Brahmachari.Film Rel On 29th Nove 2019.

Tuesday, November 26, 2019

69

ಬ್ರಹ್ಮಚಾರಿ ಹೊಸತನ, ಹೊಸ ವಿಷಯಗಳು

          ಹಾಸ್ಯ ಚಿತ್ರ ‘ಬ್ಯಹ್ಮಚಾರಿ’ ಚಿತ್ರದಲ್ಲಿ ಹಲವು ಹೊಸತನದ ವಿಷಯಗಳು ತುಂಬಿಕೊಂಡಿದೆ.  ಉದಯ್.ಕೆ.ಮೆಹ್ತಾ  ದಶಕದ ಅನುಭವದಲ್ಲಿ  ಎಂಟನೇ ನಿರ್ಮಾಣದ ಚಿತ್ರಕ್ಕೆ ಕಾಶಿನಾಥ್ ಚಿತ್ರಗಳ ಪ್ರೇರಣೆಯಿಂದ ಕತೆ ಬರೆದಿದ್ದಾರೆ. ಮೊದಲಬಾರಿ ಕರ್ನಾಟಕದಾದ್ಯಂತ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋದವರು ವಿತರಣೆ ಮಾಡುತ್ತಿದ್ದು, ನಿರ್ಮಾಪಕರು ಲಾಭದಲ್ಲಿ ಇದ್ದಾರೆ.  ಭರ್ಜರಿ ಚೇತನ್‌ಕುಮಾರ್ ಸಾಹಿತ್ಯ, ಧರ್ಮವಿಶ್ ಸಂಗೀತದ ‘ಹಿಡ್‌ಕೋ ಹಿಡ್‌ಕೋ’ ಹಾಡನ್ನು ಹತ್ತು ಲಕ್ಷ ಜನ ವೀಕ್ಷಿಸಿದ್ದಾರೆ. ಸೆನ್ಸಾರ್‌ನಿಂದ ಯಾವುದೇ ದೃಶ್ಯ ಮ್ಯೂಟ್ ಮಾಡದೆ, ಆಕ್ಷೇಪಿಸದೆ ಶುದ್ದ ಯುಎ ಪ್ರಮಾಣಪತ್ರ ಪಡೆದುಕೊಂಡಿದೆ. ಪಾತ್ರಧಾರಿಗಳು ನಗದೇ ಇದ್ದರೂ ನೋಡುಗರು ಹಲ್ಲು ತೋರಿಸುವುದು ಖಚಿತ. ಸೂಕ್ಷ ವಿಚಾರಗಳನ್ನು ಕ್ಲಾಸಿಕಲ್,ರೋಮಾಂಟಿಕ್, ಕಾಮಿಡಿಯಾಗಿ ತೋರಿಸಲಾಗಿದೆ. ಭಾರತೀಯ ಚಿತ್ರರಂಗದಲ್ಲಿ ಮೊದಲು ಎನ್ನುವಂತೆ ನಾಯಕ ನೀನಾಸಂ ಸತೀಶ್ ಪರಿಚಯವನ್ನು ವಿಭಿನ್ನವಾಗಿದೆ. ಬದುಕಿನ ಮಹತ್ವದ ವಿಷಯದಲ್ಲಿ ಎಡವಿದರೆ, ಜೀವನವೆಲ್ಲ ತೊಂದರೆಯಲ್ಲಿ ನರಳಬೇಕಾಗುತ್ತದೆ. ಆ ರೀತಿ ಆಗದಂತೆ ಎಚ್ಚರ ವಹಿಸುವುದು. ಕಲಿಕೆ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು  ಸಂದೇಶದ ಮೂಲಕ ಹೇಳಲಾಗಿದೆ. ನಿರ್ಮಾಪಕರ ಹಿಂದಿನ ಸಿನಿಮಾ ‘ಲವ್ ಇನ್ ಮಂಡ್ಯಾ’ ೨೦೧೪ರಲ್ಲಿ ನವೆಂಬರ್ ೨೮ರಂದು ತೆರೆಕಂಡು ಯಶಸ್ವಿಯಾಗಿತ್ತು. ಅದೇ ದಿನದಂದು ಬ್ರಹ್ಮಚಾರಿ ಬಿಡುಗಡೆಯಾಗುತ್ತಿರುವುದು ಕಾಕತಾಳೀಯವಾಗಿದೆ.

         ಏನು ತಪ್ಪು ಮಾಡದೆ ಇದ್ದವನಿಗೆ ಕಷ್ಟಗಳು ಎದುರಾಗುತ್ತವೆ. ಪ್ರಸಕ್ತ ಸಮಾಜದಲ್ಲಿ ಹಲವರಿಗೆ ವೈಯಕ್ತಿಕ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಮುಜುಗರ ಅನಿಸುತ್ತದೆ. ಇದರಿಂದ ಅಂತರಾಳದಲ್ಲಿ ವೇದನೆ ಅನುಭವಿಸುತ್ತಿರುತ್ತಾರೆ. ಇವುಗಳ ಪರಿಹಾರಕ್ಕೆ ಹುಡುಕಿಕೊಂಡು ಹೋಗುವಾಗ ಬೇರೊಂದು ವಿಷಯದ ಪಯಣವು ತೆರೆದುಕೊಳ್ಳುವುದೇ ಒನ್ ಲೈನ್ ಸ್ಟೋರಿಯಾಗದೆ. ಹಾಸ್ಯ ಸಿನಿಮಾದಲ್ಲಿ ನಟಿಸಿರುವ ನಾಯಕಿ ಅದಿತಿಪ್ರಭುದೇವ ಅವರಿಗೆ ಹೊಸ ಅನುಭವ. ಉಳಿದಂತೆ  ಗೆಳಯರುಗಳಾಗಿ ಶಿವರಾಜ್.ಕೆ.ಆರ್.ಪೇಟೆ, ಅಶೋಕ್, ಸರ್ಕಾರಿ ನೌಕರನಾಗಿ ಅಚ್ಯುತಕುಮಾರ್,  ಸೈಕಲಾಜಿ ವೈದ್ಯರಾಗಿ  ದತ್ತಣ್ಣ  ಇವರೊಂದಿಗೆ ಪದ್ಮಜರಾವ್ ನಟನೆ ಇದೆ. ಬಾಂಬೆ ಮಿಠಾಯಿ, ಡಬ್ಬಲ್ ಇಂಜಿನ್ ನಿರ್ದೇಶನ ಮಾಡಿರುವ ಚಂದ್ರಮೋಹನ್ ಆಕ್ಷನ್ ಕಟ್ ಹೇಳಿದ್ದಾರೆ.  ಮೂರು ಹಾಡುಗಳು ಇರಲಿದೆ.  ಸಂಕಲನ ಅರ್ಜುನ್‌ಕಿಟ್ಟಿ, ನೃತ್ಯ ಮುರಳಿ, ಕಲೆ ಹೊಸ್ಮನೆಮೂರ್ತಿ-ಪ್ರಕಾಶ್ ಅವರದಾಗಿದೆ. ಇದೇ ಶುಕ್ರವಾರದಂದು ಇನ್ನೂರಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಿನಿಮಾವು ಅಲಂಕರಿಸುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,