Shubam.Book Rel.

Wednesday, November 27, 2019

8

ಶುಭಂ  ಪುಸ್ತಕಕ್ಕೆ  ಸುದೀಪ್  ಪ್ರಶಂಸೆ

          ಬರವಣಿಗೆ ಒಂದು ಕಲೆಯಾದರೆ, ಓದುವುದು ಮತ್ತೋಂದು ಕಲೆಯಾಗಿರುತ್ತದೆಂದು ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೂಡು ಬರೆದಿರುವ ‘ಶುಭಂ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  ಚಿತ್ರರಂಗದ ಬಗ್ಗೆ ಪುಸ್ತಕದಲ್ಲಿ ಒಳ್ಳೆಯ ಅಂಶಗಳಿವೆ. ಸಂಪೂರ್ಣ ಮಾಹಿತಿಗಳನ್ನು ಮೊಬೈಲ್‌ನಲ್ಲಿ ಟೈಪ್ ಮಾಡಿರುವುದು   ಅಷ್ಟು ಸುಲಭವಲ್ಲ. ಇದಕ್ಕೆ ತಾಳ್ಮೆ ಬೇಕು. ಅದು ಅವರಲ್ಲಿ ಇದೆ ಎಂದರು.

       ನಾನೇನಾದರೂ ಇಂದು ಈ ಮಟ್ಟಕ್ಕೆ ಬಂದಿದ್ದೇನೆ ಎಂದರೆ ಗಣೇಶ್ ಕಾರಣ. ಅಂದು ಏನು ಇಲ್ಲದ ಸಂದರ್ಭದಲ್ಲಿ  ಪುಟ್‌ಬಾತ್‌ದಲ್ಲಿ ಇದ್ದಾಗ ಕರೆದು  ಮಾತನಾಡಿಸಿ ಕೆಲಸ  ಕೊಡಿಸಿದ್ದರು.  ಚಿತ್ರರಂಗದ ಒಳಭಾಗದ ಬಗ್ಗೆ  ಪೂರ್ಣವಿವರ ಲಭ್ಯವಿದೆ. ನಾನು ಅವರ ಬರಹಗಳ ಅಭಿಮಾನಿ. ಮುಂದೇ ಅವರದೇ ಜೀವನ ಕುರಿತ ಪುಸ್ತಕವನ್ನು ಬರೆಯುತ್ತೇನೆ. ಅವರು ಪಟ್ಟಿರುವ ಕಷ್ಟದ ಬಗ್ಗೆ ಚೆನ್ನಾಗಿ ಗೊತ್ತಿದೆ. ಇಂತಹ ದೊಡ್ಡ ಗಾತ್ರದ ಪುಸ್ತಕ ಬರೆಯಲು ನನ್ನಿಂದ ಸಾದ್ಯವಿಲ್ಲವೆಂದು  ಚಿಂತಕ, ವಾಗ್ಮಿ, ಲೇಖಕ ಮತ್ತು ಪತ್ರಕರ್ತ ರವಿಬೆಳಗೆರೆ ಗೆಳಯನ ಕುರಿತಂತೆ ಮಾತನಾಡಿದರು.

       ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ನಟಿ ತಾರ, ಸಾಲುಮರದ ತಿಮ್ಮಕ್ಕ, ಭಗವಾನ್, ಪ್ರೊ.ದೊಡ್ಡರಂಗೇಗೌಡ, ಕೆ.ಪಿ.ನಂಜುಡಿ, ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಸಿವಿ.ಶಿವಶಂಕರ್, ಮುಂತಾದವರು ಹಾಜರಿದ್ದರು. ಯಕ್ಷಗಾನ ಕಲ್ಪನೆಯಲ್ಲಿ ನಟ ಎಂಕೆ.ಮಠ ನರಸಿಂಹನ ಅವತಾರದಲ್ಲಿ  ಹಿರಣ್ಯಕಶಪು ಹೊಟ್ಟೆಯಿಂದ  ಪುಸ್ತಕವನ್ನು ಹೊರತೆಗೆದದ್ದು ವಿನೂತನವಾಗಿತ್ತು.  ದಿ ನ್ಯೂಸ್ ಪೇಪರ‍್ಸ್ ಅಸೋಸಿಯೇಶನ್ ಆಫ್ ಕರ್ನಾಟಕ ಸಂಸ್ಥೆಯು ಬುದುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ  ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸದರಿ ಪುಸ್ತಕ ಲೋಕಾರ್ಪಣೆಗೊಂಡಿತು.

 

Copyright@2018 Chitralahari | All Rights Reserved. Photo Journalist K.S. Mokshendra,