Katha Sangama.Movie Press Meet.

Wednesday, November 27, 2019

66

ಚಿತ್ರಬ್ರಹ್ಮನ ಹುಟ್ಟುಹಬ್ಬಕ್ಕೆ  ಕಥಾ ಸಂಗಮ ಪ್ರೀಮಿಯರ್ ಷೋ

      ಪುಟ್ಟಣ್ಣ ಕಣಗಾಲ್ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಲು ‘ಕಥಾ ಸಂಗಮ’ ಚಿತ್ರವನ್ನು ಅವರೊಂದಿಗೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಘರಿಗೆ ಭಾನುವಾರದಂದು ವಿಶೇಷ ಪ್ರದರ್ಶನ ಏರ್ಪಡಿಸಲು ರಿಶಬ್‌ಶೆಟ್ಟಿ ಯೋಜನೆ ಹಾಕಿಕೊಂಡಿದ್ದರೆ.  ಏಳು ನಿರ್ದೇಶಕರು, ಛಾಯಾಗ್ರಾಹಕರು, ಸಂಗೀತ ನಿರ್ದೇಶಕರು ಒಕ್ಕರೂಲದಿಂದ ಕೆಲಸ ಮಾಡಿದ್ದು  ಪ್ರತಿ ಕಿರುಚಿತ್ರವು ಅಂದಾಜು ೧೮-೨೦ ನಿಮಿಷ, ಪ್ರತಿಯೊಂದಕ್ಕೂ ಶೀರ್ಷಿಕೆ ಇರಲಿದ್ದು, ಒಟ್ಟಾರೆ ಕಥಾಸಂಗಮವಾಗಿದೆ. ಮೊದಲನೆಯದು  ಮಂಗಳೂರು  ಪಟ್ಟಣದ ಹಿನ್ನಲೆಯಾಗಿದೆ. ಆರಾಮಾಗಿ ಇದ್ದ ಹುಡುಗನ ಬದುಕು ಒಂದು ಘಟನೆಯಿಂದ ಹೇಗೆ ಬದಲಾಗುತ್ತಾನೆ.  ಎರಡನಯದು  ಸಿಲಿಕಾನ್ ಸಿಟಿಯ ಬದುಕು ಹೇಗಿರುತ್ತದೆ.  ಸಂಬಂದಗಳ ಮೌಲ್ಯಗಳನ್ನು ತೋರಿಸಲಾಗಿದೆ. ಮೂರನೆಯದು  ವಿಮಾ ಕಚೇರಿಯಲ್ಲಿ ಒಂದು ದಿವಸ  ಮುಂಚೆ  ನಿವೃತ್ತಿಯಾಗುವ ನೌಕರನ ಚಡಪಡಿಕೆಯನ್ನು  ಹೇಳಲಾಗಿದೆ. ಇಬ್ಬರು  ಸಮಸ್ಯೆಗೆ ಸಿಲುಕಿಕೊಂಡು ಚರ್ಚಿಸುವ ಕಥನ ನಾಲ್ಕನೆಯದಾಗಿದೆ. 

       ಸ್ವಾತಂತ್ರ ಪೂರ್ವ ಭಾಗದ ಘಟನೆಯನ್ನು ಹೇಳುವುದು ಐದನೆಯದಾಗಿದೆ. ಆರನೆಯ  ಮೂಕಿ ಕತೆಯಲ್ಲಿ ನಾಯಿ ಸೇರಿದಂತೆ ಮೂರು ಪಾತ್ರಗಳು ಬರುತ್ತವೆ. ಪಿಹೆಚ್‌ಡಿ ವಿದ್ಯಾರ್ಥಿನಿಯು  ಮಾನಸಿಕ ಸ್ಥಿಮಿತ ಇರದ ಭಿಕ್ಷುಕ ಇದ್ದ ಸಂದಿಗ್ದ ಸ್ಥಳದಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಏನಾಗುತ್ತದೆ ಎಂಬುದು ಸಾರಾಂಶವಾಗಿದೆ. ಕೊನೆಯದರಲ್ಲಿ ಉತ್ತರ ಕನ್ನಡದಿಂದ ಹೆಂಗಸು  ಮಗನ ನೋಡಲು  ಬೆಂಗಳೂರಿಗೆ ಬಂದಾಗ ಇಲ್ಲಿ ನಡೆಯುವ ಘಟನೆಗಳು ಬಿಚ್ಚಿಕೊಳ್ಳುತ್ತದೆ. ಯುವ ತಂತ್ರಜ್ಘರ ಪ್ರತಿಭೆಯನ್ನು ಗುರುತಿಸಿರುವ ರಿಶಬ್‌ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಇವರೊಂದಿಗೆ ರಂಗಿತರಂಗ ನಿರ್ಮಾಪಕ ಹೆಚ್.ಕೆ.ಪ್ರಕಾಶ್, ಪ್ರದೀಪ್.ಎನ್.ಆರ್ ಬಂಡವಾಳ ಹೂಡಿದ್ದು, ಸುಕೇಶಿನಿ ಸಹ ನಿರ್ಮಾಪಕಿಯಾಗಿದ್ದಾರೆ. ವಿದೇಶದಲ್ಲಿ ಮಧ್ಯವರ್ತಿಗಳಿಂದ ನಿರ್ಮಾಪಕರಿಗೆ ಮೋಸವಾಗುತ್ತಿರುವುದರಿಂದ ಅಲ್ಲಿ  ಬಿಡುಗಡೆ ಮಾಡುತ್ತಿಲ್ಲವಂತೆ. ಚಿತ್ರವು ಡಿಸೆಂಬರ್ ೬ ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,