಯಾಗ್ರಹಣ ಪರಮೇಶ್, ಸಂಕಲನ ಆರ್ಯನ್‌ಮುತ್ತುರಾಜು ಅವರದಾಗಿದೆ. ಡಾ.ವಿಷ್ಣುವರ್ಧನ್ ಅಭಿನಯದ ‘ಸ್ಕೂಲ್‌ಮಾಸ್ಟರ್’ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದುಕೊಂಡು ಸುಮಾರು ೨೫ ಚಿತ್ರಗಳನ್ನು ಬಿಡುಗಡೆ ಮಾಡಿರುವ ಆರ್.ಸ್ವಾಧೀನ್‌ಕುಮಾರ್  ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ.  ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭಕ್ಕೆ  ಮುರಳಿಧರಹಾಲಪ್ಪ ಕ್ಯಾಮಾರ ಆನ್ ಮಾಡಿದರೆ, ಎ.ಪಿ.ಅರ್ಜುನ್ ಮೊದಲ ದೃಶ್ಯಕ್ಕೆ  ಕ್ಲಾಪ್ ಮಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಿನಿಪಂಡಿತರು, ಮಹೇಶ್‌ಕುಮಾರ್, ಭರಾಟೆ ನಿರ್ಮಾಪಕ ಸುಪ್ರಿತ್, ನಿರ್ದೇಶಕ  ಚೇತನ್‌ಕುಮಾರ್ ಹಾಜರಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,