Lighthaagi Lovehagidhe.Film Audio Rel.

Monday, September 30, 2019

85

ಉತ್ತರ  ಕರ್ನಾಟಕದವರ  ಲೈಟಾಗಿ  ಲವ್ವಾಗಿದೆ

       ಇತ್ತೀಚಗೆ ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು  ಪ್ರತಿಭೆಗಳು ಹೊರಬರುತ್ತಿದ್ದಾರೆ.  ಈಗ ‘ಲೈಟಾಗಿ ಲವ್ವಾಗಿದೆ’ ಚಿತ್ರವು  ಸಂಪೂರ್ಣ ಆ ಭಾಗದವರಿಂದ ಸಿದ್ದಗೊಂಡಿದೆ.  ಕ್ಯಾಸೆಟ್ ಇರುವ ಕಾಲದಲ್ಲಿ ಜನಪದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದ ಗುರುರಾಜ ಗದಾಡಿ ಬದುಕಿಗಾಗಿ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಈಗ ಸಿನಿಮಾಕ್ಕೆ ಕತೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಮತ್ತು ಪಾಲುದಾರರು.  ಹಾಡುಗಳಿಗೆ ತಾನು ಸಾಹಿತ್ಯ ರಚಿಸದೆ ಇತರೆ ಹೊಸ ಪ್ರತಿಭೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.  ಪ್ರತಿಯೊಬ್ಬರ ಬದುಕಿನಲ್ಲಿ ಲೈಟಾಗಿ ಲವ್ ಆಗಿರುತ್ತದೆ. ಅದನ್ನು ಮರೆಯಲಿಕ್ಕೆ  ಸಾದ್ಯವಿಲ್ಲ. ಪ್ರೀತಿ ಮಾಡಿದರೆ ಮೋಸ ಮಾಡೋದಲ್ಲ. ಅದನ್ನು ನಿಯತ್ತಾಗಿ ಮಾಡಬೇಕೆಂದು ಹೇಳಲಾಗಿದೆ. ಶೇಕಡ ೯೦ರಷ್ಟು ಚಿತ್ರೀಕರಣವನ್ನು ಬೆಳಗಾಂ,ಕೊಪ್ಪಳ ಉಳಿದುದನ್ನು ಬೆಂಗಳೂರು, ಹಾಸನ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ ಸೆರೆಹಿಡಿಯಲಾಗಿದೆ. ಸಂಜಯಕುಮಾರ್ ಮತ್ತು ಕೆಜಿಎಫ್ ಖ್ಯಾತಿ ಕಿನ್ನಾಳರಾಜ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಆಕಾಶ್‌ಪರ್ವ ಸಂಗೀತ ಸಂಯೋಜಿಸಿದ್ದಾರೆ.

       ಸರಿಗಮಪ ಸೀಸನ್ ಹನ್ನೊಂದರ ವಿಜೇತ ಚನ್ನಪ್ಪಹುದ್ದಾರ ಗೋಕಾಕ್ ಹುಡುಗನಾಗಿ ನಾಯಕ. ಕಿರುತೆರೆಯ ದಿವ್ಯವಾಗುಕರ ನಾಯಕಿಯಾಗಿ ಮೊದಲ ಅನುಭವ. ಶ್ವೇತಾಧಾರವಾಡ ಉಪನಾಯಕಿ. ಸಚ್ಚಿನ್‌ತಿಮ್ಮಯ್ಯ ಉಪನಾಯಕ. ತಾರಗಣದಲ್ಲಿ ಪ್ರದೀಪ್‌ತಿಪಟೂರು, ಅನ್ವಿತಾ, ಯಲ್ಲೇಶ್‌ಕುಮಾರ್, ಚೈತ್ರಾಹಿರೇಮಠ, ರತಿಕಾಗೋಕಾಕ್, ಅಂಕಿತಾ, ಸೋನಿ ಮುಂತಾದವರು ನಟಿಸಿದ್ದಾರೆ. ಆಯರ್‌ಸ್ವಾಮಿ ಸಂಕಲನ ಮಾಡುವ ಜೊತೆಗೆ ಸಂಭಾಷಣೆಗೆ ಪದಗಳನ್ನು ಪೋಣಿಸಿದ್ದಾರೆ. ಛಾಯಾಗ್ರಹಣ ಶಿವಪುತ್ರ-ವಿನೋಧ, ನೃತ್ಯ ಪವನ್-ನಾಗರಾಜ್, ಸಾಹಸ ರಾಜುಕೊಟ್ಯಾನ್ ಅವರದಾಗಿದೆ.  ನಾರ್ತ್ ಕರ್ನಾಟಕ ಜನರನ್ನು ಇಷ್ಟಪಡುವ ಲಹರಿವೇಲು  ಹಾಡುಗಳ ಹಕ್ಕನ್ನು ಖರೀದಿಸಿದ್ದ್ದಾರೆ. ಇವರು ಹೊಸಬರಿಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ತಾನೇಕೆ ಇದನ್ನು ಮಾಡಬಾರದೆಂದು ಯೋಚಿಸಿದ ರಾಜಕುಮಾರ ಖ್ಯಾತಿಯ ನಿರ್ದೇಶಕ ಸಂತೋಷ್‌ಆನಂದ್‌ರಾಮ್ ಆಡಿಯೋ ಸಿಡಿಯನ್ಜು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಎನ್.ಆರ್.ರಜಪೂತ, ಕಿಶೋರ್‌ಭಟ್, ಶಫೀಕ್‌ಸನದಿ ಇವರುಗಳು ಜಂಟಿಯಾಗಿ ಪ್ರಜ್ವಲ್ ಸಿನಿ ಕ್ರಿಯೇಶನ್ಸ್ ಮುಖಾಂತರ ಸಿನಿಮಾ ಕೃಷಿಗೆ ಬಂಡವಾಳ ಹೂಡಿದ್ದಾರೆ.  ಸದ್ಯದಲ್ಲೆ ಸೆನ್ಸಾರ್‌ಗೆ ಹೋಗಲಿರುವ ಚಿತ್ರವು ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,