Kiruminkanaja.Film Press Meet.

Tuesday, November 26, 2019

94

ಪೆನ್ ಡ್ರೈವ್  ಕನ್ನಡದಲ್ಲಿ ಕಿರು  ಮಿನ್ಕಣಜ

        ಕಿರು ಅನ್ನುವದಕ್ಕೆ ಅರ್ಥ ಎಲ್ಲರಿಗೂ ತಿಳಿದಿದೆ. ಆದರೆ ಮಿನ್ಕಣಜ ಪದಕ್ಕೆ ತಾತ್ಪರ್ಯ  ಸಿಗುವುದಿಲ್ಲ. ಇವರೆಡು ಸೇರಿಕೊಂಡಿರುವ ‘ಕಿರು ಮನ್ಕಣಜ’ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಶೀರ್ಷಿಕೆ ಅರ್ಥ ವಸ್ತುವಿನ ಹೆಸರು ಆಗುತ್ತದೆ. ಆಂಗ್ಲ ಭಾಷೆಯಲ್ಲಿ ಪೆನ್ ಡ್ರೈವ್ ಎನ್ನುತ್ರಾರೆ. ಮೀನು ಚಿಕ್ಕದಾಗಿದ್ದರೂ ಅದರ ಹೊಟ್ಟೆ ಒಳಗೆ ಎಷ್ಟು ಮೊಟ್ಟೆಗಳು ಇರುತ್ತದೆಂದು ಯಾರು ಅಂದಾಜು ಮಾಡಲಿಕ್ಕೆ ಆಗುವುದಿಲ್ಲ. ಅದೇ ರೀತಿ ಪೆನ್ ಡ್ರೈವ್ ಒಬ್ಬೋಬ್ಬರ ಜೀವನದಲ್ಲಿ ಇರುತ್ತದೆ. ಅದಕ್ಕೆ ಪುರಾವೆಗಳು ಏನು ಬೇಕಾದರೂ ಇರಬಹುದು. ಪ್ರತಿಯೊಬ್ಬರಲ್ಲಿ ಅದು ಆಳವಾಗಿ ತುಂಬಿರುತ್ತದೆ. ಇದೇ ರೀತಿ ಸನ್ನಿವೇಶಗಳು ದಾಖಲಿಸುತ್ತಾ ಹೋಗುತ್ತದೆ. ಒಂದು ವಸ್ತುವಿನ ಮೇಲೆ ಕೇಂದ್ರಿಕೃತಗೊಂಡು, ಅಪರಾಧಗಳು ಆಗುತ್ತಾ ಹೋಗುತ್ತದೆ.  ಕ್ಲೈಮಾಕ್ಸ್‌ದಲ್ಲಿ ಇದನ್ನು ಇಡಲು ಕಾರಣವನ್ನು ಹೇಳಲಾಗಿದೆ. ಮರ್ಡರ್ ಮಿಸ್ಟರ್ ಜೊತೆಗೆ ಪ್ರೀತಿ, ಗೆಳೆತನ, ಆಕ್ಷನ್ ಮತ್ತು  ಭಾವನೆಗಳು ತುಂಬಿರುವ ಸಂಪೂರ್ಣ ಮನರಂಜನೆ ಚಿತ್ರವಾಗಿದೆ.

       ಸಹ ಕಲಾವಿದನಾಗಿ ಗುರುತಿಸಿಕೊಂಡಿದ್ದ ರವಿಚಂದ್ರ ನಾಯಕನಾಗಿ ಬಡ್ತಿ ಹೊಂದಿದ್ದಾರೆ. ರಿಯಾಲಿಟಿ ಷೋ ಖ್ಯಾತಿಯ ಅರ್ಜುನ್‌ರಮೇಶ್ ಪೋಲೀಸ್ ಇನ್ಸೆಪೆಕ್ಟರ್, ವರ್ಷಿತ ನಾಯಕಿ. ಖಳನಾಯಕನಾಗಿ ಜೀವನ್‌ನೀನಾಸಂ ಇವರೊಂದಿಗೆ  ಶ್ರೀಧರನಾಯಕ್, ಹರೀಶ್ ಮುಂತಾದವರು ನಟಿಸಿದ್ದಾರೆ.    ಮಂಜು.ಎಂ ನಿರ್ದೇಶಕನಾಗಿ ಪ್ರಥಮ ಅನುಭವ. ಐದು ಹಾಡುಗಳಿಗೆ ಧ್ರುವರಾಜ್-ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ.  ರಚನೆ ಗೋಪಾಲ್‌ಮಹರಾಜ್,  ಛಾಯಾಗ್ರಹಣ ಸುರೇಶ್‌ಬಾಬು, ಸಂಕಲನ ಸುಪ್ರಿತ್, ಸಂಭಾಷಣೆ ಹರ್ಷ, ನೃತ್ಯ ಭೂಷಣ್-ಮಂಜು, ಸಾಹಸ ಕೌರವವೆಂಕಟೇಶ್ ಅವರದಾಗಿದೆ. ಮಂಡ್ಯಾ, ಪಾಂಡವಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಜನಾರ್ಧನ್‌ದಾಸುಡಿ ನಿರ್ಮಾಣ ಮಾಡಿರುವ ಚಿತ್ರವು ವಿತರಕ ವೆಂಕಟ್ ಮುಖಾಂತರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಅಪ್ಪಳಿಸಲಿದೆ.

      

 

Copyright@2018 Chitralahari | All Rights Reserved. Photo Journalist K.S. Mokshendra,