Yaar Maga.Film Press Meet.

Saturday, December 28, 2019

1230

ಯಾರ್  ಮಗದಲ್ಲಿ ರಿಯಲ್  ರೌಡಿಗಳು

          ಓಂ,ಕರಿಯ ಚಿತ್ರದಲ್ಲಿ ರಿಯಲ್ ರೌಡಿಗಳು ನಟಿಸಿದ್ದು ಸುದ್ದಿಯಾಗಿತ್ತು. ಈಗ ‘ಯಾರ್ ಮಗ’ ಸಿನಿಮಾಕ್ಕೆ ಶಿವಾಜಿನಗರದ ರೌಡಿಗಳಾದ ತನ್ವೀರ್, ಇಸ್ತಾಕ್‌ಪೈಲ್ವಾನ್ ಮತ್ತು ಕುಟ್ಟಿರಾಜು ಅಭಿನಯಿಸುತ್ತಿರುವುದು ವಿಶೇಷ.  ೯೫-೨೦೦೦ ಇಸವಿಯಲ್ಲಿ ನಡೆಯುವ ರೌಡಿಸಂ ಕತೆಯಾಗಿದ್ದರಿಂದ ಸನ್ನಿವೇಶಗಳು ನೈಜವಾಗಿರಲೆಂದು ಇವರನ್ನು ಒಪ್ಪಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಎಲ್ಲಾ ಇದ್ದವರು ಕೆಟ್ಟ ದಾರಿಗೆ ಹೋಗುತ್ತಾರೆ. ಯಾರ ಮನೆಯಲ್ಲಿ ಇಂತಹ ಘಟನೆ ನಡಿಬಾರದು. ಇವನು ನನ್ನ ಮಗ ಅಂತ ಹೇಳಿದರೆ ಪರಿಣಾಮ ಬೇರೆನೇ ಆಗುತ್ತದೆ. ನೋಡುಗರಿಗೆ ನಮ್ಮ ಏರಿಯಾದಲ್ಲಿ ನಡೆದಂತ ಘಟನೆಗಳು ಎಂಬಂತೆ ಭಾಸವಾಗುತ್ತದೆ.  ಶೇಕಡ ೫೦ರಷ್ಟು ಘಟನೆಗಳು ಬಂದರು  ಪ್ರದೇಶದಲ್ಲಿ  ಸಾಗುವುದರಿಂದ ಬಾಂಬೆ, ಮಂಗಳೂರು ಕಡೆಗಳಲ್ಲಿ, ಉಳಿದಂತೆ ಬೆಂಗಳೂರು ಸುತ್ತಮುತ್ತ ಹೆಚ್ಚಾಗಿ ಶಿವಾಜಿನಗರದಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ಎರಡು ಬಿಡುಗಡೆಯಾಗದ ಚಿತ್ರಗಳನ್ನು ನಿರ್ದೇಶಿಸಿರುವ ಸುರೇಶ್‌ರಾಜು ಚಿತ್ರಕತೆ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಐದು ಹಾಡುಗಳನ್ನು ಪ್ರತಿಯೊಬ್ಬರಿಂದ ಸಂಗೀತ ಸಂಯೋಜಿಸಲು ಅವಕಾಶ ಮಾಡಿಕೊಡುತ್ತಿರುವುದರಿಂದ ಹೆಸರುಗಳು ಮುಂದಿನ ದಿನದಲ್ಲಿ ಲಭ್ಯವಾಗಲಿದೆ.

        ಆಲ್ಬಂ ಹಾಡಿನಲ್ಲಿ ಕಾಣಿಸಿಕೊಂಡಿದ್ದ ರಘುಪಡುಕೋಟೆ ಕತೆ ಬರೆಯುವುದರ ಜೊತೆಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಗುಣದಲ್ಲಿ ಒರಟ, ಡ್ರಗ್ಸ್ ವ್ಯಸನಿ, ಧೋರಣೆವುಳ್ಳವನು. ಕೊನೆಯಲ್ಲಿ ಎಲ್ಲವನ್ನು ಕಳೆದುಕೊಂಡು ಒಳ್ಳೆಯವನಾಗಿ ಸಮಾಜದ ಕಣ್ಣಿಗೆ ಒಳ್ಳಯೆ ಪ್ರಜೆ ಅನಿಸಿಕೊಳ್ಳುವ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಶಿಕ್ಷಣದಲ್ಲಿ ತತ್ಪರದವಳು. ಮುಂದೇ ಅದೇ  ಮುಳುವಾಗುತ್ತದೆ. ಇದರ ಮಧ್ಯೆ  ಪ್ರೀತಿಯಲ್ಲಿ ಬಿದ್ದಾಗ ಆಗುವ ಅನಾಹುತಕ್ಕೆ  ಚಡಪಡಿಸುವ ಪಾತ್ರದಲ್ಲಿ ಮಂಗಳೂರಿನ ಮಾಡಲ್  ವಿದ್ಯಾಪ್ರಭು ನಾಯಕಿ. ನಾಯಕನನ್ನು ಸಾಕುಮಗನಂತೆ ಬೆಳಸಿ, ಈಗಿನ ಸ್ಥಿತ್ಯಂತರಗಳಿಗೆ ಆತನನ್ನು ಬಳಸಿಕೊಳ್ಳುವ ದಾದಾನಾಗಿ ಬಲರಾಜ್‌ವಾಡಿ. ಇವರ ಎದುರಾಳಿಯಾಗಿ ಸುದೀರ್‌ಕಾಕ್ರೋಚ್, ಎಂದಿನಂತೆ ಇನ್ಸ್‌ಪೆಕ್ಟರ್ ಆಗಿ ಗಣೇಶ್‌ರಾವ್, ಇವರೊಂದಿಗೆ  ತಾರಾ,ಮಾಲತಿ,ಅಶ್ವಿನಿಗೌಡ, ಪ್ರಶಾಂತ್‌ಸಿದ್ದಿ, ಗುರುರಾಜಹೊಸಕೋಟೆ ಮುಂತಾದವರು  ನಟಿಸುತ್ತಿದ್ದಾರೆ.  ಛಾಯಾಗ್ರಹಣ ಸಿ.ಎಸ್.ಸತೀಶ್, ಸಂಕಲನ ಸುಜೇಂದ್ರ.ಎನ್.ಮೂರ್ತಿ, ಸಂಭಾಷಣೆಗೆ ಆರ್.ಯಶ್‌ಯಲ್ಲಾಲಿಂಗ್-ಕೆ.ಅಂಕೀತ್‌ಕುಮಾರ್ ಮತ್ತು  ಗುರುಪ್ರಸಾದ್ ಪೆನ್ನು ಕೆಲಸ ಮಾಡುತ್ತಿದೆ. ಯೌವ್ವನದಲ್ಲಿ  ನಾಯಕನಾಗಬೇಕೆಂದು ಬಯಸಿದ್ದ  ರಾಯಚೂರಿನ ಬಸವರಾಜ್ ಪಡಕೋಟೆ ಚಿಕ್ಕಂದಿನಿಂದಲೂ  ಡಾ.ರಾಜ್‌ಕುಮಾರ್ ಅಭಿಮಾನಿ. ಬದುಕಿಗಾಗಿ ಬೆಂಗಳೂರಿಗೆ  ಬಂದು ಕನ್ನಡ ಸಂಘ ಕಟ್ಟಿ, ಒಂದು  ಹಂತಕ್ಕೆ ಬಂದಿರುವುದಿರಿಂದ ಮಗನನ್ನು ಹೀರೋ ಮಾಡಿ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ. ಭಾನುವಾರ ಗಣೇಶ ದೇವಸ್ಥಾನದಲ್ಲಿ ಮಹೂರ್ತ ನಡೆದ ನಂತರ ರಾಷ್ಟ್ರಕವಿ ಕುವೆಂಪು ಹುಟ್ಟಹಬ್ಬದಂದು ಕುವೆಂಪು ರಂಗಮಂದಿರದಲ್ಲಿ ಗಣ್ಯರ ಸಮ್ಮುಖದಲ್ಲಿ  ಅದ್ದೂರಿ ಸಮಾರಂಭವು ನಡೆಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,