Kaalidaasa Kannada Mestru.Film Success Meet.

Tuesday, November 26, 2019

69

ಮತ್ತೋಮ್ಮೆ ನಿರ್ದೇಶಕ  ಸ್ಥಾನದಲ್ಲಿ  ಜಗ್ಗೇಶ್

        ಶುಕ್ರವಾರದಂದು ಬಿಡುಗಡೆಯಾದ  ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲೂ ಚೇತರಿಸಿಕೊಳ್ಳುತ್ತಿದೆ. ಇದರಿಂದ ಸಂತಸಗೊಂಡಿರುವ ನಿರ್ಮಾಪಕರು ಸಣ್ಣದೊಂದು ಸಂತೋಷಕೂಟವನ್ನು ಏರ್ಪಾಟು ಮಾಡಿ ಎಲ್ಲವನ್ನು ಹೇಳಿಕೊಂಡರು. ಸರದಿಯಂತೆ ಮೈಕ್ ತೆಗೆದುಕೊಂಡ ಸಾಹಿತಿ,ನಿರ್ದೇಶಕ ಕವಿರಾಜ್ ಮಾತನಾಡಿ ಬಿಡುಗಡೆ ದಿನ ಜನರು ಟಾಕೀಸಿನಲ್ಲಿ ಕಡಿಮೆ ಇರುವುದನ್ನು ಕಂಡು ಇನ್ನು ಮುಂದೆ ಹಾಡು ಬರೆಯಲಿಕ್ಕೆ ಲಾಯಕ್ಕು ಎಂದು ನಿರ್ಧಾರ ಮಾಡಿದ್ದೆ. ಮಾರನೆ ದಿವಸ ಪತ್ರಿಕೆಗಳಲ್ಲಿ ಬಂದ ವಿಮರ್ಶೆ ನೋಡಿ ಸಮಾಧಾನ ಬಂದು ನಿರ್ಣಯ ಬದಲಸಿಕೊಳ್ಳಲಾಯಿತು. ಚಿತ್ರವು ಪ್ರತಿ ಪೋಷಕರಿಗೂ ಪರಿಣಾಮ ಬೀರಿ, ಹೊರಬರುವಾಗ ಚಿಂತನೆ ನಡೆಸುತ್ತದೆ.  ನಮ್ಮ ಪ್ರಾಮಾಣಿಕ ಪ್ರಯತ್ನದ ಸಂದೇಶವು ಜನರಿಗೆ ಗಾಡವಾಗಿ ತಟ್ಟಿದೆ. ತಂದೆ ತಾಯಿ ಮಕ್ಕಳ ಬಗ್ಗೆ ಭ್ರಮೆಯಲ್ಲಿ, ಉನ್ಮಾದದಲ್ಲಿ ಓಡುತ್ತಿರುವಾಗ, ಕಾಳಿದಾಸ ಹಿಡಿದು ನಿಲ್ಲಿಸಿದೆ ಎಂದು ಭಟ್ಟರು ಹೇಳಿದ್ದಾರೆ. ನೋಡಿದವರು ಒಬ್ಬರು ಬದಲಾದರೆ ಸಾಕು ಅಂದುಕೊಂಡವನಿಗೆ, ೧೦೦೦ ಜನರು ಬದಲಾಗಿದ್ದಾರೆ. ಇನ್ನು ಮೂರು ದಿವಸ ಪ್ರದರ್ಶನ ಕಂಡರೆ ಬಂಡವಾಳ ವಾಪಸ್ಸು ಬರುತ್ತದೆಂದು ವಿತರಕರು ಹೇಳಿದ್ದಾರೆ. ಇದರಿಂದ ಧೈರ್ಯ ಬಂದು ೨-೩ ಸಿನಿಮಾಗೆ ಕತೆ ಬರೆಯಲು ಧೈರ್ಯ ಬಂದಿದೆ ಎಂದರು.

        ಪ್ರಾರಂಭದಲ್ಲಿ ಕವಿರಾಜ್ ಮೇಲೆ ಭಯಂಕರ ಕೋಪ ಬಂದಿತ್ತು. ಮುಂದೆ ಅವರ ಚಿಂತನೆ, ಕೆಲಸ ನೋಡಿದಾಗ  ನಿಜಕ್ಕೂ ಹೆಮ್ಮೆ ಆಯಿತು. ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇದರ ಮಧ್ಯೆ ಕಾಳಿದಾಸನಿಗೆ ಪ್ರತ್ಯೇಕ ಸ್ಥಾನಸಿಕ್ಕಿದೆ. ಮಾಲ್‌ಗಳು ನಮಗೆ ಕೊಡಿರೆಂದು ಬೇಡಿಕೆ ಇಟ್ಟಿದ್ದಾರೆ. ಉತ್ತಮವಾದ ಕೆಲಸಕ್ಕೆ ಪ್ರತಿಫಲ  ಸಿಗುತ್ತದೆ ಎಂಬುದಕ್ಕೆ ಸಾಕ್ಷಿ ಇದಾಗಿದೆ. ಒಂದು ಸಿನಿಮಾ ನಿಂತರೆ ನೂರು ಜನರಿಗೆ ಕೆಲಸ ಸಿಗುತ್ತದೆ. ದೇವರು ಎಲ್ಲವನ್ನು ಕೊಟ್ಟಿದ್ದಾನೆ. ಒಳ್ಳೆ ಕತೆಗಳು ಬಂದರೆ ಮಾತ್ರ ನಟಿಸುತ್ತೇನೆ. ಈ ಎಲ್ಲಾ ಕಾರಣದಿಂದ ಮತ್ತೆ ನಿರ್ದೇಶನ ಮಾಡಲು ಮನಸ್ಸು ಮಾಡಿದ್ದೇನೆಂದು ಮನದಾಳದ ಬಯಕೆಯನ್ನು ಜಗ್ಗೇಶ್ ಹೊರಹಾಕುತ್ತಾ, ಗತಕಾಲದ ನೆನಪುಗಳನ್ನು ತೆರೆದಿಟ್ಟರು.  

       ನಾನು ಸಹ ಕನ್ನಡ ಶಾಲೆಯಲ್ಲಿ ಓದಿದ್ದರಿಂದ, ಅದೇ ಶಾಲೆಯ ಮಕ್ಕಳಿಗೆ ಚಿತ್ರ ತೋರಿಸಲಾಗಿದೆ.  ಮಕ್ಕಳನ್ನು  ಬೆಳಸವ ರೀತಿ, ಸರ್ಕಾರಿ ಶಾಲೆಗಳಲ್ಲಿ ನಡೆಯುವ ಘಟನೆಗಳು ತೋರಿಸಿರುವುದರಿಂದ  ಪ್ರತಿ ತಾಲ್ಲೋಕಿನ ಪ್ರೇಕ್ಷಕರು ಇದರ ಕುರಿತಂತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಥಳಗಳಲ್ಲಿ ಮೂಲಭೂತ ಸೌಕರ್ಯ  ಇಲ್ಲದೆ ಇರುವುದರಿಂದ ಟೆಕ್ಕಿಗಳೊಂದಿಗೆ ಸರ್ಕಾರವು ಸೇರಿಕೊಂಡು ಅಭಿವೃದ್ದಿ ಪಡಿಸಲು  ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು  ನಿರ್ಮಾಪಕ ಯು.ಆರ್.ಉದಯ್‌ಕುಮಾರ್ ಅಭಿಪ್ರಾಯಪಟ್ಟರು.

     ಎರಡು ವರ್ಷದ ನಂತರ ಉತ್ತಮ ಚಿತ್ರದಲ್ಲಿ ನಟಿಸಿದೆ ಅಂತ ಸಾರ್ಥಕ ಭಾವನೆ ಬಂದಿದೆ ಎಂದು  ವೈಯಕ್ತಿಕ ವಿಷಯವನ್ನು ನಾಯಕಿ ಮೇಘನಾಗಾಂವ್ಕರ್ ಹಂಚಿಕೊಂಡರು.

        ನಿರ್ಮಾಪಕರಿಗೆ ಅಸಲು ಬಂದರೆ ಅದು ಸಕ್ಸಸ್ ಎಂದು ಬಣ್ಣಿಸಿಕೊಂಡರು ಸಂಗೀತ ನಿರ್ದೇಶಕ ಗುರುಕಿರಣ್. ಸನ್ನಿವೇಶದಲ್ಲಿ ನಾಯಕಿ ಖಿನ್ನತೆಯಿಂದ ಆತ್ನಹತ್ಯೆಗೆ ಶರಣಾಗುವ ದೃಶ್ಯ ಇದ್ದರೆ, ಪ್ರೇರಿತರಾಗಬಹದು. ಇದರಿಂದ ನಕರಾತ್ಮಕ ಅಂಶ ಸೇರಿಸಿದಂತೆ ಆಗುತ್ತದೆ. ಹೃದಯಘಾತದಿಂದ ಅಸುನೀಗಿದರೆ ಚೆನ್ನಾಗಿರುತ್ತದೆಂದು  ಮೇಘನಾ ಹೇಳಿದಂತೆ ಮಾಡಿದ್ದು ಒಳ್ಳೆಯದಾಯಿತು ಎಂದು ಗುಟ್ಟನ್ನು ನಿರ್ದೇಶಕರು ತೆರೆದಿಟ್ಟರು.

ಚಿಣ್ಣರುಗಳಾದ ಆರ್ಯ, ಗ್ರೀಷ್ಟ, ಓಂ, ಗೌತಂ, ಮನೀಷ್, ಶ್ರಾವಣಿ, ಸಹ ನಿರ್ಮಾಪಕ ಶಿವಪ್ರಸಾದ್.ಎಂ.ವಿ, ವಿತರಕ ದೀಪಕ್‌ಗಂಗಾಧರ್ ಮತ್ತು ಪರಿಮಳಜಗ್ಗೇಶ್  ಉಪಸ್ತಿತರಿದ್ದರು.

 

 

Copyright@2018 Chitralahari | All Rights Reserved. Photo Journalist K.S. Mokshendra,