Maduve Oota.Film First Look Launch.

Friday, December 20, 2019

ಭಾರತದ  ಪ್ರಪ್ರಥಮ  ಶೂನ್ಯ  ಬಂಡವಾಳದ  ಚಿತ್ರ

      ಇಂದು ಚಂದನವನದಲ್ಲಿ ನಿರ್ಮಾಪಕರು ನಮ್ಮ ಚಿತ್ರಕ್ಕೆ ಲಕ್ಷ, ಕೋಟಿ ಖರ್ಚಾಗಿದೆ ಎಂದು  ಬೊಬ್ಬೆ ಇಡುತ್ತಿದ್ದಾರೆ.  ಪ್ರೀತಿಯೂ ಕಮರ್ಷಿಯಲ್ ಆಗಿರುವ ಕಾಲವಾಗಿದೆ.  ಸೋಜಿಗ ಎನ್ನುವಂತೆ ಯುವ ಸಮಾನ ಮನಸ್ಕರ ಸಿನಿಮಾಮೋಹಿಗಳು ಗಮಕದಿಂದ ಹಣ ಹೂಡದಯೇ ಶ್ರಮದಾನ ಮಾಡುವ  ಮೂಲಕ ‘ಮದುವೆ ಊಟ’ ಚಿತ್ರವನ್ನು  ಸೆನ್ಸಾರ್ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.  ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಬಸವಣ್ಣನವರ ವಚನ, ಸಿನಿಮಾ ತಯಾರಿಕೆಗೂ ಸಾಮ್ಯತೆ ಇದೆ. ಕಲಾವಿದರು, ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಇವೆಲ್ಲಾವನ್ನು ಉಚಿತವಾಗಿ ಮಾಡಿರುವುದರ ಬಗ್ಗೆ ಯು ಟ್ಯೂಬ್‌ದಲ್ಲಿ ಬಿಡಲಾಗಿದೆ. ಕೇವಲ ನಾಲ್ಕು ಜಾಗದಲ್ಲಿ ಶೂಟಿಂಗ್ ನಡೆಸಿದ್ದಾರೆ. ರವಿತೇಜ, ವಿಕಾಸ್‌ವಸಿಷ್ಟ ಮತ್ತು ಶ್ರೀಕಾಂತ್‌ಅತ್ರಯ  ಹಾಡುಗಳಿಗೆ ಸಂಗೀತ, ಮಧುಸೂಧನ್ ಹಿನ್ನಲೆ ಶಬ್ದ ಒದಗಿಸಿದ್ದಾರೆ. 

         ವ್ಯಾಸರ ಜನಪ್ರಿಯ ನುಡಿ ‘ಸಂಶಯಾತ್ಮ ವಿನಶ್ಯತಿ’. ಅಂದರೆ ಸಂಶಯ ಹೊಂದಿರುವವರು ನಾಶ ಆಗ್ತಾರೆ. ಅವರು ಸುಖದಿಂದ ಇರೋದಿಲ್ಲ. ಬೇರೆಯವರನ್ನು ಸಂತೋಷದಿಂದ ಇರಲು ಬಿಡುವುದಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು ಅರ್ಜುನನಿಗೆ ಹೇಳಿದ ಮಾತಿನಂತೆ  ಕಥನ ಇರಲಿದೆ. ಜೀವನವೆಲ್ಲಾ ಸಂಶಯಪಡುವ ನಾವು ಮದುವೆಯಾಗುವವರ ಯೋಚನೆ, ಆಲೋಚನೆ ಮತ್ತು ಹಿನ್ನಲೆ ಬೇರೆಯಾಗಿರುತ್ತದೆ. ಅವರ ಮೇಲೆ ಅನುಮಾನಪಟ್ಟರೆ ಬದುಕು ಎಲ್ಲಿಗೋ ತೆಗೆದುಕೊಂಡು ಹೋಗುತ್ತದೆ.  ಪ್ರಸಕ್ತ ಸಮಾಜದಲ್ಲಿ ಶೇಕಡ ೩೦ ರಷ್ಟು ಜನರು ಇದೇ ರೀತಿಯಲ್ಲಿ ಸಾಗುತ್ತಿದ್ದಾರೆ. ನಿಮಾನ್ಸ್‌ದಲ್ಲಿ ರೋಗಿಗಳು ಸಾಕಷ್ಟು ಮಂದಿ ಇದರಿಂದಲೇ ನರಳುತ್ತಿದ್ದಾರೆ. ಅಮೇರಿಕಾದಲ್ಲಿ ಒಂದಷ್ಟು ಮಂದಿ ಸೈಕಿಯಾಟ್ರಿಕ್ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಸಂಬಂದಗಳಲ್ಲಿ ಭಾವನೆಗಳ ಅಭದ್ರತೆ ಇಲ್ಲದಿದ್ದರೆ ಏನಾಗುತ್ತೆ ಎಂಬುದು ಕತೆಯ ತಿರುಳು.

         ಮಹೇಶ್‌ಲೋನಿ ರಚನೆ, ನಿರ್ದೇಶನ ಹಾಗೂ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಾರಗಣದಲ್ಲಿ ಜೈ, ಸಾವನ್, ಆಕಾಶ್, ಧರ್ಮೇಂದ್ರಅರಸ್ ಮತ್ತು ಗಾಯಿತ್ರಿ  ನಟನೆ ಇದೆ.  ತಂಡವು ಇದೆಲ್ಲಾವನ್ನು ನಿಭಾಯಿಸಿರುವುದರ ಜೊತೆಗೆ ‘ಹಳ್ಳಿಗಳನ್ನು ರಕ್ಷಿಸೋಣ’ ಎನ್ನುವ ಪರಿಕಲ್ಪನೆಯೊಂದಿಗೆ  ಮೂಲಭೂತ ಸೌಕರ್ಯ ಇಲ್ಲದ ಹಳ್ಳಿಯನ್ನು ಅಭಿವೃದ್ದಿಗೊಳಿಸಲು ಯೋಜನೆ ರೂಪಿಸಿಕೊಂಡಿದೆ. ಮೊದಲ ಹಂತವಾಗಿ ಯಾದಗಿರಿ ಜಿಲ್ಲೆಯ  ಗಂಗನಾಳ ಸ್ಥಳವನ್ನು ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಪ್ರಿ ಟಿಕೆಟ್‌ನ್ನು ಖರೀದಿಸುವವರ ಹೆಸರನ್ನು ಟೈಟಲ್ ಕಾರ್ಡ್‌ನಲ್ಲಿ ಹಾಕಲಾಗುತ್ತದಂತೆ. ಹೆಚ್ಚಿನ ವಿವರಕ್ಕೆ  ‘ಒಚಿಜuveಔoಣಚಿ.ಅom’  ವೆಬ್ ಸೈಟ್‌ನ್ನು ನೋಡಬಹುದು.

 

Copyright@2018 Chitralahari | All Rights Reserved. Photo Journalist K.S. Mokshendra,