Film RH 100.Film Press Meet.

Tuesday, November 26, 2019

108

ಪತ್ರಿಕೋದ್ಯಮ  ವಿದ್ಯಾರ್ಥಿಗಳ ಕಥನ

         ಪ್ರಚಲಿತ ವಿದ್ಯಾಮಾನದಲ್ಲಿ ಜನರು ಹಾರರ್ ಚಿತ್ರಗಳನ್ನು ಇಷ್ಟಪಡುತ್ತಾರೆ. ಅದಕ್ಕಾಗಿ ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ಬಂದಿದೆ, ಬರುತ್ತಲೇ ಇದೆ. ಈ ಸಾಲಿಗೆ ‘ಆರ್‌ಹೆಚ್ ೧೦೦’ ಸೇರ್ಪಡೆಯಾಗಿದೆ. ನಿಜವಾದ ಘಟನೆಗಳಿಂದ ಪ್ರೇರಿತವಾಗಿದ್ದು ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ಚಿತ್ರದ ಕತೆಯಲ್ಲಿ ಆರು ಪತ್ರ್ರಿಕೋದ್ಯಮ ವಿದ್ಯಾರ್ಥಿಗಳು ಕಾಡಿನಲ್ಲಿ ಏನೋ ನಡಿತಿದೆ ಎಂದು ಸಂಶೋಧನೆ ಮಾಡಲು ದಟ್ಟ ಅರಣ್ಯಕ್ಕೆ ತೆರಳುತ್ತಾರೆ. ಅಲ್ಲಿ ಆದಂಥ ಅನುಭವಗಳು ಯಾವ ರೀತಿ ಇರುತ್ತದೆ. ನೋಡುಗನಿಗೆ ಪ್ರತಿ ದೃಶ್ಯವು ಭಯ ಹುಟ್ಟುವಂತೆ ಮಾಡಿಸುತ್ತದೆ. ಇದರ ಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳು ಇರಲಿದೆ. ನಿರ್ಗತಿಕರು, ಅನಾಥರು ಇವರ ಬಗ್ಗೆ ಹೆಚ್ಚಾಗಿ ಚಿಂತಿಸುವುದಿಲ್ಲ. ಇದರ ವಿಷಯ ತೆಗೆದುಕೊಂಡಾಗ ಅದು ಎಲ್ಲಲ್ಲಿಯೋ ತೆಗೆದುಕೊಂಡು ಹೋಗುತ್ತದೆ. ಹಿಂದಿನ ಚಿತ್ರಗಳು  ಭಯ ಪಡಿಸಲಿಕ್ಕೆ ಅಂತಲೇ ಸನ್ನಿವೇಶಗಳನ್ನು ಸೃಷ್ಟಿಸಿದ್ದರು. ಇದರಲ್ಲ್ಲಿ ಆ ರೀತಿ ಮಾಡದೆ ನಿಜವಾದ  ಹಾರರ್ ಸ್ಪರ್ಶವನ್ನು ಕೊಡಲಾಗಿದೆ. ಶೀರ್ಷಿಕೆ ವಿವರ ಹೇಳಿದರೆ ಕತೆಯ ಸಾರಾಂಶ ಗೊತ್ತಾಗುವ ಕಾರಣ ತಂಡವು ಅದನ್ನು ಚಿತ್ರಮಂದರಿದಲ್ಲಿ ನೋಡಿರೆಂದು ಅವಲತ್ತು ಮಾಡಿಕೊಂಡಿದ್ದಾರೆ.

         ಬಾಗೇಪಲ್ಲಿಯ ಎಂ.ಸಿ.ಮಹೇಶ್ ಇಬ್ಬರು ನಿರ್ದೇಶಕರೊಂದಿಗೆ ಸಂವೇದನೆ ಪಡೆದುಕೊಂಡಿದ್ದು, ಈಗ ಸಾಮಾಜಿಕ ಅಂಶಗಳ ಕುರಿತಂತೆ ರಿಸರ್ಚ್ ಮಾಡಿ ಕತೆ ಬರೆದು ಆಕ್ಸನ್ ಕಟ್ ಹೇಳಿರುವುದು ಹೊಸ ಅನುಭವ. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಮತ್ತು ವಕೀಲ ಬೆಂಗಳೂರಿನ ಹರೀಶ್‌ಕುಮಾರ್.ಎಲ್  ಬಣ್ಣ ಹಚ್ಚುವುದರ ಜೊತೆಗೆ ಬಂಡವಾಳ ಹೂಡಿದ್ದಾರೆ. ತಾರಗಣದಲ್ಲಿ ಸಂಡೂರಿನ ಕಾವ್ಯತಳವಾರ್, ಕೊಡಗಿನ ಚಿತ್ರಾ, ಗಣೇಶ್, ಸೋಮಶೇಖರ್  ಮತ್ತು ಸುನಿತ್ ನಟಿಸಿದ್ದಾರೆ. ಕೊಡಚಾದ್ರಿ ಬೆಟ್ಟಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳಿಗೆ ಮೆಲ್ವಿನ್‌ಮೈಕಲ್ ಸಂಗೀತವಿದೆ.  ಸಂಕಲನ ಸಿ.ರವಿಚಂದ್ರನ್, ಛಾಯಾಗ್ರಹಣ ಕೃಷ್ಣ, ಸಾಹಸ ಕುಂಗುಫು ಚಂದ್ರು  ನಿಭಾಯಿಸಿದ್ದಾರೆ.  ಮಾತುಗಳಿಗೆ ವಿನಯ್ ಪೆನ್ನು ಕೆಲಸ ಮಾಡಿದೆ. ಚಿತ್ರವು ಸದ್ಯ ಸಿಜಿಯಲ್ಲಿ ಬ್ಯುಸಿ ಇದ್ದು, ಜನವರಿ ೨೦೨೦ರಲ್ಲಿ ತೆರೆ ಕಾಣುವ ಸಾದ್ಯತೆ ಇದೆ

 

Copyright@2018 Chitralahari | All Rights Reserved. Photo Journalist K.S. Mokshendra,