Elli Nanna Vilasa.Film Audio Rel.

Thursday, November 28, 2019

200

ಸ್ವಯಂ  ವಿಳಾಸ  ಹುಡುಕಿಕೊಂಡು  ಹೋದಾಗ

         ಚಂದನವನಕ್ಕೆ ಸಾಕಷ್ಟು ಹೊಸಬರು  ಸಿನಿಮಾ  ನಿರ್ಮಾಣ ಮಾಡುವ ಮೂಲಕ ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿದ್ದಾರೆ. ಈಗ ಆ ಸಾಲಿಗೆ ಉತ್ತರ ಕರ್ನಾಟಕದವರಿಂದ ‘ಎಲ್ಲಿ ನನ್ನ ವಿಳಾಸ’ ಚಿತ್ರವೊಂದು ಸದ್ದಿಲ್ಲದೆ  ತಾಳಿಕೋಟೆ, ಯಲ್ಲಾಪುರ, ಸಿರ್ಸಿ, ಬೆಂಗಳೂರು, ಮಂಗಳೂರು,ಉಡುಪಿ,  ಹುಣಸಗಿ ಕಡೆಗಳಲ್ಲಿ ಚಿತ್ರೀಕರಣವನ್ನು  ಮುಗಿಸಿದ್ದಾರೆ. ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು ಭಾಷೆಯಲ್ಲಿ ಸಿದ್ದಗೊಂಡಿದೆ. ವಿಶ್ವದಲ್ಲಿ  ಅಪ್ಪ-ಅಮ್ಮನಿಗೆ  ಬೆಲೆಕಟ್ಟಲಾಗದು. ನಾವು ಹುಟ್ಟಿದ ಮೇಲೆ  ತಂದೆ ತಾಯಿ ವಿಳಾಸವೇ  ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹ ಒಂದು ಪ್ರೀತಿಯ ಪ್ರತೀಕವಾದ ಅಡ್ರೆಸ್‌ನ್ನು ಬಿಟ್ಟು ನಮ್ಮದೆ ಆದ ವಿಳಾಸವನ್ನು ಹುಡುಕಿಕೊಂಡು ಹೊರಟಾಗ ಆಗುವ ತೊಂದರೆ, ಅನಾಹುಗಳು ಏನೆಂಬುದನ್ನು  ಸೆಸ್ಟನ್ಸ್, ಥ್ರಿಲ್ಲರ್ ಮೂಲಕ ತೋರಿಸಲಾಗಿದೆ.

       ನಾಯಕ ಅಜಯ್‌ಅದಿತ್, ಶಿವಮೊಗ್ಗದ ಪವಿತ್ರನಾಯಕ್ ನಾಯಕಿ. ಇವರೊಂದಿಗೆ ಸೂರ್ಯದೀಪ್, ಲಕ್ಕ್ಕಿರಘು, ಸಾಕ್ಷಿ, ಸುನಂದ ಮುಂತಾದವರು ಬಣ್ಣ ಹಚ್ಚಿದ್ದಾರೆ. ಸಾಗರ.ಎಸ್.ಗಾವಡೆ ನಿರ್ದೇಶಕ. ಕಿನ್ನಾಳ್‌ರಾಜು-ಶಿವು-ವಿನಯಪಾಂಡವಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ  ಮಹೇಶ್‌ಜೋಗಿ ಸಂಗೀತವಿದೆ. ಛಾಯಾಗ್ರಹಣ ಸಿ.ಎಸ್.ಸತೀಶ್, ಸಂಕಲನ ಸುಜೇಂದ್ರ, ನೃತ್ಯ ಅಕುಲ್.ಎನ್, ಸಾಹಸ ವಿ.ರಾವ್‌ದೇವ್ ಮತ್ತು  ಕುಂಘು ಫುಚಂದ್ರು ಅವರದಾಗಿದೆ. ಸೋದರನ ಸಿನಿಮಾಕ್ಕೆ ತಾಳಿಕೋಟೆಯ ಸಂತೋಷ್.ಎಸ್.ಗಾವಡೆ ಹಣ ಹೂಡಿದ್ದಾರೆ. ಇವರೊಂದಿಗೆ ಕಲಬುರ್ಗಿಯ  ಲತೀಫ್.ಎನ್.ನಧಾಫ್ ಮತ್ತು ಮಿರ್ಜಾ ನಾದೀರ್‌ಬೇಗ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.  ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಹಾಗೂ ತುಣುಕುಗಳನ್ನು  ಗಣ್ಯರುಗಳು ಅನಾವರಣಗೊಳಿಸಿ ತಂಡಕ್ಕೆ  ಶುಭಹಾರೈಸಿದರು. ಶ್ರೀ ಖಾಸ್ಗತೇಶ್ವರ ಪ್ರೊಡಕ್ಷನ್ ಮೂಲಕ ಸಿದ್ದಗೊಂಡಿರುವ ಚಿತ್ರವು ಸದ್ಯದಲ್ಲೆ  ಬಿಡುಗಡೆಯಾಗುವ ಸಾದ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,