Avane Srimannarayana.Film Trailer Launch.

Thursday, November 28, 2019

104

ನಾರಾಯಣ ಲುಕ್  ನೋಡಿದವರಿಗೆ  ಕಿಕ್

        ಅಂತೂ ಕೊನೆಗೂ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಂಡಿರುವ ಮೂರು ನಿಮಿಷ ಮೂವತ್ತು ಸೆಕೆಂಡ್ ತುಣುಕುಗಳು ಶಂಕರ್‌ನಾಗ್ ಚಿತ್ರಮಂದಿರಲ್ಲಿ ಪ್ರದರ್ಶನಗೊಂಡಿತು. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದು, ಅದು ಚಿತ್ರದ ಮೇಲಿರುವ ನಿರೀಕ್ಷೆ ಸಾಬೀತು ಮಾಡಿದೆ. ಮೂರು ವರ್ಷ ಸಮಯ ತೆಗೆದುಕೊಂಡಿದ್ದಕ್ಕೆ  ತಂಡವು ಹಲವು ಮಾಹಿತಿಗಳನ್ನು  ಬಿಚ್ಚಿಟ್ಟಿತ್ತು.  ಕಾಲ್ಪನಿಕ ಕತೆಯಲ್ಲಿ ರಕ್ಷಿತ್‌ಶಟ್ಟಿ ಪೋಲೀಸ್ ಅಧಿಕಾರಿಯಾಗಿ ಇನ್ನೂರು ದಿನ ಕೆಲಸ ಮಾಡಿದ್ದಾರೆ. ನಾಯಕಿ ಶಾನ್ವಿಶ್ರೀವಾತ್ಸವ್ ೫೫, ಅಚ್ಯುತಕುಮಾರ್ ೬೫ ದಿನಗಳ ಕಾಲ್‌ಶೀಟ್ ನೀಡಿದ್ದಾರೆ. ಖಳನಾಯಕರುಗಳಾಗಿ  ತಲಾಷ್ ಮಾಡಿ ಅಂತಿಮವಾಗಿ ಬಾಲಾಜಿಮನೋಹರ್ ಮತ್ತು ಪ್ರಮೋದ್‌ಶೆಟ್ಟಿ ಆಯ್ಕೆಯಾದರು.  ವಿಶೇಷ ಪಾತ್ರದಲ್ಲಿ ಕೊಬಾಯ್ ಕೃಷ್ಣನಾಗಿ ರಿಶಬ್‌ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ರಾಜ್ಯಕ್ಕೂ ಅನ್ವಯವಾಗುವಂತ ಕತೆ ನಡೆಯುವುದರಿಂದ ಇಂಡಿಯನ್ ಸಿನಿಮಾವೆಂದು ಬಣ್ಣಿಸಿಕೊಂಡಿದ್ದಾರೆ.  ನಿರ್ಮಾಪಕ ಪುಷ್ಕರ್‌ಮಲ್ಲಿಕಾಜುನಯ್ಯ ಪ್ರಾರಂಭದಲ್ಲಿ ಎಂಟು ಕೋಟಿ ಬಜೆಟ್‌ದಲ್ಲಿ ಮುಗಿಸಬೇಕೆಂದು ಯೋಜನೆ ಹಾಕಿದ್ದರು. ಮುಂದೆ ಅದು ಐದು ಪಟ್ಟು ಹೆಚ್ಚಾಗಿದ್ದು  ಒಟ್ಟು ಖರ್ಚು ಮೊತ್ತವನ್ನು ಗೌಪ್ಯವಾಗಿಟ್ಟಿದ್ದಾರೆ.

        ಶೇಕಡ ೯೫ರಷ್ಟು  ದೃಶ್ಯಗಳು ೧೯ ಸೆಟ್‌ನಲ್ಲಿ ಚಿತ್ರೀಕರಣವಾಗಿದ್ದು, ಉಳಿದದ್ದು ಬಿಜಾಪುರದಲ್ಲಿ ಸೆರೆಹಿಡಿಯಲಾಗಿದೆ.  ನಾಲ್ಕು ಹಾಡುಗಳ ಪೈಕಿ ಎರಡು ಗೀತೆಗಳಿಗೆ ರಾಗ ಮತ್ತು ಹಿನ್ನಲೆ ಸಂಗೀತವನ್ನು ಅಜನೀಶ್‌ಲೋಕನಾಥ್ ಒದಗಿಸಿದ್ದರೆ, ಉಳಿದಂತೆ ಚರಣ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ.   ನಿರ್ದೇಶನ,ಸಂಕಲನ, ವಿಎಫ್‌ಎಕ್ಸ್  ಸಚ್ಚಿನ್, ಛಾಯಾಗ್ರಹಣ ಕರಂಚಾವ್ಲಾ, ಕಲೆ ಉಲ್ಲಾಸ್, ಸಾಹಿತ್ಯ ನಾಗಾರ್ಜುನಶರ್ಮ, ರಚನೆ-ಚಿತ್ರಕತೆ ರಕ್ಷಿತ್‌ಶೆಟ್ಟಿ ಹಾಗೂ ದಿ ಸೆವೆನ್ ಆಡ್ಸ್ ಅವರದಾಗಿದೆ. ರೆಟ್ರೋ ಶೈಲಿಗೆ ಹೊಂದುವಂತ ವಸ್ತ್ರಗಳು, ಕಳ್ಳ-ಪೋಲೀಸ್‌ಗೆ ಪೂರಕವಾಗುವಂತೆ ಅಮರಾವತಿ ಎಂಬ ಕಾಲ್ಪನಿಕ ಊರನ್ನು ಕಟ್ಟಿಕೊಡಲು ನಿರ್ಮಿಸಲಾಗಿರುವ ಬೃಹತ್ ಸೆಟ್‌ಗಳು ಹೈಲೈಟ್ ಆಗಿದೆ. ಕಳೆದು ಹೋದ ಸಂಪತ್ತನ್ನು ಪತ್ತೆ ಹಚ್ಚಲು ಹಲವರು ನಡೆಸುವ ಉಪಾಯ ಮತ್ತು ಸಾಹಸ. ಇದನ್ನು ಕಂಡು ಹಿಡಿಯಲು ನಾಯಕ ಯಶಸ್ವಿಯಾಗುತ್ತಾನಾ ಎಂಬುದು ಸಿನಿಮಾದ ಸಾರಾಂಶವಾಗಿದೆ. ರಂಗಿತರಂಗದ ಹೆಚ್.ಕೆ.ಪ್ರಕಾಶ್ ನಿರ್ಮಾಣದಲ್ಲಿ  ಕೈಜೋಡಿಸಿದ್ದಾರೆ. ಡಿಸೆಂಬರ್ ಕೊನೆವಾರದಂದು ಏಕಕಾಲಕ್ಕೆ ರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೀಮನ್ನಾರಾಯಣ  ಚಿತ್ರಮಂದಿರದಲ್ಲಿ ಅಪ್ಪಳಿಸಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,