College Kumaari.Film Press Meet.

Monday, September 30, 2019

106

ಪ್ರೀತಿಯ ಮೌಲ್ಯ ಸಾರುವ ಕಾಲೇಜು ಕುಮಾರಿ

        ಮಹಾಭಾರತ-ರಾಮಾಯಣ ಒಂದು ಹೆಣ್ಣಿಂದ ಅಂತ್ಯವಾಯಿತು. ಕಾಲ ಕಾಲಕ್ಕೂ ಹೆಣ್ಣು ಎಂಬ ಶಕ್ತಿಯಿಂದ ಗಂಡು ಜಾತಿ ಪ್ರಪಾತಕ್ಕೆ ಬೀಳುತ್ತಿದ್ದಾರೆ. ಹಾಗಂತ ಇವರಿಂದ ಕೇವಲ ದುರಂತಗಳು ನಡೆಯುವುದಿಲ್ಲ, ಸಾತ್ವಿಕ ಕೆಲಸಗಳು ಆಗುತ್ತದೆಂದು ಹೇಳುವ ‘ಕಾಲೇಜು ಕುಮಾರಿ’ ಚಿತ್ರವೊಂದು ಸಿದ್ದಗೊಂಡಿದೆ. ಮೂರನೆ ಬಾರಿ ನಿರ್ದೇಶಕ ರಾಗಿರುವ ಶಂಕರ್‌ಅರುಣ್ ಹೇಳುವಂತೆ ಸಿನಿಮಾದಲ್ಲಿ ಕಾಮಿಡಿ, ಡಬ್ಬಲ್ ಮೀನಿಂಗ್ ಸಂಭಾಷಣೆ, ಸಾಹಸ ಎಲ್ಲವು ಪೂರ್ಣ ಪ್ರಮಾಣದ ಮನರಂಜನೆಯಿಂದ ಕೂಡಿದೆ ಅಂತ ಬಣ್ಣಸಿಕೊಳ್ಳುತ್ತಾರೆ. ಜೊತೆಗೆ ತಂದೆ-ತಾಯಿ ಹೆಣ್ಣುಮಕ್ಕಳನ್ನು ಯಾವ ರೀತಿ ಬೆಳೆಸ್ತಾರೆ. ಅವರ ದೃಷ್ಟಿಕೋನದಲ್ಲಿ ಆಕೆ ಚಿಕ್ಕವಳು, ಆದರೆ ಸಮಾಜಕ್ಕೆ ದೊಡ್ಡವಳಾಗಿರುತ್ತಾಳೆ. ಹೆಣ್ಣಿನಿಂದ ಯಶಸ್ಸು, ಸೋಲು ಎರಡು ಇದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಇದೆ. ಅದರಿಂದ ಕತೆಯಲ್ಲಿ ಎರಡನ್ನು ಸರಿಸಮನಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮತ್ತು ಒಂದು ಪ್ರೀತಿಗೆ ಮತ್ತೋಬ್ಬ ಪ್ರವೇಶ ಮಾಡಿದಾಗ ಏನಾಗುತ್ತದೆ.  ಕುಡಿತ ಕಿಕ್ ಕೊಡುತ್ತದೆ. ಹುಡುಗೀರು ಡ್ಯಾಶ್ ಕೊಡುತ್ತಾರೆಂದು ಹೇಳಲಾಗಿದೆ. ಅವರವರ ಭಾವಕ್ಕೆ ಸಕರಾತ್ಮಕ, ನಕರಾತ್ಮಕವಾದರೂ ತೆಗೆದುಕೊಳ್ಳಬಹುದೆಂದು ನಿರ್ದೇಶಕರು ಮಾದ್ಯಮದ ಪ್ರಶ್ನೆಗೆ ಉತ್ತರವಾಗುತ್ತಾರೆ.

       ಯಾವುದೇ ಹುಡುಗರು ಹುಡುಗೀರ ಪ್ರೀತಿಗೆ ಬೆಲೆ ಕಟ್ಟೋಕೆ ಸಾಧ್ಯವಿಲ್ಲ. ಕಾಲೇಜಿನಲ್ಲಿ ಹುಡುಗೀರು ಇಬ್ಬರು ಹುಡುಗರನ್ನು ಬಳಸಿಕೊಂಡು ಯಾವ ರೀತಿ ಮೋಸಮಾಡುತ್ತಾರೆ. ಇಂತಹ ಹುಡುಗಿಯುರ ಹಿಂದೆ ಹೋದರೆ ಏನಾಗುತ್ತೀರಾ. ಇವರೊಂದಿಗೆ ಎಚ್ಚರಿಕೆಯಿಂದ ಹೆಜ್ಜೆ ಹಾಕಿ ಎಂಬುದನ್ನು ಸಂದೇಶದ ಮೂಲಕ ಹೇಳಲಾಗಿದೆ. ನೈಜ ಘಟನೆಗಳನ್ನು ತೆಗೆದುಕೊಂಡು, ಅದಕ್ಕೆ ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಚರಣ್‌ರಾಜ್, ಜೀವಾ ಮತ್ತು ವಿಕ್ರಮ್‌ಕಾರ್ತಿಕ್ ನಾಯಕರುಗಳು. ರುಚಿತ ನಾಯಕಿ. ಈಕೆ ಓದುತ್ತಿರುವ ಕಾಲೇಜಿನಲ್ಲಿ ನಡೆದ ಕೆಲವೊಂದು ಘಟನೆ ನೋಡಿದ್ದನ್ನು  ನಿರ್ದೇಶಕರಿಗೆ ತಿಳಿಸಿದ್ದಾರೆ. ಅದನ್ನೆ ಚಿತ್ರಕತೆಯಾಗಿ ಮಾರ್ಪಡಿಸಲಾಗಿದೆ. ಹಾಡುಗಳಿಗೆ ಅವಶ್ಯಕತೆ ಇರುವುದಿಲ್ಲ. ಸಂಗೀತ ಉತ್ತಮ್‌ರಾಜ್, ಛಾಯಾಗ್ರಹಣ ವಿಘ್ನೇಶ್, ಸಂಕಲನ ಸುರೇಶ್ ಅವರದಾಗಿದೆ. ಹಿಂದಿನ ಎರಡು ಸಿನಿಮಾಗಳಲ್ಲಿ ನಷ್ಟ ಅನುಭವಿಸಿದ್ದ ಶಂಕರ್‌ಅರುಣ್ ಈ ಬಾರಿ ಗೆಲುವು ಪಡೆಯಲೇ ಬೇಕಂಬ ಅಚಲ ನಿರ್ಧಾರದಿಂದ  ಸೋದರ ರಾಕಿ, ಗೆಳಯ ಕುಮಾರಸ್ವಾಮಿ ಅವರನ್ನು ಸೇರಿಸಿಕೊಂಡು  ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,